ತಮಿಳು ಚಿತ್ರರಂಗದ ಖ್ಯಾತ ನಟ ಶಿವಕಾರ್ತಿಕೇಯನ್ (Shivakarthikeyan) ತುಂಬಾ ಪರಿಶ್ರಮಪಟ್ಟು ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆದವರು. ರಿಯಾಲಿಟಿ ಶೋಗಳಿಂದ ಗುರುತಿಸಿಕೊಂಡು ನಂತರ ಕಾಲಿವುಡ್ ನಲ್ಲಿ ಕಾಮಿಡಿಯನ್ ಆಗಿ, ನಟನಾಗಿ, ಬರಹಗಾರನಾಗಿ, ನಿರ್ಮಾಪಕನಾಗಿ ತಮ್ಮದೇ ರೀತಿಯಲ್ಲಿ ಛಾಪೂ ಮೂಡಿಸಿದ್ದಾರೆ. ಮಾಸ್ ಆಗಿ ತಮಿಳು ಸಿನಿಪ್ರಿಯರನ್ನು ರಂಜಿಸುತ್ತಿರುವ ಶಿವಕಾರ್ತಿಕೇಯನ್ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ‘ಅಯಲಾನ್’ (Ayalaan) ಬಿಡುಗಡೆಗೆ (released) ಹೊಸ್ತಿಲಿನಲ್ಲಿ ನಿಂತಿದೆ.
Advertisement
ಆರ್.ರವಿಕುಮಾರ್ ಕಥೆ ಬರೆದು ನಿರ್ದೇಶಿಸುತ್ತಿರುವ ಅಯಲಾನ್ ಸಿನಿಮಾ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ. ಬೆಳಕಿನ ಹಬ್ಬ ದೀಪಾವಳಿಗೆ ವಿಶ್ವದಾದ್ಯಂತ ಚಿತ್ರ ರಿಲೀಸ್ ಆಗಲಿದೆ. 24ಎಎಂ ಸ್ಟುಡಿಯೋಸ್ ನಡಿ ಆರ್. ಡಿ. ರಾಜ ಅದ್ಧೂರಿಯಾಗಿ ನಿರ್ಮಿಸಿರುವ ಫ್ಯಾಂಟಸಿ ಎಂಟರ್ ಟೈನರ್ ಅಲಯಾನ್ ಸಿನಿಮಾವನ್ನು ಕೆಜೆಆರ್ ಸ್ಟುಡಿಯೋನ ಕೋಟಪಾಡಿ ಜೆ ರಾಜೇಶ್ ವರ್ಲ್ಡ್ ವೈಡ್ ಬಿಡುಗಡೆ ಮಾಡಲಿದೆ. ಇದನ್ನೂ ಓದಿ:ತಮಿಳಿನಲ್ಲಿ ಸದ್ದು ಮಾಡುತ್ತಿದ್ದಾರೆ ಕನ್ನಡದ ಮತ್ತೋರ್ವ ನಟ ಸರ್ದಾರ್ ಸತ್ಯ
Advertisement
Advertisement
ಹೇಳಿಕೇಳಿ ಅಲಯಾನ್ ಫ್ಯಾಂಟಿಸಿ ಎಂಟಟ್ರೈನರ್ ಸಿನಿಮಾ. ಹೀಗಾಗಿ ಗುಣಮಟ್ಟದಲ್ಲಿ ಯಾವುದೇ ರೀತಿ ರಾಜಿಯಾಗದೇ ಅದ್ಭುತ ಸಿಜಿ ವರ್ಕ್ ಸಿನಿಮಾದಲ್ಲಿರಲಿದೆ. ಭಾರತೀಯ ಚಿತ್ರರಂಗದಲ್ಲಿ 4500+ VFX ಶಾಟ್‌ಗಳನ್ನು ಹೊಂದಿರುವ ಮೊದಲ ಪೂರ್ಣ-ಉದ್ದದ ಲೈವ್-ಆಕ್ಷನ್ ಸಿನಿಮಾ ಎಂಬ ಹೆಗ್ಗಳಿಕೆಗೂ ಅಲಯಾನ್ ಪಾತ್ರವಾಗಿದೆ. ಅದ್ಭುತ ಸಿಜಿ ಕೆಲಸ ಹಿಂದಿನ ಕೃರ್ತ ಫ್ಯಾಂಟಮ್ FX ಸಂಸ್ಥೆ. ಹಾಲಿವುಡ್ ಹಲವು ಚಿತ್ರಗಳಿಗೆ ಸಿಜಿ ವರ್ಕ್ ಮಾಡಿರುವ ಈ ಕಂಪನಿ ಈಗ ಅಲಯಾನ್ ಚಿತ್ರಕ್ಕೂ ಕೈ ಜೋಡಿಸಿದೆ. ಇನ್ನೂ ಈ ಚಿತ್ರದಲ್ಲಿ ಶಿವಕಾರ್ತಿಕೇಯನ್ ಗೆ ಜೋಡಿಯಾಗಿ ಕನ್ನಡದ ಗಿಲ್ಲಿ ಸಿನಿಮಾ ಬ್ಯೂಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ನಟಿಸಿದ್ದು, ಕರುಣಾಕರನ್, ಯೋಗಿ ಬಾಬು, ಶರದ್ ಕೇಳ್ಕರ್, ಇಶಾ ಕೊಪ್ಪಿಕರ್, ಬಾನುಪ್ರಿಯಾ, ಬಾಲಸರವಣನ್ ಸೇರಿದಂತೆ ಹಲವರು ತಾರಾಬಳಗ ಚಿತ್ರದ ಭಾಗವಾಗಿದ್ದಾರೆ. ಆಸ್ಕರ್ ವಿಜೇತ ಮ್ಯೂಸಿಕ್ ಮಾಂತ್ರಿಕ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಅಲಯಾನ್ ಚಿತ್ರಕ್ಕಿದೆ.