– ರಾಮಜನ್ಮಭೂಮಿ ಮೇಲೆ ಹಕ್ಕಿ ಹಾರೋದಕ್ಕೂ ಬಿಡಲ್ಲ ಎಂದಿದ್ದರು, ಇಂದು ಭವ್ಯ ರಾಮಮಂದಿರ ನಿರ್ಮಾಣದ ಖುಷಿ
– ಪಬ್ಲಿಕ್ ಟಿವಿ ಜೊತೆ ಅಯೋಧ್ಯೆಯ ಕರಸೇವೆಯಲ್ಲಿ ಭಾಗಿಯಾಗಿದ್ದ ಉಡುಪಿಯ ಶ್ಯಾಮ್ ಪ್ರಸಾದ್ ಕುಡ್ವ ಮಾತು
ದೀಪಕ್ ಜೈನ್
Advertisement
ಉಡುಪಿ: ಅಯೋಧ್ಯೆ ಶ್ರೀರಾಮಮಂದಿರ ಸ್ಥಾಪನೆಗೆ (Ayodhya Ram Mandir) 1990ರಲ್ಲಿ ನಡೆದ ಹೋರಾಟ ಮಹತ್ವದ್ದು. ಕರಸೇವೆಯಲ್ಲಿ ತೊಡಗಿದ ಹಲವಾರು ಜನ ರಾಜ್ಯದ ದೇಶದ ಬೇರೆ ಬೇರೆ ಕಡೆಗಳಲ್ಲಿ ಇದ್ದಾರೆ. ಉಡುಪಿಯಿಂದ ಕೂಡ ಹಲವಾರು ಜನ ಅಯೋಧ್ಯೆಯ ಕರಸೇವೆಯಲ್ಲಿ ಭಾಗಿಯಾಗಿದ್ದರು. ಈ ಪೈಕಿ ಉಡುಪಿಯ ಶ್ಯಾಮ್ ಪ್ರಸಾದ್ ಕುಡ್ವ ಕೂಡ ಒಬ್ಬರು.
Advertisement
Advertisement
1990ರ ದಿನಗಳನ್ನು ಪಬ್ಲಿಕ್ ಟಿವಿ ಪ್ರತಿನಿಧಿ ದೀಪಕ್ ಜೈನ್ ಜೊತೆ ಮೆಲುಕು ಹಾಕುತ್ತಾ, ತಮ್ಮ ಅಂದಿನ ಹೋರಾಟ ಹೇಗಿತ್ತು, ಹೋಗಿದ್ದು ಹೇಗೆ ಇತ್ಯಾದಿ ವಿವರಗಳನ್ನು ಮುಂದಿಟ್ಟರು ಶ್ಯಾಮ್ ಪ್ರಸಾದ್ ಕುಡ್ವ. ಇದನ್ನೂ ಓದಿ: ಜನವರಿ 23ರಿಂದ ಅಯೋಧ್ಯೆಯಲ್ಲಿ 48 ದಿನ ಮಂಡಲೋತ್ಸವ – ಉಡುಪಿ ಪೇಜಾವರ ಶ್ರೀಗಳ ನೇತೃತ್ವ
Advertisement
ಮಂಗಳೂರಿನ ಸಂಘನಿಕೇತನದಿಂದ ಹೊರಟು…:
1990 ಅಕ್ಟೋಬರ್ 27ರ ಕರ ಸೇವೆಗೆ ನಮಗೆ ಸೂಚನೆ ಬಂದಿತ್ತು. ಉತ್ತರಪ್ರದೇಶ ಕಡೆ ಮಂಗಳೂರಿನ ಸಂಘ ನಿಕೇತನದಿಂದ ನಮ್ಮ ತಂಡ ಹೊರಟಿತು. ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಎಲ್ಲ ತಯಾರಿಗಳನ್ನು ಮಾಡಿಕೊಂಡು ತಲುಪಿದೆವು. ರೈಲು ದೆಹಲಿ ತಲುಪುತ್ತಿದ್ದಂತೆ ನಮಗೆ ಹಲವಾರು ಕಂಟಕಗಳು ಒಂದೊಂದಾಗಿ ಎದುರಾಯಿತು. ಕೆಲ ರೈಲುಗಳನ್ನು ದೆಹಲಿ ತಲುಪುವ ಮೊದಲೇ ತಡೆದರು. ಮಾರ್ಗವನ್ನು ಬದಲಿಸಿದರು. ಇಡೀ ರೈಲಿಗೆ ರೈಲು ಸಂಚಾರ ಬದಲಾವಣೆ ಮಾಡುತ್ತಿದ್ದರು. ಡೈವರ್ಶನ್‌ಗಳನ್ನು ಮಾಡಿ, ನಮ್ಮ ಹೋರಾಟವನ್ನು ಹತ್ತಿಕ್ಕಲು ಆರಂಭಿಸಿದರು. ದೇಶದ ಮೂಲೆ ಮೂಲೆಗಳಿಂದ ಹೊರಡುತ್ತಿದ್ದ ರೈಲುಗಳನ್ನೇ ಬಂದ್ ಮಾಡಿದ ಘಟನೆಗಳು ಕೂಡ ನಡೆದಿತ್ತು.
