– ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠೆ ದಿನದ ಕಾರ್ಯಕ್ರಗಳೇನು?
– ಮೋದಿ ಉಪವಾಸದ ರಹಸ್ಯವೇನು?
– ಸರಯು ನದಿಯಲ್ಲಿ ಮೋದಿ ಪುಣ್ಯ ಸ್ನಾನ
ಅಯೋಧ್ಯೆ (ರಾಮಮಂದಿರ): ಕೋಟ್ಯಂತರ ರಾಮಭಕ್ತರ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನೆಯನ್ನು ಕಣ್ತುಂಬಿಕೊಂಡು ಪುನೀತರಾಗಲು ದೇಶಾದ್ಯಂತ ಹಿಂದೂಗಳು ಕಾತರರಾಗಿದ್ದಾರೆ. ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟನೆ ಮಾಡಲಿದ್ದು, ಆ ಮಹತ್ವದ ದಿನ ವಿಶೇಷ ವ್ರತ ಕೈಗೊಳ್ಳಲಿದ್ದಾರೆ.
Advertisement
Advertisement
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಅದ್ಧೂರಿಯಾಗಿ ನೆರವೇರಲಿದೆ. ಅಂದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಜೊತೆಗೆ ವಿಶೇಷ ಹೋಮ-ಹವನ ಜರುಗಲಿದೆ. ಉದ್ಘಾಟನೆ ದಿನ ಪ್ರಧಾನಿ ಮೋದಿ ಅವರು ಉಪವಾಸ ಕೈಗೊಳ್ಳಲಿದ್ದಾರೆ. ಅದೊಂದು ಏನೂ ತಿನ್ನುವುದು ಬೇಡ ಎಂದು ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಾಲರಾಮನ ಮೂರ್ತಿ ಹೇಗಿರಲಿದೆ – ಕುತೂಹಲದ ಪ್ರಶ್ನೆಗೆ ಜ.22 ರಂದು ಸಿಗಲಿದೆ ಉತ್ತರ
Advertisement
Advertisement
ರಾಮಮಂದಿರ ಉದ್ಘಾಟನೆಗೂ ಮೊದಲು ಅಂದರೆ ಜ.16 ರಂದು ಪ್ರಧಾನಿ ಮೋದಿ ಅವರ ಸಂಕಲ್ಪ ಅಕ್ಷಿತ ಅಯೋಧ್ಯೆಗೆ ಕೊಂಡೊಯ್ಯಲಾಗುತ್ತದೆ. ಅಕ್ಷತಾ ಬಂದ 7 ದಿನಗಳ ಬಳಿಕ ಆಚರಣೆ ಪ್ರಾರಂಭವಾಗುತ್ತದೆ. ಇದೇ ವೇಳೆ ನಾಲ್ಕು ವೇದಗಳ ಎಲ್ಲ ಶಾಖೆಗಳ ಭಕ್ತಿ, ಯಾಗ ನಡೆಯುತ್ತದೆ.
ಮೋದಿ ಉಪವಾಸ ರಹಸ್ಯ
ಪ್ರಧಾನಿ ಮೋದಿ ಅವರು ಅಪ್ಪಟ ದೈವ ಭಕ್ತರು. ಅವರು ಉಪವಾಸ ಮಾಡುವುದು ಇದೇ ಮೊದಲೇನು ಅಲ್ಲ. ಪ್ರತಿ ವರ್ಷ ನವರಾತ್ರಿಯಂದು ಮೋದಿ ತಪ್ಪದೇ ಉಪವಾಸ ಮಾಡುತ್ತಾರೆ. ಚೈತ್ರ ನವರಾತ್ರಿಯ ಶುಭ ಸಂದರ್ಭದಲ್ಲಿ 9 ದಿನಗಳ ಉಪವಾಸ ಮಾಡುತ್ತಿದ್ದರು. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಯಂದು ಪಿಂಕ್ ಸಿಟಿ ಜೈಪುರದಲ್ಲಿ ಮಾಂಸ, ಮದ್ಯದಂಗಡಿ ಬಂದ್
ಒಂಬತ್ತು ದಿನಗಳ ಉಪವಾಸದ ಸಮಯದಲ್ಲಿ ಪ್ರಧಾನಿ ಮೋದಿ ಅವರು ಸಂಜೆ ವೇಳೆ ಒಂದು ಹಣ್ಣನ್ನು ನಿಂಬೆ ರಸದೊಂದಿಗೆ ಸೇವಿಸುತ್ತಿದ್ದರು. ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳ ಸೇವನೆಯನ್ನು ಈ ಸಂದರ್ಭದಲ್ಲಿ ತಪ್ಪಿಸುತ್ತಿದ್ದರು. ಕಳೆದ 35 ವರ್ಷಗಳಿಂದ ನವರಾತ್ರಿಯಲ್ಲಿ ಉಪವಾಸ ಮಾಡುತ್ತಿದ್ದೇನೆ ಎಂದು ಪ್ರಧಾನಿ 2012 ರಲ್ಲಿ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು.
