ಉಡುಪಿ: ರಾಮನಿಗೂ ಹನುಮನಿಗೂ ಸಂಬಂಧವಿದ್ದಂತೆ, ಉತ್ತರದ ಅಯೋಧ್ಯೆಗೂ (Ayodhya) ದಕ್ಷಿಣದ ಉಡುಪಿಗೂ (Udupi) ನಂಟಿದೆ. ಭವ್ಯ ಮಂದಿರದ (Ram Mandir) ಉದ್ಘಾಟನೆ ಸಂದರ್ಭದಲ್ಲಿ ಹಲವಾರು ವಿಚಾರಗಳಲ್ಲಿ ದೇಶವಿದೇಶಗಳ ಸಂಬಂಧ ಬೆಸೆಯುತ್ತಿದೆ. ಇದೀಗ ಮಂದಿರದ ಪ್ರತಿಷ್ಠಾಪನೆ ಮತ್ತು ಮುಂದಿನ ಭದ್ರತೆಗಾಗಿ ಉಡುಪಿಯ ಆರ್.ಮನೋಹರ್ ಅವರು ತಯಾರಿಸಿರುವ ಟೆಲಿಸ್ಕೋಪ್ ಬಳಕೆಯಾಗಲಿದೆ. ಅವರು ತಯಾರಿಸಿದ ಯುಎಸ್ ಪೇಟೆಂಟ್ ಪಡೆದಿರುವ 50 ಬೈನಾಕ್ಯುಲರ್‌ಗಳಿಗೆ (Binoculars) ಭದ್ರತಾ ವಿಭಾಗದಿಂದ ಬೇಡಿಕೆ ಬಂದಿದೆ.
ಈ ಬಗ್ಗೆ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಜಿಲ್ಲೆಯ ಹೆಮ್ಮೆಯ ವಿಜ್ಞಾನಿ, ಪಬ್ಲಿಕ್ ಹೀರೋ ಆರ್.ಮನೋಹರ್ ಅವರು, ಅಯೋಧ್ಯೆಗೆ ಭೇಟಿಕೊಟ್ಟು ಟೆಲಿಸ್ಕೋಪ್ ಕಾರ್ಯಚಟುವಟಿಕೆಯನ್ನು ಪರಿಶೀಲಿಸುತ್ತೇನೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನ ಬಳಸುವ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ. ನಾನು ತಯಾರಿಸಿರುವ ಟೆಲಿಸ್ಕೋಪ್‍ನಲ್ಲಿ ಹೆಚ್ಚು ವ್ಯಾಪ್ತಿಯವರೆಗೂ ಕಾಣುತ್ತದೆ ಎಂದಿದ್ದಾರೆ. ಇದನ್ನೂ ಓದಿ: ರಾಮಮಂದಿರ ಲೋಕಾರ್ಪಣೆ – AI ಕಣ್ಗಾವಲು ಸಾಧ್ಯತೆ, 11 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ
ಭಾರತದಲ್ಲಿ ಟೆಲಿಸ್ಕೋಪ್ ತಯಾರಿಸಬಹುದಾದ ಪೇಟೆಂಟನ್ನು ಪಡೆದಿದ್ದೇನೆ. ಆಪ್ಟಿಕ್ಸ್ ಪೇಟೆಂಟ್ ಇರುವುದರಿಂದ ಇಲ್ಲೇ ತಯಾರು ಮಾಡಲಾಗುತ್ತದೆ. ಇನ್ನು ಆಧುನಿಕ ತಂತ್ರಜ್ಞಾನದ ಬೇಡಿಕೆ ಇಟ್ಟಿದ್ದಾರೆ. ಅಂತಹ ಟೆಲಿಸ್ಕೋಪ್ ತಯಾರಿಕೆಯ ಪ್ರಯತ್ನದಲ್ಲಿ ನಾವಿದ್ದೇವೆ. ಜಾಸ್ತಿ ವ್ಯಾಪ್ತಿ ಕಾಣುವಂತಹ ಟೆಲಿಸ್ಕೋಪ್‍ನ ಬೇಡಿಕೆ ಇಟ್ಟಿದ್ದು, ಪ್ರಾಜೆಕ್ಟ್‍ನ ಬ್ಲೂ ಪ್ರಿಂಟ್ ಈಗ ಸಿದ್ಧಪಡಿಸುತ್ತಿದ್ದೇನೆ. ಈಗ ತಯಾರಿಸುತ್ತಿರುವುದು ದುಬಾರಿ ಅಲ್ಲದ ನೇರವಾಗಿ ನೋಡಬಹುದಾದ ಟೆಲಿಸ್ಕೋಪ್ ಎಂದು ಅವರು ತಿಳಿಸಿದ್ದಾರೆ.
ವಿದೇಶದ ದೂರದರ್ಶಕದ ಲೆನ್ಸ್ ಚಿಕ್ಕದು ಮತ್ತು ಏರಿಯಾ ಆಫ್ ವ್ಯೂ ಕಡಿಮೆ ಇರುತ್ತದೆ. ಮುಂದೆ ನಾನು ಅಯೋಧ್ಯೆಗೆ ಹೋಗಿ ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಅಯೋಧ್ಯೆಯ ರಕ್ಷಣಾ ವ್ಯವಸ್ಥೆ ಹೇಗೆ ಮಾಡಿಕೊಂಡಿದ್ದಾರೆ, ಅವರ ಬೇಡಿಕೆಗಳು ಏನು ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಸಮಸ್ಯೆಗಳಿದ್ದರೆ ಅದನ್ನು ಈಗಲೇ ಬಗೆಹರಿಸಬಹುದು. ಮುಂದಿನ ಭವಿಷ್ಯದ ಡಿಮಾಂಡ್‍ಗಳು ಏನು ಎಂದು ಅರಿತುಕೊಳ್ಳುವ ಪ್ರಯತ್ನ ಮಾಡುತ್ತೇನೆ. ನನಗೆ ಇದರಲ್ಲಿ ಯಾವುದೇ ಲಾಭದ ನಿರೀಕ್ಷೆ ಇಲ್ಲ, ದೇಶದ ಸೇವೆಗೆ ಅದು ಬಳಕೆಯಾಗಬೇಕು ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ: Ayodhya Ram Mandir: ಆನೆ, ಸಿಂಹ, ಹನುಮಾನ್, ಗರುಡ ಮೂರ್ತಿಗಳ ಫೋಟೋ ಬಿಡುಗಡೆ