ಹಿಂದೂ ವಿರೋಧಿ ಮಲಯಂ ಸಿಂಗ್ ಸರ್ಕಾರ ನಮ್ಮ ಕರ ಸೇವೆ ಚಳುವಳಿಯನ್ನು ಹತ್ತಿಕ್ಕಲು ಎಲ್ಲಾ ರೀತಿ ಪ್ರಯತ್ನಗಳನ್ನು ಮಾಡಿತ್ತು. ಶ್ರೀರಾಮಮಂದಿರದ ಆಸುಪಾಸಿನಲ್ಲಿ ಒಂದು ಹಕ್ಕಿಯನ್ನು ಹಾರಲು ನಾನು ಬಿಡಲಾರೆ ಎಂದು ಹೇಳಿದ ಆ ವ್ಯಕ್ತಿಗೆ ದೇಶದ ಇಡೀ ಹಿಂದೂ ಸಮಾಜ ಸವಾಲಾಗಿತ್ತು. ಲಕ್ಷಾಂತರ ಜನ ಒಂದೇ ಬಾರಿಗೆ ಉತ್ತರಪ್ರದೇಶದ ಸುತ್ತಲಿಂದ ನುಗ್ಗಿದೆವು. ಸರ್ಕಾರ ಆ ಕಾಲದಲ್ಲಿ ಹಲವರನ್ನು ಗುಂಡಿಟ್ಟು ಕೊಂದಿದೆ. ಹಿಂದೂ ದ್ವೇಷಿ, ಹಿಂದೂ ವಿರೋಧಿ ಎಂದು ಆ ಸರ್ಕಾರ ಸಾಕಷ್ಟು ಬಾರಿ ಸಾಬೀತು ಮಾಡಿತ್ತು. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆ ವೇಳೆ ಕನ್ನಡದ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಹಾಡು ಪ್ರಸಾರ
ಟಿಯರ್ ಗ್ಯಾಸ್, ಮಾರಾಮಾರಿ, ಜಲಫಿರಂಗಿ..!
ರೈಲಿನಲ್ಲಿ ಹೋಗುತ್ತಾ ಅಲ್ಲಲ್ಲಿ ಕರ ಸೇವಕರ ಜೊತೆ ಜಟಾಪಟಿ, ಗುಂಡಿನ ಹಾರಾಟ, ಗಲಾಟೆಗಳು ನಡೆಯುತ್ತಿದ್ದದ್ದನ್ನು ನಾನು ಗಮನಿಸಿದ್ದೇನೆ. ಟಿಯರ್ ಗ್ಯಾಸ್‌ಗಳು, ಮಾರಾಮಾರಿ – ಜಲ ಫಿರಂಗಿಗಳು ಎಲ್ಲವೂ ನಮ್ಮ ಕಣ್ಣ ಮುಂದೆ ನಡೆಯುತ್ತಿತ್ತು. ಇಡೀ ಉತ್ತರ ಪ್ರದೇಶ ಒಂದು ಪ್ರಕ್ಷುಬ್ಧ ವಾತಾವರಣವಾಗಿ ಹೊರಹೊಮ್ಮಿತ್ತು.
