ಬೆಂಗಳೂರು: ಅನ್ನಭಾಗ್ಯ ಯೋಜನೆಗೆ (Anna Bhagya Scheme) ಅಕ್ಕಿ ನೀಡದ ಕೇಂದ್ರ ಸರ್ಕಾರ ಧರ್ಮದ ಹೆಸರಲ್ಲಿ ಅಕ್ಷತೆಯ (Mantrakshate) ಗಂಟನ್ನು ಮನೆ ಮನೆಗೆ ಕಳಿಸುತ್ತಿರುವುದು ನೈಜ ಧರ್ಮದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ (Mahadevappa) ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ (Social Media) ಈ ಸಂಬಂಧ ಕೇಂದ್ರ ಸರ್ಕಾರ ನಡೆಯನ್ನು ವಿರೋಧಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ತಲುಪಿತು 2,400 ಕೆ.ಜಿಯ ದೇಶದ ಅತೀ ದೊಡ್ಡ ಘಂಟೆ
Advertisement
Advertisement
ಪೋಸ್ಟ್‌ನಲ್ಲಿ ಏನಿದೆ?
ಹಸಿವು ಮುಕ್ತ ಕರ್ನಾಟಕದ (Karnataka) ಉದ್ದೇಶದಿಂದ ಜಾರಿಗೊಳಿಸಿದ್ದ ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಹಣ ನೀಡಿ ಕೊಂಡುಕೊಳ್ಳುತ್ತೇವೆ ಎಂದಾಗಲೂ ಕೇಂದ್ರದಿಂದ ಅಕ್ಕಿ ನೀಡದವರು ಈ ದಿನ ಧರ್ಮದ ಹೆಸರಲ್ಲಿ ಅಕ್ಷತೆಯ ಗಂಟನ್ನು ಮನೆ ಮನೆಗೆ ಕಳಿಸುತ್ತಿರುವುದು ನೈಜ ಧರ್ಮದ ಕಲ್ಪನೆಗೆ ವಿರುದ್ಧವಾಗಿದೆ. ಬಡವರ ಹಸಿವಿಗೆ ಅನ್ನ ನೀಡುವುದಕ್ಕಿಂತಲೂ ದೊಡ್ಡ ಧರ್ಮ ಇದೆಯೇ?
Advertisement
ಬಡವರ ಹಸಿವಿಗೆ ನೀಡುವ ಅನ್ನದ ವಿಷಯದಲ್ಲೂ ರಾಜಕೀಯ ಮಾಡುವಂತಹ ಅಮಾನವೀಯ ಪ್ರವೃತ್ತಿ ತೋರಿದ ಇವರು ಧರ್ಮದ ಕುರಿತಂತೆ ಮಾತನಾಡುತ್ತಿದ್ದರೆ ಅದನ್ನು ಕಂಡು ನಗಬೇಕೋ ಅಳಬೇಕೋ ಎಂದು ನನಗೆ ತಿಳಿಯುತ್ತಿಲ್ಲ. ಇದನ್ನೂ ಓದಿ: 8 ಕೆಜಿ ಬೆಳ್ಳಿ ಪಾದುಕೆ ಹೊತ್ತು 7,200 km ಪಾದಯಾತ್ರೆ – 64ರ ವೃದ್ಧನ ಭಕ್ತಿಗೆ ರಾಮನ ಭಕ್ತರಿಂದ ಮೆಚ್ಚುಗೆ
Advertisement