Bengaluru City
ಶ್ರೀಮನ್ನಾರಾಯಣನಿಗೆ ಆಯ್ತು ಮುಹೂರ್ತ- ಚಿತ್ರ ಯಾಕೆ ಲೇಟಾಯ್ತು ಅಂತಾ ಹೇಳಿದ್ರು ರಕ್ಷಿತ್ ಶೆಟ್ಟಿ

ಬೆಂಗಳೂರು: ಕಿರಿಕ್ ಪಾರ್ಟಿಯ ಹೀರೋ ರಕ್ಷಿತ್ ಶೆಟ್ಟಿ ಈಗ ನಾರಾಯಣನ ಅವತಾರದಲ್ಲಿ ರಂಜಿಸೋಕ್ಕೆ ರೆಡಿಯಾಗ್ತಿದ್ದಾರೆ. ಬನಶಂಕರಿಯ ಧರ್ಮಗಿರಿ ದೇವಸ್ಥಾನದಲ್ಲಿ `ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಮುಹೂರ್ತ ನೆರೆವೇರಿಸಲಾಯ್ತು.
ಅವನೇ ಶ್ರೀಮನ್ನಾರಾಯಣ ಪಿರಿಯಾಡಿಕಲ್ ಸಿನಿಮಾ ಆಗಿದ್ದು 80 ರ ದಶಕದ ಪೊಲೀಸ್ ಆಫೀಸರ್ ಪಾತ್ರದಲ್ಲಿ ರಕ್ಷಿತ್ ಕಾಣಿಸಿಕೊಳ್ಳಲಿದ್ದಾರೆ. ಒಂದು ವರ್ಷ ಸ್ಕ್ರಿಪ್ಟ್ ಕೆಲಸ ಮಾಡಿದ್ದರಿಂದ ಚಿತ್ರದ ಮುಹೂರ್ತ ಲೇಟ್ ಆಯ್ತು. ಬಹುತೇಕ ಸೆಟ್ ನಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದ್ದು ಉತ್ತರ ಕರ್ನಾಟಕದ ಬಾಗಲಕೋಟೆಯಲ್ಲಿಯೂ ಚಿತ್ರೀಕರಣ ನಡೆಯಲಿದೆ ಅಂತಾ ರಕ್ಷಿತ್ ಶೆಟ್ಟಿ ತಿಳಿಸಿದ್ರು.
ಸಚಿನ್ ಆ್ಯಕ್ಷನ್ ಕಟ್ ಹೇಳ್ತಿರೋ ಚೊಚ್ಚಲ ಸಿನಿಮಾ ಇದಾಗಿದ್ದು ರಕ್ಷಿತ್ ಜೊತೆ ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ಸಾಥ್ ಕೊಡ್ತಿದ್ದಾರೆ. ಪೂಜೆ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಭಾಗಿಯಾಗಿ ಫಿಲಂ ಟೀಮ್‍ಗೆ ಗುಡ್‍ಲಕ್ ಅಂತ ವಿಶ್ ಮಾಡಿದ್ರು.