ಮಹಾರಾಷ್ಟ್ರ ರಾಜ್ಯದ ಸೀತಾಗಢ ದಾಟಿ ಡೈಮಂಡ್ ಗಂಜ್ ಎಂಬಲ್ಲಿಂದ ನಾವು ಪ್ರವೇಶ ಮಾಡಬೇಕಿತ್ತು. ಡೈಮಂಡ್ ಗಂಜ್ ಪ್ರದೇಶದಲ್ಲಿ ನಮ್ಮನ್ನ ಬಂಧಿಸಿದರು. ಗಂಟೆಗಟ್ಟಲೆ ನಾವು ಅದೇ ಸ್ಥಳದಲ್ಲಿ ಕುಳಿತುಕೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ಪೊಲೀಸರ ಜೊತೆ ಸಾಕಷ್ಟು ಜಟಾಪಟಿಗಳು ನಡೆಯಿತು. ಕೆಲವರು ಬೇರೆ ಬೇರೆ ಕಡೆಗಳಿಗೆ ಓಡಿ ಹೋದರು. ಮತ್ತೆ ಹಲವರು ಒಂದೇ ಸ್ಥಳದಲ್ಲಿ ಕುಳಿತಿದ್ದರು. ಅಲ್ಲಿ ಬಂಧಿಸುವ ಪ್ರೊಸೀಜರ್ ಮಾಡಿ ಜಿಲ್ಲೆಯ ಮತ್ತು ರಾಜಧಾನಿಯ ಇಡೀ ಬೇರೆ ಬೇರೆ ರಸ್ತೆಗಳಲ್ಲಿ ಸುತ್ತಾಡಿಸಿದರು. ಇದನ್ನೂ ಓದಿ: Ayodhya Ram Mandir: ರಾಮಮಂದಿರಕ್ಕೆ ಹರಿದುಬಂದ ದೇಣಿಗೆ ಎಷ್ಟು? ಅತಿ ಹೆಚ್ಚು ದೇಣಿಗೆ ಕೊಟ್ಟವರ‍್ಯಾರು ಗೊತ್ತಾ?
ರಸ್ತೆ ಅಗೆದು ಗುಂಡಿ ತೋಡಿದ್ರು!
ಇಡೀ ಉತ್ತರ ಪ್ರದೇಶ ರಾಜ್ಯದ ಶಾಲಾ ಕಾಲೇಜುಗಳು, ಸರ್ಕಾರಿ ಕಟ್ಟಡಗಳು, ಸಭಾಂಗಣಗಳು ತುಂಬಿ ತುಳುಕುತ್ತಿತ್ತು. ರಾಷ್ಟ್ರೀಯ ಹೆದ್ದಾರಿಗಳನ್ನು ಬುಲ್ಡೋಜರ್ ಬಳಸಿ ಕಡಿದು ಹಾಕಿದ್ದರು. ಉತ್ತರ ಪ್ರದೇಶದ ಒಳಗೆ ವಾಹನಗಳು ಯಾವುದೂ ಕೂಡ ಎಂಟ್ರಿ ಕೊಡಬಾರದು ಎಂಬ ಉದ್ದೇಶದಿಂದ ಹಲವಾರು ಉಪಾಯಗಳನ್ನ ಮಾಡಿ ಜನ ಬರುವುದನ್ನು ತಡೆಯಲಾಗಿತ್ತು. ಸವಾಲಿಗೆ ಪ್ರತಿ ಸವಾಲುಗಳನ್ನು ಒಡ್ಡಿ ಯುವಕರು ಅಯೋಧ್ಯೆಯತ್ತ ನುಗ್ಗುತ್ತಿದ್ದರು.
