ಬೆಂಗಳೂರು: ರಾಜ್ಯದ ಕಟ್ಟಡ ನಿರ್ಮಾಣ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿ ಇರುವ ಡಿಎಸ್ ಮ್ಯಾಕ್ಸ್ ಸಂಸ್ಥೆ 16 ನೇ ವರ್ಷದ ವಾರ್ಷಿಕೋತ್ಸವನ್ನ ಆಚರಣೆ ಮಾಡಿಕೊಂಡಿದೆ. ಡಿಎಸ್ ಮ್ಯಾಕ್ಸ್ ಹೆಸರಲ್ಲಿ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದೆ.
ಡಿಎಸ್ ಮ್ಯಾಕ್ಸ್ ಸಂಸ್ಥೆ ಕಳೆದ 16 ವರ್ಷಗಳಿಂದ ಅಪಾಟ್ರ್ಮೆಂಟ್ ಗಳನ್ನ ನಿರ್ಮಿಸಿ ಜನರಿಗೆ ಮನೆಗಳನ್ನ ನೀಡ್ತಾ ಇದೆ. ಜನರಿಂದ ಸಾಕಷ್ಟು ಖ್ಯಾತಿಯನ್ನ ಪಡೆದಿರೋ ಈ ಸಂಸ್ಥೆ ಇಂದು 16 ನೇ ವರ್ಷದ ವಾರ್ಷಿಕೋತ್ಸವನ್ನ ಆಚರಣೆ ಮತ್ತು ಡಿಎಸ್ ಮ್ಯಾಕ್ಸ್ ಕರುನಾಡ ರತ್ನ ಮತ್ತು ಕಲಾ ರತ್ನ ಹೆಸರಿನಲ್ಲಿ ಪ್ರಶಸ್ತಿ ಪ್ರಧಾನ ಮಾಡಿದೆ. ಅರಮನೆ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು, ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್ ರಂಗನಾಥ್, ಡಿಕೆ ಶಿವಕುಮಾರ್, ಸಚಿವ ಸೋಮಣ್ಣ, ರಾಜುಗೌಡ ಮತ್ತು ಡಿಎಸ್ ಮ್ಯಾಕ್ಸ್ ನಾ ಚೇರ್‍ಮೆನ್ ಸತೀಶ್ ಮತ್ತು ನಿರ್ದೇಶಕರು ಉಪಸ್ಥಿತರಿದ್ದರು.
Advertisement
Advertisement
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 9 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯ್ತು. ಅದರಲ್ಲಿ ಡಿಎಸ್ ಮ್ಯಾಕ್ಸ್ ಕರುನಾಡ ರತ್ನ ಪ್ರಶಸ್ತಿಯನ್ನ ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ್ ಕುಮಾರ್, ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪರಿಸರವಾದಿ ತುಳಸಿಗೌಡ, ನಟಿ ಭಾರತಿ ವಿಷ್ಣುವರ್ಧನ್, ಸಾಲುಮರದ ತಿಮ್ಮಕ್ಕ, ಕಲಾವಿದೆ ಬಿ. ಮಂಜಮ್ಮ ಜೋಗುತ್ತಿ, ಕ್ರೀಡಾಪಟು ಮಾಲತಿ ಹೊಳ್ಳ ಕೃಷ್ಣಮೂರ್ತಿ ಹಾಗೂ ಸಬಿತಾ ಮೊನಿಶ್ ಪಡೆದ್ರು. ಮತ್ತೊಂದು ಡಿಎಸ್ ಕಲಾರತ್ನ ಪ್ರಶಸ್ತಿಯನ್ನ ಖಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮತ್ತು ನಿರ್ದೇಶಕ ತಣಿಕೆಲ್ಲ ಭರಣಿ ಅವರಿಗೆ ನೀಡಿ ಸನ್ಮಾನಿಸಲಾಯ್ತು.
Advertisement
Advertisement
ಕಾರ್ಯಕ್ರಮವನ್ನ ಉದ್ದೇಶಿಸಿ ಪಬ್ಲಿಕ್ ಟಿವಿ ಮುಖ್ಯ ಮುಖ್ಯಸ್ಥರಾದ ಹೆಚ್ ಆರ್ ರಂಗನಾಥ್ ಮಾತನಾಡಿ, ಒಂದು ಚಿಕ್ಕ ರಿಯಲ್ ಎಸ್ಟೇಟ್ ಆಗಿ ಆರಂಭವಾದ ಈ ಸಂಸ್ಥೆ ದೊಡ್ಡದಾಗಿ ಬೆಳೆದಿದೆ. ಈ ಸಂಸ್ಥೆಯನ್ನ ನಂಬಿ ಇಷ್ಟೊಂದು ಜನ ಇದ್ದೀರಾ ಅಂದರೆ ಇವರ ಮೇಲೆ ಎಷ್ಟು ವಿಶ್ವಾಸ ಇಟ್ಟಿದ್ದೀರಾ ಅಂತಾ ಗೊತ್ತಾಗ್ತಾ ಇದೆ. ಈ ಸಂಸ್ಥೆ ನಿಮಗೆ ದ್ರೋಹ ಮಾಡಲ್ಲ ಅಂತಾ ಮೆಚ್ಚುಗೆಯನ್ನ ವ್ಯಕ್ತಪಡಿಸ್ತಾ ಇದ್ದಾರೆ.
