ಮಂಗಳೂರು: ನಗರದಲ್ಲಿ ಇಂದು ಸಂಜೆ ಚಲಿಸುತ್ತಿದ್ದ ಆಟೋದಲ್ಲಿ (Autorickshaw) ನಿಗೂಢ ರೀತಿಯ ಸ್ಫೋಟ ಸಂಭವಿಸಿ ಆತಂಕ ಸೃಷ್ಟಿಸಿದೆ.
Advertisement
ಮಂಗಳೂರಿನ (Mangaluru) ಪಂಪ್‍ವೆಲ್‍ನಿಂದ ನಾಗುರಿ ಕಡೆ ಚಲಿಸುತ್ತಿದ್ದ ಆಟೋ ಒಂದರ ಒಳಗಿಂದ ಇದ್ದಕ್ಕಿದ್ದ ಹಾಗೇ ನಿಗೂಢ ಸ್ಫೋಟವಾಗಿದೆ. ದಾರಿ ಮಧ್ಯೆ ಸವಾರನೋರ್ವ ಕೈಯಲ್ಲಿ ಕುಕ್ಕರ್ ಹಿಡಿದುಕೊಂಡು ಆಟೋ ಹತ್ತಿದ್ದು ನಾಗುರಿಗೆ ಹೋಗಲು ಚಾಲಕನಿಗೆ ಸೂಚಿಸಿದ್ದ. ಆದ್ರೆ ಕೆಲವೇ ಕ್ಷಣಗಳಲ್ಲಿ ನಾಗುರಿಯ ಕಂಕನಾಡಿ ಪೊಲೀಸ್ (Police) ಠಾಣೆಯ ಎದುರು ಕ್ಷಣಗಳಲ್ಲಿ ಆಟೋದ ಒಳಗೆ ಸ್ಫೋಟಗೊಂಡಿದ್ದು ಸವಾರನ ಕೈಯಲ್ಲಿದ್ದ ಕುಕ್ಕರ್ ಛಿದ್ರಗೊಂಡಿತ್ತು. ಆತ ಆಟೋ ಹತ್ತಿದ ಕೆಲವೇ ಕ್ಷಣಗಳಲ್ಲಿ ಸ್ಫೋಟ ಸಂಭವಿಸಿದ್ದು ಜೊತೆಗೆ ಆತನ ಕೈಯಲ್ಲಿದ್ದ ಕುಕ್ಕರ್ ಛಿದ್ರಗೊಂಡಿದ್ದು ಅನುಮಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಒಂದೇ ಸಮುದಾಯದ 7 ಮಂದಿ ಇದ್ದಾರೆ – ದತ್ತಪೀಠದ ವ್ಯವಸ್ಥಾಪನ ಸಮಿತಿ ವಿರುದ್ಧ ಅಪಸ್ವರ
Advertisement
Advertisement
ಸ್ಫೋಟ ಸಂಭವಿಸಿದ ಸಂದರ್ಭ ದೊಡ್ಡ ಬಾಂಬ್ ಸ್ಫೋಟದಂತೆ ಶಬ್ದವಾಗಿದ್ದು ದೊಡ್ಡ ಮಟ್ಟದ ಹೊಗೆ ಆವರಿಸಿತ್ತು. ಸ್ಥಳಕ್ಕೆ ವಿಧಿ ವಿಜ್ಞಾನ ಇಲಾಖೆಯ ತಜ್ಞರು, ಪೊಲೀಸ್ ಕಮಿಷನರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಕಮಿಷನರ್ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಆಟೋ ಚಾಲಕ ಬೆಂಕಿಕಾಣಿಸಿಕೊಂಡು ಬ್ಲಾಸ್ಟ್ ಆಗಿದೆ ಎಂದಿದ್ದಾನೆ. ಬ್ಲಾಸ್ಟ್ ಬಗ್ಗೆ ಪ್ರತ್ಯಕ್ಷ ಸಾಕ್ಷಿಗಳು ಏನೂ ಹೇಳಿಲ್ಲ. ಸಮಗ್ರ ವಿಚಾರಣೆ ನಡೆಸಲಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಕಾಶಿ-ತಮಿಳು ಸಂಗಮ; ಶರ್ಟ್, ಪಂಚೆ ಧರಿಸಿ ಮಿಂಚಿದ ಮೋದಿ