ಕೇಂದ್ರ ಕಾರಾಗೃಹದ ಬಳಿಗೆ ನಮ್ಮನ್ನು ಕರೆದುಕೊಂಡು ಹೋದರು. ಕಾನೂನಾತ್ಮಕವಾಗಿ ಅರೆಸ್ಟ್ ಮಾಡುವ ಪ್ರೊಸೀಜರ್ ಅನ್ನ ಅಲ್ಲಿ ನಡೆಸಲಾಯಿತು. ನಮ್ಮ ವಿಳಾಸ ಫೋಟೋ ದಾಖಲೆಗಳು ಎಲ್ಲವನ್ನು ಪೊಲೀಸರು ಪಡೆದುಕೊಂಡಿದ್ದರು. ಈಗಿನ ರಕ್ಷಣಾ ಸಚಿವ ರಾಜನಾಥ ಸಿಂಗ್, ಮಧ್ಯಪ್ರದೇಶದ ಸುಶೀಲ್ ಕುಮಾರ್ ಚೌಹಾಣ್ ನಮ್ಮ ಜೊತೆ ಇದ್ದರು. ಇದನ್ನೂ ಓದಿ: ಸರಯೂ ನದಿ ತಟದಲ್ಲಿ 1008 ಯಜ್ಞ ಮಂಟಪ ನಿರ್ಮಾಣ – 21 ಸಾವಿರ ಯತಿಗಳಿಂದ ರಾಮನಾಮ ಮಹಾ ಯಜ್ಞ
ಬಂಧನದಲ್ಲಿರುವಾಗಲೇ ರಮೇಶ್ ಮೆಹತಾ ಎನ್ನುವವರು ನಮಗೆ ಸಂಘದ ಶಾಖೆಗಳನ್ನು ನಡೆಸುತ್ತಿದ್ದರು. ನಮ್ಮ ಗುಂಪಿನಲ್ಲಿ 2500ರಷ್ಟು ಜನ ಕೈದಿಗಳಿದ್ದೆವು. ಈ ಥರದ ಹಲವಾರು ಗುಂಪುಗಳು ಉತ್ತರ ಪ್ರದೇಶದ ಬೇರೆ ಬೇರೆ ಭಾಗಗಳಲ್ಲಿ ಇತ್ತು. ಕೇಂದ್ರ ಕಾರಾಗೃಹ ಮತ್ತು ಸುತ್ತಮುತ್ತಲ ಮೈದಾನಗಳು ತುಂಬಿ ತುಳುಕಿದರಿಂದ ಸುಮಾರು 13 ಎಕರೆಯಷ್ಟು ಸುತ್ತಮುತ್ತಲ ಆಲೂಗಡ್ಡೆ ಗದ್ದೆಗಳನ್ನು ಲೆವೆಲ್ ಮಾಡಿದರು. ಗದ್ದೆಯಲ್ಲಿ ಟೆಂಟುಗಳನ್ನು ಹಾಕಲಾಗಿತ್ತು. ಟೆಂಟುಗಳನ್ನು ಹಾಕಿ ಅದರಲ್ಲಿ ಕೈದಿಗಳನ್ನ ಇರಿಸಲಾಗಿತ್ತು. ಶಾಮಿಯಾನ, ತಗಡು ಶೀಟ್ ಗಳನ್ನು ಹಾಕಿ ಅದರ ಒಳಗೂ ಕೂಡಿ ಹಾಕುವ ಪ್ರಕ್ರಿಯೆಗಳು ನಡೆಯುತ್ತಿತ್ತು.
12 ದಿವಸ ಬಂಧನದಲ್ಲಿದ್ದೆ!
ಮೊದಲ ದಿನ ಸರಿಯಾದ ಊಟ ಉಪಚಾರದ ವ್ಯವಸ್ಥೆಗಳು, ಶುಚಿತ್ವದ ವ್ಯವಸ್ಥೆಗಳು ಇಲ್ಲದ ಕಾರಣ ಬಹಳಷ್ಟು ಜಟಾಪಟಿಗಳು ನಡೆಯಿತು. ಉತ್ತರ ಪ್ರದೇಶದವರು ಹೋರಾಟದ ಮುಂಚೂಣಿಯನ್ನು ಪಡೆದು ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವವರೆಗೆ ಪ್ರತಿಭಟನೆಗೆ ಕೂತರು. ಸ್ಥಳಕ್ಕೆ ಜಿಲ್ಲಾಧಿಕಾರಿಗಳೇ ಬಂದು ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಸುಮಾರು 12 ದಿವಸಗಳ ಕಾಲ ಬಂಧನದಲ್ಲಿದ್ದ ನಂತರ ನಮ್ಮನ್ನು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ತಲುಪಿತು 2,400 ಕೆ.ಜಿಯ ದೇಶದ ಅತೀ ದೊಡ್ಡ ಘಂಟೆ
ಸರ್ಟಿಫಿಕೇಟ್ ಇದೆ
ನಾವು ಕಾನೂನಾತ್ಮಕವಾಗಿ ಕೈದಿಗಳು ಆಗಿರುವ ಕಾರಣ ಜೈಲರ್ ಅವರೇ ಸರ್ಟಿಫಿಕೇಟ್‌ಗಳನ್ನು ಕೊಟ್ಟಿದ್ದಾರೆ. ನಮ್ಮ ಹಸ್ತಾಕ್ಷರದಲ್ಲೇ ಆ ಸರ್ಟಿಫಿಕೇಟ್‌ಗಳನ್ನು ಬರೆದುಕೊಂಡಿದ್ದೇವೆ. ಅದಕ್ಕೆ ಸಹಿ ಮತ್ತು ಸೀಲನ್ನು ಜೈಲರ್ ಹಾಕಿದ್ದಾರೆ. ತುಳಸಿ ಸಿಂಹ ಎಂಬ ಎಸ್‌ಪಿ ಜೈಲರ್ ಆಗಿದ್ದರು. ಜನಾಭಿಪ್ರಾಯ ಇರುವ ಕಾರಣ ಬಂಧನ ಮಾಡಿದ ನಂತರ ನಮಗೆ ಹೆಚ್ಚು ಕಿರುಕುಳ ನೀಡಲು ಹೋಗಲಿಲ್ಲ.
ಕೋಟಿ ಲಾಟರಿ ಹೊಡೆದರೂ ಇಷ್ಟು ಖುಷಿಯಾಗಲ್ಲ..!
ರಾಮಮಂದಿರ ಉದ್ಘಾಟನೆ ಆಗುತ್ತಿದೆ. ಕೋರ್ಟ್ ತೀರ್ಪು ಬಂದ ದಿನದಿಂದ ನನಗೆಷ್ಟು ಖುಷಿಯಾಗಿದೆ ಅಂದ್ರೆ ಕೋಟಿ ರೂಪಾಯಿ ಲಾಟರಿಯಲ್ಲಿ ಸಿಕ್ಕಿದರೂ ಇಷ್ಟು ಖುಷಿ ಆಗಲಿಕ್ಕಿಲ್ಲ, ಅದಕ್ಕಿಂತ ಹೆಚ್ಚು ಖುಷಿಯಾಗುತ್ತಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಆಗುತ್ತಿದೆ. ಈ ಕ್ಷಣವನ್ನು ನೆನೆದರೆ ನನ್ನ ಕಣ್ಣುಗಳಲ್ಲಿ ನೀರು ಸುರಿಯುತ್ತದೆ. 500 ವರ್ಷಗಳ ಹೋರಾಟಕ್ಕೆ ಹಿಂದೂ ಸಮಾಜಕ್ಕೆ ಜಯ ಸಿಕ್ಕಿದೆ. ಇದನ್ನೂ ಓದಿ: 8 ಕೆಜಿ ಬೆಳ್ಳಿ ಪಾದುಕೆ ಹೊತ್ತು 7,200 km ಪಾದಯಾತ್ರೆ – 64ರ ವೃದ್ಧನ ಭಕ್ತಿಗೆ ರಾಮನ ಭಕ್ತರಿಂದ ಮೆಚ್ಚುಗೆ
ಕಾಶಿ, ಮಥುರಾ ವಿಮೋಚನೆಯಾಗಲಿ
ಕಾಶಿ ವಿಶ್ವನಾಥ, ಮಥುರಾ ಕೃಷ್ಣ ದೇವಸ್ಥಾನಗಳು ಶೀಘ್ರವಾಗಿ ಬಂಧಮುಕ್ತಗೊಂಡು ಆ ಎರಡು ಕ್ಷೇತ್ರಗಳು ವಿಮೋಚನೆಯಾಗಲಿ. ಈ ಮೂರು ಬೇಡಿಕೆಗಳು ಸಂಪೂರ್ಣವಾಗಿ ಹಿಂದೂ ಸಮಾಜಕ್ಕೆ ಸಿಗಬೇಕು ಎಂಬುದಷ್ಟೇ ಬೇಡಿಕೆ. ನಮ್ಮ ಹೋರಾಟಕ್ಕೆ 33 ವರ್ಷಗಳು ಸಂದವು. ಆದಷ್ಟು ಬೇಗ ಶ್ರೀರಾಮನ ದರ್ಶನ ಆಗಲಿ ಎಂದಷ್ಟೇ ನಾನು ಮನಸ್ಸಿನಲ್ಲಿ ನೆನೆದುಕೊಳ್ಳುತ್ತಿದ್ದೇನೆ. 90ರ ಹೋರಾಟದ ನಂತರ ಎರಡು ಬಾರಿ ನಾನು ಅಯೋಧ್ಯೆಗೆ ಹೋಗಿದ್ದೇನೆ. ಶೀಘ್ರದಲ್ಲೇ ಭವ್ಯ ರಾಮಮಂದಿರ ಕಣ್ತುಂಬಿಕೊಳ್ಳಬೇಕು.
