ವಿಜಯಪುರ: ಇನ್ನೊಂದು ವರ್ಷದಲ್ಲಿ ಅಯೋಧ್ಯೆಯ ರಾಮಮಂದಿರ (Ayodhya Ram Mandir) ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Pejawar shree) ಹೇಳಿದ್ದಾರೆ.
ವಿಜಯಪುರದಲ್ಲಿ (Vijayapura) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ. ಇದೇ ಕಾರಣಕ್ಕೆ ಮಳೆ ಬಂದಾಗ ಮಂದಿರ ಸೋರಿದೆ. ಇನ್ನೂ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸಹಿಷ್ಣು ಆಗಿರುವವರನ್ನು ಕೆದಕುವುದು ಕೆಲವರ ಚಾಳಿ – ರಾಹುಲ್ ಹೇಳಿಕೆಗೆ ಪೇಜಾವರ ಶ್ರೀ ಕಿಡಿ
ಇಂದು ರಾಜಕೀಯ ಪಕ್ಷಗಳಿಂದ ಜಾತಿ ವ್ಯವಸ್ಥೆ ಸಮಸ್ಯೆಯಾಗಿದೆ. ಆಯಾ ಪಂಗಡಗಳಿಗೆ ಅನ್ಯಾಯವಾದಾಗ ಆ ಪಂಗಡಗಳ ಮಠಾಧಿಪತಿ ಗಳು ವಿರೋಧಿಸುತ್ತಾರೆ. ಜಾತಿ ಆಧಾರದ ಮೇಲೆ ಸೀಟು, ಟಿಕೆಟ್ ಹಾಗೂ ನಿಗಮ ಮಂಡಳಿ ನೀಡುವುದಾದರೆ, ಮಠಾಧೀಶರು ಮಾತಾಡುವುದು ಸರಿ, ಮೊದಲು ಅಲ್ಲಿ ಸರಿಯಾಗಲಿ, ಆಗ ಇಲ್ಲಿ ಸರಿಯಾಗುತ್ತದೆ. ಆಧಿಕಾರದಲ್ಲಿ ಸಂವಿಧಾನ ಬದ್ಧವಾಗಿ ಕಾನೂನು ಬದ್ಧವಾಗಿ ಆಡಳಿತ ಮಾಡಬೇಕು ಎಂದು ಅವರು ಸಲಹೆ ನಿಡಿದ್ದಾರೆ.
ಚುನಾಯಿತವಾಗಿ ಬಂದ ಬಳಿಕ ಯಾವುದೇ ಒಂದು ಪಕ್ಷದ ಸರ್ಕಾರ ಆಗಲ್ಲಾ. ಅದು ಎಲ್ಲರ ಸರ್ಕಾರವಾಗುತ್ತದೆ. ನಮ್ಮ ಪಕ್ಷ, ಪ್ರತಿಪಕ್ಷ ಎಂದು ಸರ್ಕಾರ ತಾರತಮ್ಯ ಮಾಡುವುದು ಸರಿಯಲ್ಲ ಎಂದಿದ್ದಾರೆ. ಇದನ್ನೂ ಓದಿ: ʻವಿಶ್ವʼವಿಜಯಯಾತ್ರೆಗೆ ವರುಣ ಅಡ್ಡಿ – ಮಳೆಯಲ್ಲೂ ಕುಗ್ಗದ ಟೀಂ ಇಂಡಿಯಾ ಅಭಿಮಾನಿಗಳ ಉತ್ಸಾಹ