ಲಕ್ನೋ: ಹಿಂದೂ ಧಾರ್ಮಿಕ ಪಠ್ಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ (Chandra Shekhar) ವಿರುದ್ಧ ಅಯೋಧ್ಯೆ ಸ್ವಾಮೀಜಿಗಳು, ಅರ್ಚಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಂದ್ರಶೇಖರ್ ನಾಲಿಗೆ ತಂದವರಿಗೆ 10 ಕೋಟಿ ರೂ. ಬಹುಮಾನ ನೀಡಲಾಗುವುದು ಎಂದು ತಪಸ್ವಿ ಚಾವ್ನಿಯ ಮಹಂತ ಪರಮಹಂಸ ದಾಸ್ (Mahant Paramhans Das) ತಿಳಿಸಿದ್ದಾರೆ.
ಬುಧವಾರ ಕಾರ್ಯಕ್ರಮವೊಂದರಲ್ಲಿ ಸಚಿವ ಚಂದ್ರಶೇಖರ್, ಹಿಂದೂ ಗ್ರಂಥಗಳ ವಿರುದ್ಧ ಹೇಳಿಕೆ ನೀಡಿದ್ದರು. ರಾಮಚರಿತಮಾಸ (Ramcharitmanas) ಮತ್ತು ಮನುಸ್ಮೃತಿ (Manusmriti) ಸಮಾಜವನ್ನು ವಿಭಜಿಸುವ ಮತ್ತು ದ್ವೇಷವನ್ನು ಹರಡುವ ಗ್ರಂಥಗಳಾಗಿವೆ ಎಂದು ಚಂದ್ರಶೇಖರ್ ಮಾತನಾಡಿದ್ದರು. ಇದನ್ನೂ ಓದಿ: ರಾಮಚರಿತಮಾನಸ ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ – ಶಿಕ್ಷಣ ಸಚಿವ ಚಂದ್ರಶೇಖರ್ ವಿವಾದಾತ್ಮಕ ಹೇಳಿಕೆ
Advertisement
Advertisement
ಸಚಿವರ ಹೇಳಿಕೆಗೆ ಅಯೋಧ್ಯೆ ಸ್ವಾಮೀಜಿ ದಾಸ್ ಅವರು ಕಿಡಿ ಕಾರಿದ್ದಾರೆ. ಚಂದ್ರಶೇಖರ್ ಅವರ ನಾಲಿಗೆ ತಂದವರಿಗೆ 10 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿದ್ದಾರಲ್ಲದೇ, ಅಂತಹ ಸಚಿವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
Advertisement
ಸಚಿವರ ಹೇಳಿಕೆಗೆ ರಾಮಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಯಾರೂ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: 50 ದಿನ ಟ್ರಿಪ್, 27 ನದಿ ಮಾರ್ಗವಾಗಿ ಯಾನ, 5 ಸ್ಟಾರ್ ಹೋಟೆಲ್ ಸಿಸ್ಟಮ್ – ʼಎಂವಿ ಗಂಗಾ ವಿಲಾಸ್ʼ ವೈಶಿಷ್ಟ್ಯ ಗೊತ್ತಾ?
Advertisement
ಜಗದ್ಗುರು ಪರಮಹಂಸ ಆಚಾರ್ಯ ಅವರು ಮಾತನಾಡಿ, ಚಂದ್ರಶೇಖರ್ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಸಚಿವರ ಹೇಳಿಕೆಯಿಂದ ಇಡೀ ದೇಶಕ್ಕೆ ನೋವಾಗಿದೆ ಎಂದು ಬೇಸರಿಸಿದ್ದಾರೆ. ಅಲ್ಲದೇ, ರಾಮಚರಿತಮಾನಸ ಗ್ರಂಥವು ಜನಪರ ಮತ್ತು ಮಾನವೀಯತೆ ಪ್ರತಿಪಾದಿಸುವ ಆಶಯಗಳನ್ನು ಒಳಗೊಂಡಿದೆ ಎಂದಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k