ಕಾರ್ಯಕ್ರಮದ ಕುರಿತು ಸಿದ್ದಗಂಗಾ ಶ್ರೀಗಳು ಮಾತನಾಡಿ, ಮಧ್ಯಮ ವರ್ಗದದವರ ಕನಸನ್ನ ನನಸು ಮಾಡುವಂತಹ ಕೆಲಸವನ್ನ ಈ ಡಿಎಸ್ ಮ್ಯಾಕ್ಸ್ ಸಂಸ್ಥೆ ಮಾಡ್ತಾ ಇದೆ. ಇವರಿಗೆ ಒಳ್ಳೆಯದಾಗಲಿ ಮತ್ತು ಇವತ್ತು ಡಿಎಸ್ ಮ್ಯಾಕ್ಸ್ ಸಂಸ್ಥೆಯ ಚೆರ್ ಮ್ಯಾನ್ ಸತೀಶ್ ಅವರ ಹುಟ್ಟುಹಬ್ಬ ಅವರು ಹಿರಿಯರ ಗೌರವಿಸಿ ಆಚರಣೆ ಮಾಡ್ತಾ ಇರೋದು ಒಳ್ಳೆಯ ಕೆಲಸ ಸಂಸ್ಥೆಗೆ ಒಳ್ಳೆಯದಾಗಲಿ ಅಂತಾ ಹಾರೈಸಿದರು. ಡಿಎಸ್ ಮ್ಯಾಕ್ಸ್ ಕರುನಾಡ ರತ್ನ ಪ್ರಶಸ್ತಿ ಪಡೆದ ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ ಕೊರೋನಾ ಸಂದರ್ಭದಲ್ಲಿ ನಮ್ಮನ್ನ ನಂಬಿದವರನ್ನ ಈ ಸಂಸ್ಥೆ ಕೈ ಬಿಟ್ಟಿಲ್ಲ ಇಂದು ವಾರ್ಷಿಕೋತ್ಸವ ಸಮಾರಂಭ ಆಚರಣೆ ಮಾಡಿ ಹಿರಿಯನ್ನ ಗೌರವಿಸಿದೆ. ಹಿರಿಯರನ್ನ ಗೌರವಿಸಿ ಸಂಸ್ಥೆ ಖ್ಯಾತಿಯನ್ನ ಹೆಚ್ಚಿಸಿಕೊಂಡಿದೆ. ಇನ್ನಷ್ಟು ಸಾರ್ವಜನಿಕ ಸೇವೆ ಮಾಡಲಿ ಅಂತಾ ಹಾರೈಸಿದ್ರು.
ವಾರ್ಷಿಕೋತ್ಸವದ ಪ್ರಯುಕ್ತ ಲಕ್ಕಿ ಕೂಪನ್ ಡ್ರಾ ಬಹುಮಾನವನ್ನ ಇಡಲಾಗಿತ್ತು. ಈಗಾಗಲೇ ಪ್ಲ್ಯಾಟ್ ಖರೀದಿ ಮಾಡಿರುವವರು ಮತ್ತು ರಿಜಿಸ್ಟ್ರೇಷನ್ ಮಾಡಿಕೊಂಡಿರುವವರ ನಂಬರ್ ಅನ್ನು ಚೀಟಿಯಲ್ಲಿ ಬರೆದು ಬಾಕ್ಸ್ ಹಾಕಲಾಗಿತ್ತು. ಬಾಕ್ಸ್ ನಿಂದ ಸಿದ್ದಗಂಗಾ ಶ್ರೀಗಳು ಮತ್ತು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್ ಆರ್ ರಂಗನಾಥ್ ಸಮ್ಮುಖದಲ್ಲಿ ಚೀಟಿ ಓಪನ್ ಮಾಡಲಾಯ್ತು. ಇದರಲ್ಲಿ ಕೆಲವರು ವಿನ್ ಆಗಿದ್ದು ಪ್ರೀ ಪ್ಲ್ಯಾಟ್ ಮತ್ತು ಹೊಂ ಅಪ್ಲೈಯನ್ಸ್ ಪಡೆದಿದ್ದು ಅಚ್ಚರಿಯಾಗಿತ್ತು.
ಒಟ್ಟಾರೆ ಇಂದು ಡಿಎಸ್ ಮ್ಯಾಕ್ಸ್ ಸಂಸ್ಥೆ ವಾರ್ಷಿಕೋತ್ಸವ ಜೊತೆಗೆ ಪ್ರಶಸ್ತಿ ಪುರಸ್ಕಾರ ಮಾಡಿದೆ. ಅಲ್ಲದೇ ಸಂಸ್ಥೆಯ ಚೇರ್ ಮ್ಯಾನ್ ಸತೀಶ್ ಹುಟ್ಟುಹಬ್ಬದ ದಿನ ಹಲವಾರು ಕಾರ್ಯಕ್ರಮ ಮಾಡಿ ಜನರ ನಂಬಿಕೆಯನ್ನ ಉಳಿಸಿಕೊಂಡಿದೆ. ಇನ್ನಷ್ಟು ಒಳ್ಳೆ ಕೆಲಸ ಮಾಡ್ತಾ ಡಿಎಸ್ ಮ್ಯಾಕ್ಸ್ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಅಂತಾ ಹಾರೈಸೋಣ.
Live Tv