ಸೊಸೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದು ಮಾವ ಎಸ್ಕೇಪ್

Public TV
1 Min Read
telangana crime

ಹೈದರಾಬಾದ್: ಮಗ ಆತ್ಮಹತ್ಯೆ ಮಾಡಿಕೊಂಡು ದೂರವಾದ ಎಂದು ಮನನೊಂದ ತಂದೆ, ಸೊಸೆಯನ್ನು  ಕೊಡಲಿಯಿಂದ ಹೊಡೆದು ಕೊಲೆ ಮಾಡಿ ಎಸ್ಕೇಪ್ ಆಗಿರುವ ಘಟನೆ ತೆಲಂಗಾಣದ ಮಂಚೇರಿಯಲ್‍ನಲ್ಲಿ ನಡೆದಿದೆ.

LOVE

ಸಾಯಿಕೃಷ್ಣ, ಸೌಂದರ್ಯ ಮೃತರಾಗಿದ್ದಾರೆ. ಲಿಂಗಣ್ಣಪೇಟೆಯ ನಿವಾಸಿಗಳಾದ ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಬೇರೆ ಬೇರೆ ಜಾತಿಯವರಾಗಿದ್ದ ಕಾರಣ ಇವರ ಮದುವೆಗೆ ಕುಟುಂಬಸ್ಥರು ಒಪ್ಪಿಗೆ ನೀಡಿರಲಿಲ್ಲ. ಐದು ತಿಂಗಳ ಹಿಂದೆ ಮದುವೆಯಾಗಿದ್ದ ಈ ಜೋಡಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಸಾಯಿ ಕೃಷ್ಣ ಮದ್ಯಪಾನ ಮಡುತ್ತಿದ್ದನು. ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದನು. ಇದನ್ನೂ ಓದಿ: ಇಂಟರ್​ನೆಟ್ ಇಲ್ಲದೆ ಆನ್‍ಲೈನ್‍ನಲ್ಲಿ ಹಣ ಕಳುಹಿಸಿ!

ಸಾಯಿಕೃಷ್ಣ ಮೃತನಾದ ಬಳಿಕ ಸೌಂದರ್ಯ ತನ್ನ ತವರು ಮನೆ ಸೇರಿದ್ದಳು. ಮಗನನ್ನು ಕಳೆದುಕೊಂಡ ಸಾಯಿಕೃಷ್ಣನ ತಂದೆ, ಇಷ್ಟಕ್ಕೆಲ್ಲ ಸೌಂದರ್ಯ ಕಾರಣ ಎಂದು ಆಕೆ ಇರುವ ಸ್ಥಳಕ್ಕೆ ಹೋಗಿ ಗಲಾಟೆ ಮಾಡಿದ್ದಾನೆ. ಈ ವೇಳೆ ಸೌಂದರ್ಯಗೆ ಕೊಡಲಿಯಿಂದ ಹೊಡೆದು ಪರಾರಿಯಾಗಿದ್ದಾನೆ. ಸೌಂದರ್ಯ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಕೇಂದ್ರದ ಶೆ.50ರಷ್ಟು ಸಿಬ್ಬಂದಿಗೆ ವರ್ಕ್ ಫ್ರಂ ಹೋಂ

Share This Article