ಹುಬ್ಬಳ್ಳಿ: ಕಳ್ಳತನದ ತನಿಖೆಯಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಸಾರ್ವಜನಿಕವಾಗಿ ಆವಾಜ್ ಹಾಕಿದ್ದಲ್ಲದೆ, ಪೊಲೀಸ್ ಠಾಣೆಗೆ ನುಗ್ಗಿದ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಂಧಲೆ ನಡೆಸಿದ ಘಟನೆ ಹುಬ್ಬಳ್ಳಿಯ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾನಗರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಮಹಾಂತೇಶ್ ಹೊಳಿಗೆ ಹಿಂದೂ ಕಾರ್ಯಕರ್ತ ಮಲ್ಲಿಕಾರ್ಜುನ್ ಸತ್ತಿಗೇರಿ ಏಕವಚನದಲ್ಲಿ ಆವಾಜ್ ಹಾಕಿ ದರ್ಪ ತೋರಿದ್ದಾನೆ.
ಇತ್ತೀಚೆಗೆ ಹುಬ್ಬಳ್ಳಿಯ ಕಿಮ್ಸ್ ಕ್ವಾರ್ಟರ್ಸ್ನಲ್ಲಿ ಸರಣಿ ಕಳ್ಳತನವಾಗುತ್ತಿವೆ. ರಜೆ ಮೇಲೆ ಊರಿಗೆ ಹೋದವರ ಮನೆಯನ್ನೇ ಟಾರ್ಗೆಟ್ ಮಾಡುವ ಖದೀಮರು ರಾತ್ರಿಯಲ್ಲಿ ತಮ್ಮ ಕೈಚಳಕ ತೋರುತ್ತಿದ್ದಾರೆ. ಭಾನುವಾರವೂ ಕ್ವಾರ್ಟರ್ಸ್‌ನ ಬ್ಲಾಕ್ ನಂಬರ್ 2 ರಲ್ಲಿ 2 ಮನೆ, ಬ್ಲಾಕ್ ನಂಬರ್ 6 ರಲ್ಲಿ 3 ಮನೆಗಳಲ್ಲಿ ಕಳ್ಳತನವಾಗಿವೆ. ಇದರಲ್ಲಿ ಕಿಮ್ಸ್‌ನ ಪ್ರೊಫೆಸರ್ ಒಬ್ಬರ ಮನೆ ಹಾಗೂ ಮೂವರು ಸ್ಟಾಫ್ ನರ್ಸ್ ಮನೆಗಳು ಸೇರಿವೆ. ಈ ಹಿಂದೆಯೂ ಇದೇ ರೀತಿಯಲ್ಲಿ ಸರಣಿ ಕಳ್ಳತವಾಗಿದ್ದು, ಪೋಲಿಸರು ಕಳ್ಳರನ್ನು ಪತ್ತೆ ಹಚ್ಚಲು ವಿಫಲರಾಗಿದ್ದಾರೆ ಎಂಬುವುದು ಇಲ್ಲಿನ ನಿವಾಸಿಗಳ ಆರೋಪ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ – 11 ಎಫ್‍ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಕಳ್ಳತವಾದ ಬೆನ್ನಲ್ಲೇ ಸ್ಥಳ ಪರಿಶೀಲನೆಗೆ ಬಂದ ಪೊಲೀಸರ ಮೇಲೆ ಸಹಜವಾಗಿಯೇ ನಿವಾಸಿಗಳು ಅಸಮಾಧಾನ ಹೊರಹಾಕಿದ್ದಾರೆ. ಆದರೆ ಇದೇ ಈ ವಿಚಾರಕ್ಕೆ ಇನ್ಸ್‌ಪೆಕ್ಟರ್ ಮಾಹಾಂತೇಶ್ ಜೊತೆಗೆ ಕ್ಯಾತೆಗಿಳಿದ ಹಿಂದೂ ಸಂಘಟನೆ ಕಾರ್ಯಕರ್ತ ಮಲ್ಲಿಕಾರ್ಜುನ್ ಡ್ಯೂಟಿಯಲ್ಲಿದ್ದ ಪೊಲೀಸರ ಜೊತೆಗೆ ಅನುಚಿತ ವರ್ತನೆ ತೋರಿ, ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಈ ವಿಚಾರವಾಗಿ ಕಿಮ್ಸ್ ಕ್ವಾರ್ಟರ್ಸ್ ಆವರಣದಲ್ಲಿ ಇಬ್ಬರಿಗೂ ಮಾತಿನ ಚಕಮಕಿ ಏರ್ಪಟ್ಟಿದೆ. ಇದನ್ನೂ ಓದಿ: ಪೊಲೀಸರನ್ನು ನೋಡುತ್ತಲೇ ಎದ್ನೋ ಬಿದ್ನೋ ಓಟಕ್ಕಿತ್ತ ಶ್ರೀನಿವಾಸ್ ಬಿವಿ
ಇಷ್ಟಕ್ಕೆ ಸುಮ್ಮನಾಗದ ಮಲ್ಲಿಕಾರ್ಜುನ್, ತಮ್ಮ ಸಂಘಟನೆಯ ಕಾರ್ಯಕರ್ತರ ಜೊತೆಗೆ ವಿದ್ಯಾನಗರ ಠಾಣೆಗೆ ಏಕಾಏಕಿ ನುಗ್ಗಿ ದಾಂಧಲೆ ನಡೆಸಿದ್ದಾನೆ. ಮಲ್ಲಿಕಾರ್ಜುನ್ ಜೊತೆಗೆ ಠಾಣೆಯಲ್ಲಿ ದರ್ಪ ತೋರಿದ ಹತ್ತಾರು ಕಾರ್ಯಕರ್ತರು ಪೊಲೀಸ್ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಬೈದು, ಅನಾಗರಿಕತೆ ಪ್ರದರ್ಶನ ತೋರಿದ್ದಾರೆ. ವಿಪರ್ಯಾಸವೆಂದರೆ ಅಧಿಕಾರಿಗಳಿಗೆ ಇಷ್ಟು ತೊಂದರೆಯಾಗಿದ್ದರೂ ಇಲ್ಲಿಯವರೆಗೆ ಯಾರ ಮೇಲೂ ಕ್ರಮ ತೆಗೆದುಕೊಂಡಿಲ್ಲ.