ಅಯೋಧ್ಯೆ: ಸಾಮಾನ್ಯ ಪ್ರಜೆಯ ಮಾತನ್ನೂ ಬಹಳ ಗೌರವದಿಂದ ಕಾಣುತ್ತಿದ್ದ ರಾಮನ ಆದರ್ಶದಂತೆ, ಅಯೋಧ್ಯೆಯೆ ರಾಮ ಜನ್ಮಭೂಮಿ ಟ್ರಸ್ಟ್ (Ramjanmabhoomi Trust) ಸಾಮಾನ್ಯ ಭಕ್ತರ ಅಸಮಾಧಾನವನ್ನೂ ತಣಿಸಲು ಮುಂದಾಗಿದೆ.
ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಇಷ್ಟು ದಿನ ತಾರತಮ್ಯದ ಆರೋಪ ಕೇಳಿ ಬರುತ್ತಿತ್ತು. ಇದೀಗ ಭಕ್ತರ ಅಸಮಾಧಾನ ತಣಿಸಲು ಅಯೋಧ್ಯೆ ಶ್ರೀರಾಮಜನ್ಮಭೂಮಿ ಟ್ರಸ್ಟ್ ಮೂರು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ. ಅದರಂತೆ ರಾಮಮಂದಿರಕ್ಕೆ ಬರುವ ಪ್ರಮುಖರಿಗೆ, ಸೆಲೆಬ್ರಿಟಿಗಳಿಗೆ ತಿಲಕ ಇಡುವ ಕೆಲಸವನ್ನು ಅರ್ಚಕರು ಮಾಡುವಂತಿಲ್ಲ. ಬಾಲರಾಮನ ಚರಣಾಮೃತವನ್ನು ಯಾರಿಗೂ ನೀಡಬಾರದು. ಹಾಗೆಯೇ, ಮಂದಿರದ ಅರ್ಚಕರಿಗೆ ಯಾರೂ ಹಣ ನೀಡುವ ಹಾಗಿಲ್ಲ ಎಂಬ ಮಹತ್ವದ ನಿರ್ಧಾರವನ್ನು ಟ್ರಸ್ಟ್ ಮಾಡಿದೆ. ಇದನ್ನೂ ಓದಿ: ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಕೇಸ್- ಸೂರಜ್ ರೇವಣ್ಣಗೆ ನ್ಯಾಯಾಂಗ ಬಂಧನ
Advertisement
Advertisement
ದೇಗುಲಕ್ಕೆ ಬರುವ ಭಕ್ತರು ದೇಣಿಗೆ ರೂಪದಲ್ಲಿ ದೇವಾಲಯದ ಆಡಳಿತ ಮಂಡಳಿಗೆ ಹಣ ನೀಡಬಹುದು. ಈ ಮೂಲಕ ರಾಮಮಂದಿರಕ್ಕೆ ಬರುವ ಭಕ್ತರೆಲ್ಲಾ ಸಮಾನರು ಎಂಬ ಸಂದೇಶವನ್ನು ಟ್ರಸ್ಟ್ ಸಾರಿದೆ. ಇದನ್ನೂ ಓದಿ: ಸೋಮವಾರದಿಂದ ಲೋಕಸಭಾ ಅಧಿವೇಶನ – ಯಾವ ದಿನ ಏನು ನಡೆಯುತ್ತದೆ?