ಸಂಕ್ರಾಂತಿ ಹಬ್ಬ ಅಂದರೆ ಮನೆಯಲ್ಲಿ ಸಿಹಿ ಪೊಂಗಲ್ ಮಾಡಲೇಬೇಕು. ಪ್ರತಿವರ್ಷದಂತೆ ಅಕ್ಕಿ ಪೊಂಗಲ್ ಮಾಡಿ ಮಾಡಿ ಬೇಸರವಾಗಿರುತ್ತದೆ. ಹೊಸ ವರ್ಷದ ಮೊದಲ ಹಬ್ಬಕ್ಕಾಗಿ ಅಕ್ಕಿ ಪೊಂಗಲ್ ಮಾಡುವ ಬದಲು ಅವಲಕ್ಕಿ ಸಿಹಿ ಪೊಂಗಲ್‍ನ ಒಮ್ಮೆ ಟ್ರೈ ಮಾಡಿ ನೋಡಿ. ನಿಮಗಾಗಿ ಅವಲಕ್ಕಿ ಪೊಂಗಲ್ ಮಾಡುವ ವಿಧಾನ ಇಲ್ಲಿದೆ..
Advertisement
ಬೇಕಾಗುವ ಸಾಮಾಗ್ರಿಗಳು
1. ಗಟ್ಟಿ ಅವಲಕ್ಕಿ – ಕಾಲು ಕೆಜಿ
2. ಹೆಸರು ಬೇಳೆ – 100 ಗ್ರಾಂ
3. ಕೊಬ್ಬರಿ ತುರಿ – 1 ಬಟ್ಟಲು
4. ಉದ್ದುದ್ದ ಹೆಚ್ಚಿದ ಕೊಬ್ಬರಿ ಸ್ಲೈಸ್ – 10-15
5. ಬೆಲ್ಲ – ಸಿಹಿಗೆ ತಕ್ಕಷ್ಟು
6. ಹಾಲು – ಅರ್ಧ ಕಪ್(ಬೇಕಾದಲ್ಲಿ)
7. ಏಲಕ್ಕಿ ಪುಡಿ – ಚಿಟಿಕೆ
8. ಒಣದ್ರಾಕ್ಷಿ, ಗೋಡಂಬಿ – ಸ್ವಲ್ಪ
9. ತುಪ್ಪ – 2 ಚಮಚ
Advertisement
Advertisement
ಮಾಡುವ ವಿಧಾನ
* ಮೊದಲು ಗಟ್ಟಿ ಅವಲಕ್ಕಿಯನ್ನು ತೊಳೆದು ಸೋಸಿಟ್ಟುಕೊಳ್ಳಿ. ನೀರಿನಲ್ಲಿ ನೆನೆಸೋದು ಬೇಡ.
* ಬೆಲ್ಲವನ್ನು ನೀರಿನಲ್ಲಿ ಕರಗಿಸಿ ಸೋಸಿಟ್ಟುಕೊಳ್ಳಿ.
* ಈಗ ಕುಕ್ಕರ್ ಪ್ಯಾನ್‍ಗೆ ಸ್ವಲ್ಪ ತುಪ್ಪ ಹಾಕಿ ಹೆಸರು ಬೇಳೆ ಹಾಕಿ ಸ್ವಲ್ಪ ಹುರಿದು ನೀರು ಸೇರಿಸಿ 1-2 ವಿಸಿಲ್ ಕೂಗಿಸಿಕೊಳ್ಳಿ.
* ವಿಸಿಲ್ ಇಳಿದ ಮೇಲೆ ಸ್ವಲ್ಪ ನೀರು ಸೇರಿಸಿ 1-2 ನಿಮಿಷ ಕುದಿಸಿ.
* ಬಳಿಕ ತೊಳೆದಿಟ್ಟ ಗಟ್ಟಿ ಅವಲಕ್ಕಿ, ಕರಗಿಸಿ ಸೋಸಿಟ್ಟುಕೊಂಡಿದ್ದ ಬೆಲ್ಲ, ಕೊಬ್ಬರಿ ತುರಿ, ಹಾಲು (ಆಪ್ಷನಲ್) ಸೇರಿಸಿ ಕುದಿಸಿ.
* ತುಪ್ಪ ಹಾಕಿ ಫ್ರೈ ಮಾಡಿಟ್ಟುಕೊಂಡಿದ್ದ ದ್ರಾಕ್ಷಿ ಗೋಡಂಬಿ, ಕೊಬ್ಬರಿಯ ಉದ್ದುದ್ದ ತುಂಡುಗಳನ್ನು ಸೇರಿಸಿ.
* ಏಲಕ್ಕಿ ಪುಡಿ ಸೇರಿಸಿ ಬೇಕಾದ ಅಗತ್ಯವಿರುವಷ್ಟು ನೀರು ಸೇರಿಸಿ 5 ರಿಂದ 6 ನಿಮಿಷ ಕುದಿಸಿ ಸಾಕು.
* ಆರಿದ ಬಳಿಕ ಸಿಹಿ ಪೊಂಗಲ್ ಗಟ್ಟಿ ಆಗುತ್ತದೆ. ತುಂಬಾ ಗಟ್ಟಿಯಾದಂತೆ ಅನ್ನಿಸಿದರೆ ಬಿಸಿ ನೀರು ಸೇರಿಸಿ ತೆಳ್ಳಗೆ ಮಾಡಿಕೊಳ್ಳಬಹುದು.
* ನಿಮಗೆ ಬೇಕಾದ ರೀತಿಯಲ್ಲಿ (ಗಟ್ಟಿ ಅಥವಾ ತೆಳು) ಪೊಂಗಲ್ ಮಾಡಿಕೊಳ್ಳಿ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv