ಹೈದರಾಬಾದ್: ಚೀನಾದಲ್ಲಿ ಮರಣ ಮೃದಂಗ ಬಾರಿಸಿದ ಕೊರೋನಾ ವೈರಸ್ ಭೀತಿ ಭಾರತೀಯರಿಗೂ ತಟ್ಟಿದೆ. ರಾಜ್ಯದಲ್ಲೂ ಕೊರೊನಾ ಆತಂಕ ಸೃಷ್ಟಿ ಮಾಡಿದ್ದು, ಬಿಸಿ ಜನರಿಗೆ ಮಾತ್ರವಲ್ಲ ದೇವರಿಗೂ ತಟ್ಟಿದೆ.
ತಿರುಮಲ ತಿರುಪತಿ ದೇವಾಲಯದ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ) ಭಕ್ತರಿಗೆ ಮನವಿ ಮಾಡಿಕೊಂಡಿದೆ. ಈ ಮೂಲಕ ಜ್ವರ ಕೆಮ್ಮು, ನೆಗಡಿ ಇದ್ದರೆ ದೇವಾಲಯಕ್ಕೆ ಬರಬೇಡಿ ಎಂದು ತಿಳಿಸಿದೆ. ಜೊತೆಗೆ ಮುಂಜಾಗ್ರತಾ ಕ್ರಮವನ್ನು ಕೂಡ ಟಿಟಿಡಿ ತೆಗೆದುಕೊಂಡಿದೆ.
Advertisement
Advertisement
ಭಕ್ತರ ವೈದ್ಯಕೀಯ ತಪಾಸಣೆ ಕೂಡ ಮಾಡಿಸಿ ದೇವಾಲಯಕ್ಕೆ ಬಿಡುವಂತಹ ಕೆಲಸ ಮಾಡುತ್ತಿದ್ದಾರೆ. ತಪಾಸಣೆಯ ವೇಳೆ ಶಿತ, ಕಫ ಹಾಗೂ ಜ್ವರ ಕಂಡುಬಂದಲ್ಲಿ ಭಕ್ತರ ದೇವಾಲಯ ಪ್ರವೇಶವನ್ನು ಕ್ಯಾನ್ಸಲ್ ಮಾಡುತ್ತಾರೆ. ಅಲ್ಲದೆ ಇನ್ನೊಂದು ದಿನ ದೇವಸ್ಥಾನಕ್ಕೆ ಬರುವಂತೆ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ.
Advertisement
ಒಟ್ಟಿನಲ್ಲಿ ತಿರುಪತಿಗೆ ಬರುವ ಭಕ್ತರ ಮೇಲೆ ಆಡಳಿತ ಮಂಡಳಿ ತೀವ್ರ ನಿಗಾ ವಹಿಸಿದೆ. ಯಾಕಂದ್ರೆ ತಿರುಪತಿಗೆ ದಿನಂಪ್ರತಿ ಸಾವಿರಾರು ಭಕ್ತರು ಭೇಟಿ ಕೊಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅಲ್ಲದೆ ದೇವಾಲಯಕ್ಕೆ ಪ್ರವೇಶ ಮಾಡುವ ಪ್ರತಿಯೊಬ್ಬರು ಮಾಸ್ಕ್ ಹಾಕಿ ಬರಬೇಕು ಎಂದು ಸೂಚಿಸಿದೆ.
Advertisement
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಅದರ ಒಂದು ಭಾಗವಾಗಿ ಜಾಗ್ರತೆ ವಹಿಸುವಂತೆ ಅಲ್ಲಲ್ಲಿ ಅನೌನ್ಸ್ ಮಾಡಲಾಗುತ್ತಿದೆ ಎಂದು ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯದಿಂದ ಹೋಗುವ ಭಕ್ತರು ಸಹ ಆರೋಗ್ಯದ ಕಡೆ ಗಮನ ಕೋಡಬೇಕಾಗಿದೆ.