ತುಮಕೂರು: ರಸ್ತೆ ದಾಟುತ್ತಿದ್ದ ಕೋತಿಯನ್ನು (Monkey) ರಕ್ಷಿಸಲು ಹೋಗಿ ರಿಕ್ಷಾ ಚಾಲಕರೊಬ್ಬರು (Auto Driver) ಮೃತಪಟ್ಟ ಘಟನೆ ಕೊರಟಗೆರೆಯ ಜಂಪೇನಹಳ್ಳಿ ಬಳಿ ನಡೆದಿದೆ.
ಸೋಂಪುರ ನಿವಾಸಿ ಮಹೇಂದ್ರಕುಮಾರ್ ಸಾವನಪ್ಪಿದ ಚಾಲಕ. ಕೊರಟಗೆರೆಯಿಂದ ತುಮಕೂರು (Tumkakuru) ಕಡೆಗೆ ಆಟೋ ಹೋಗುತ್ತಿದ್ದಾಗ ಜಂಪೇನಹಳ್ಳಿ ಬಳಿ ಕೋತಿಯೊಂದು ಅಡ್ಡ ಬಂದಿದೆ.
ರಸ್ತೆ ದಾಟುತ್ತಿದ್ದ ಕೋತಿಯನ್ನು ಬಚಾವ್ ಮಾಡಲು ಹೋಗಿ ಚಾಲಕ ಮಹೇಂದ್ರ ಕುಮಾರ್ ಸಡನ್ ಬ್ರೇಕ್ ಹಾಕಿದ್ದಾರೆ. ಪರಿಣಾಮ ಆಟೋ ಪಲ್ಟಿಯಾಗಿದೆ. ಪಲ್ಟಿಯಾದ ಆಟೋಗೆ ತುಮಕೂರು ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ನೀನೇ ಖುಷಿಯಾಗಿರು, ನಾನು ಪ್ರಪಂಚನೇ ಬಿಟ್ಟು ಹೋಗ್ತಿದಿನಿ – ಸ್ಟೇಟಸ್ ಹಾಕಿ ನೀರಿಗೆ ಬಿದ್ದು ವಿದ್ಯಾರ್ಥಿ ಸೂಸೈಡ್