ಇದೊಂದು ಪುಣ್ಯದ ದಿನ, ಜೈ ಶ್ರೀರಾಮ್
ಖಂಡಿತವಾಗಿಯೂ ಒಂದು ಪುಣ್ಯದ ದಿನ ನಮ್ಮ ಕಣ್ಣ ಮುಂದೆ ಬಂತು ಎಂದು ಅನ್ನಿಸುತ್ತಿದೆ. ಜನವರಿ 22ರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ನಾನು ಹೋಗಬೇಕು ಎಂಬ ಪ್ರಬಲವಾದ ಇಚ್ಛೆ ಇತ್ತು. ರಾಮಲಲ್ಲಾನ ಪ್ರತಿಷ್ಠೆಯನ್ನು ನನ್ನ ಕಣ್ಣಿನಲ್ಲಿ ನೋಡಬೇಕು ಎಂಬ ಆಸೆ ಬಹಳ ವರ್ಷಗಳಿಂದ ಇತ್ತು. ನನ್ನಂತಹ ಲಕ್ಷಾಂತರ ಮಂದಿ ಕರಸೇವಕರು ದೇಶದಾದ್ಯಂತ ಇದ್ದಾರೆ ಎಂಬ ಅರಿವು ನನಗಿದೆ. ಶುಭದಿನದಂದು ಲಕ್ಷಾಂತರ ಜನ ಸೇರಿದರೆ ಗೊಂದಲಗಳು ಉಂಟಾಗುತ್ತದೆ ಎಂದು ಟ್ರಸ್ಟ್ ಈಗಾಗಲೇ ಪ್ರಕಟಣೆಯ ಮೂಲಕ ತಿಳಿಸಿದೆ. ಟ್ರಸ್ಟ್‌ನವರು ಮನವಿ ಮಾಡಿ ವಿನಂತಿ ಮಾಡಿದ್ದಾರೆ. ರಾಮಲಲ್ಲಾನ ಪ್ರತಿಷ್ಠೆ ಆದ ಕೆಲವೇ ದಿನಗಳಲ್ಲಿ ನಾವು ಅಯೋಧ್ಯೆಗೆ ಪ್ರಯಾಣ ಮಾಡುತ್ತೇವೆ. ಇದು ಖಂಡಿತ. ದೇವರ ದರ್ಶನ ಪಡೆಯುವುದು ಒಂದೇ ನನ್ನ ಮುಂದಿರುವ ಈಗಿನ ಉದ್ದೇಶ. ಸುಮಾರು 500 ವರ್ಷಗಳ ಸುದೀರ್ಘ ಹಿಂದೂ ಸಮಾಜದ ಹೋರಾಟಕ್ಕೆ ಈಗ ಬೆಲೆ ಸಿಕ್ಕಿದೆ. ನ್ಯಾಯ ಸಿಕ್ಕಿದೆ, ಪ್ರತಿಫಲ ನಮ್ಮ ಕಣ್ಣ ಮುಂದೆ ಕಾಣಿಸುತ್ತಿದೆ ಎಂದರು. ಜೈ ಶ್ರೀರಾಮ್ ಎನ್ನುತ್ತಾ ಶ್ಯಾಮ್ ಪ್ರಸಾದ್ ಕುಡ್ವ ತಮ್ಮ ಮಾತು ಮುಗಿಸಿದರು. ಅವರ ಮನಸ್ಸಿನಲ್ಲಿ ಕಳೆದು ಹೋದ ಘಟನೆಗಳನ್ನು ಮೆಲುಕು ಹಾಕಿದ ಖುಷಿ, ಕಣ್ಣಲ್ಲಿ ರಾಮಮಂದಿರ ಉದ್ಘಾಟನೆ, ಪ್ರಾಣಪ್ರತಿಷ್ಠೆಯಾಗೇ ಬಿಡುತ್ತಿದೆಯಲ್ಲ ಎಂಬ ಕಾಂತಿ ತುಂಬಿ ತುಳುಕುತ್ತಿತ್ತು. ಇದನ್ನೂ ಓದಿ: ಅಯೋಧ್ಯೆಯ ಸೀತಾಮಾತೆಗೆ ಸೂರತ್‌ನಲ್ಲಿ ಸಿದ್ಧಗೊಂಡಿದೆ ಸ್ಪೆಷಲ್ ಸೀರೆ – ವಿಶೇಷತೆ ಏನು?