ಪ್ಯಾರೀಸ್: ಟೋಕಿಯೋ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಅವನಿ ಲೇಖರಾ ಪ್ಯಾರಾ ಶೂಟಿಂಗ್ ವಿಶ್ವಕಪ್‍ನಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಳ್ಳುವ ಮೂಲಕ ತನ್ನ ದಾಖಲೆಯನ್ನೇ ಮುರಿದು ನೂತನ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪ್ಯಾರಾ ಶೂಟಿಂಗ್‍ನ ಮಹಿಳೆಯರ 10 ಮೀ. ಏರ್‌ರೈಫಲ್‍ನಲ್ಲಿ ಸ್ಪರ್ಧಿಸಿದ್ದ ಅವನಿ ಲೇಖರಾ 250.6 ಅಂಕಗಳಿಸಿ ಚಿನ್ನವನ್ನು ತನ್ನದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಮೂಲಕ ತಾನೇ ಟೋಕಿಯೋದಲ್ಲಿ ನಿರ್ಮಿಸಿದ್ದ 249.6 ಅಂಕಗಳ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಇದರ ಜೊತೆಗೆ 2024 ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡರು.
ಟೂರ್ನಿಯಲ್ಲಿ 247.6 ಸ್ಕೋರ್ ಮಾಡಿದ ಪೋಲೆಂಡ್‍ನ ಎಮಿಲಿಯಾ ಬಬ್‍ಸ್ಕಾ ಬೆಳ್ಳಿ ತನ್ನದಾಗಿಸಿಕೊಂಡಿದ್ದು, ಸ್ವೀಡನ್‍ನ ಅನ್ನಾ ನಾರ್ಮನ್ (225.6) ಕಂಚು ಗೆದ್ದಿದ್ದಾರೆ. ಇದನ್ನೂ ಓದಿ: ಶತಕ ಸಿಡಿಸಿ ಸಚಿನ್, ಕೊಹ್ಲಿ, ಸ್ಮಿತ್ ಜೊತೆ ಸ್ಥಾನ ಪಡೆದ ರೂಟ್
ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ವಿಶ್ವಪ್‍ನಲ್ಲಿ ಅವನಿಯ ಕೋಚ್‍ಗೆ ವೀಸಾ ನಿರಾಕರಿಸಲಾಗಿತ್ತು. ಇದರಿಂದಾಗಿ ಅವರು ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಭಾರತ ಕ್ರೀಡಾ ಪ್ರಾಧಿಕಾರ ಮತ್ತು ಕ್ರೀಡಾ ಸಚಿವಾಲಯ ಮಧ್ಯಪ್ರವೇಶಿಸಿ, ಗೊಂದಲ ಬಗೆಹರಿಸಿತ್ತು. ಇದನ್ನೂ ಓದಿ: ಧೋನಿಯಿಂದ ತಾನು ಕಲಿತದ್ದನ್ನು ರಿವೀಲ್ ಮಾಡಿದ ಆಫ್ರಿಕಾದ ವೇಗಿ ಡ್ವೈನ್ ಪ್ರಿಟೋರಿಯಸ್
ಕಳೆದ ಆಗಸ್ಟ್‌ನಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಕಂಚು ಗೆದ್ದಿದ್ದ ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಗೌರವ ಇವರಿಗೆ ಒಲಿದಿತ್ತು.