ಪ್ರಾಣ ಪ್ರತಿಷ್ಠಾಪನಾ ದಿನದ ಕಾರ್ಯಕ್ರಮಗಳೇನು?
ಜ.22 ರಂದು ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು. ಆ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆ ಗರ್ಭಗುಡಿಯಲ್ಲಿ ಯುಪಿ ಗವರ್ನರ್ ಆನಂದಿ ಬೆನ್ ಪಟೇಲ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ರಾಮಮಂದಿರ ಮುಖ್ಯ ಆಚಾರ್ಯ ಸತ್ಯೇಂದ್ರ ಅವರು ಉಪಸ್ಥಿತರಿರಲಿದ್ದಾರೆ. ಈ ಐವರು ಗಣ್ಯರನ್ನು ಹೊರತುಪಡಿಸಿ ಉಳಿದವರಿಗೆ ಯಾರಿಗೂ ಆ ದಿನ ಗರ್ಭಗುಡಿ ಪ್ರವೇಶ ಇರುವುದಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ರಾಮಲಲ್ಲಾ ಮೂರ್ತಿ ಆಯ್ಕೆ ಅಂತಿಮವಾಗಿಲ್ಲ – ಟ್ರಸ್ಟ್‌ನಿಂದ ಸ್ಪಷ್ಟನೆ
ಸರಯು ನದಿಯಲ್ಲಿ ಮೋದಿ ಪುಣ್ಯ ಸ್ನಾನ
ರಾಮಮಂದಿರ ಉದ್ಘಾಟನೆಗೆ ಮುನ್ನಾ ದಿನ ಅಂದರೆ ಜ.21 ರಂದು ಪ್ರಧಾನಿ ಮೋದಿ ಅಯೋಧ್ಯೆಗೆ ತೆರಳಲಿದ್ದಾರೆ. ಮರುದಿನ ಜ.22 ರಂದು ಬೆಳಗ್ಗೆ ಸರಯು ನದಿಯಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ. ಸಂಪ್ರದಾಯದ ಪ್ರಕಾರ ಪ್ರಾಣ ಪ್ರತಿಷ್ಠೆಯ ದಿನದಂದು ಮೋದಿ ಉಪವಾಸ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ.
ಅಯೋಧ್ಯೆ ಶುಭಕಾರ್ಯಕ್ಕೆ ಬೇಕು ಹನುಮನ ಅನುಮತಿ
ಭಗವಾನ್ ಹನುಮಂತನು ಅಯೋಧ್ಯೆಯ ರಾಜನಾಗಿ ಕುಳಿತಿದ್ದಾನೆ ಎಂಬ ನಂಬಿಕೆ ಇದೆ. ಹನುಮನ ಅನುಮತಿಯಿಲ್ಲದೆ ಇಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಈ ನಂಬಿಕೆಯಿಂದಾಗಿ ಪ್ರಧಾನಿಯವರು ಮೊದಲು ಹನುಮಾನ್‌ಗರ್ಹಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅನುಮತಿ ಪಡೆದು ನಂತರ ರಾಮ ಜನ್ಮಭೂಮಿಗೆ ತೆರಳಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪಿಸುತ್ತಾರೆ ಎನ್ನಲಾಗಿದೆ. ವಾಲ್ಮೀಕಿ ರಾಮಾಯಣದಲ್ಲಿಯೂ ಸಹ ಶ್ರೀರಾಮನು ಸಾಕೇತ್ ಧಾಮಕ್ಕೆ ಹೋಗುವ ಮೊದಲು ಹನುಮಂತನಿಗೆ ಪಟ್ಟಾಭಿಷೇಕ ಮಾಡಿದನೆಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: Ram Mandir: ಅಯೋಧ್ಯೆ ರಾಮಮಂದಿರಕ್ಕೆ 24 ಅರ್ಚಕರು – ಇಬ್ಬರು SC, ಒಬ್ಬರು OBC ವರ್ಗದವರು ಆಯ್ಕೆ
ಪ್ರಾಣ ಪ್ರತಿಷ್ಠಾ ಮಹೋತ್ಸವದ ವಿಧಿವಿಧಾನಗಳು ಜನವರಿ 16 ರಿಂದ ಪ್ರಾರಂಭವಾಗಿದೆ. ಜನವರಿ 22 ರಂದು ದೇವಾಲಯದ ಉದ್ಘಾಟನೆಯು ಪ್ರಧಾನಿ ಮೋದಿ ಮೊದಲು ಪ್ರತಿಜ್ಞೆ ಸ್ವೀಕರಿಸಿ ದೇಶಕ್ಕೆ ಸಮರ್ಪಿಸುವುದರೊಂದಿಗೆ ಪ್ರಾರಂಭವಾಗಲಿದೆ. ನಂತರ ಅವರು ರಾಮಲಲ್ಲಾರ ‘ಷೋಡಶೋಪಚಾರ’ ಪೂಜೆ ಮಾಡುತ್ತಾರೆ.