ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕ್ಲುಲ್ಲಕ ವಿಚಾರಗಳಿಗೆ ಕೊಲೆ ನಡೆಯುವುದು ಸಾಮಾನ್ಯವಾಗಿದೆ. ಅಂತೆಯೇ ಇದೀಗ ಸಿಲಿಕಾನ್ ಸಿಟಿಯಲ್ಲಿ ಏನೋ ಮಗಾ ನೀರು ಕೊಡು ಅಂದಿದ್ದೇ ತಪ್ಪಾಯ್ತು, ಹೇಳಿದವನ ಪ್ರಾಣವೇ ಹಾರಿಹೋಗಿದೆ.
ಸಿದ್ದಿಕ್ (25) ಕೊಲೆಯಾದ ಯುವಕ. ಈ ಘಟನೆ ಬೆಂಗಳೂರಿನ ಜಾಲಹಳ್ಳಿ ಕ್ರಾಸ್‍ನಲ್ಲಿ ಭಾನುವಾರ ರಾತ್ರಿ 11.30ರ ಸುಮಾರಿಗೆ ನಡೆದಿದೆ. ಇದನ್ನೂ ಓದಿ: ಕಾರಿಗೆ ಡಿಕ್ಕಿ ಹೊಡೆದು 2ಕಿ.ಮೀ.ವರೆಗೂ ಎಳೆದೊಯ್ದ ಕಂಟೈನರ್ ಟ್ರಕ್
ವೃತ್ತಿಯಲ್ಲಿ ಆಟೊ ಚಾಲಕ (Auto Driver) ನಾಗಿದ್ದ ಸಿದ್ದಿಕ್, ನಿನ್ನೆ ಜಾಲಹಳ್ಳಿ ಕ್ರಾಸ್ ಕಡೆ ಬಂದಿದ್ದಾನೆ. ಈ ವೇಳೆ ಮತ್ತೊಬ್ಬ ಆಟೋ ಚಾಲಕ ಅಜಯ್ ಜೊತೆ ನೀರು (Water) ಕೇಳಿದ್ದಾನೆ. ಏನೋ ಮಗಾ ನೀರು ಇದ್ರೆ ಕೊಡು ಎಂದಿದ್ದಾನೆ. ಇಷ್ಟಕ್ಕೆ ಅಜಯ್ ರೊಚ್ಚಿಗೆದ್ದಿದ್ದಾನೆ.
ಏನೋ ಮಗಾ ಅಂತೀಯಾ ಎನ್ನುತ್ತಲೇ ಸಿದ್ದಿಕ್‍ಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಸಿದ್ದಿಕ್ ನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಿದ್ದಿಕ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ.
ಘಟನೆ ಸಂಬಂಧ ಪೀಣ್ಯ ಪೊಲೀಸ್ ಠಾಣೆ (Peenya Police Station) ಯಲ್ಲಿ ಪ್ರಕರಣ ದಾಖಲಾಗಿದೆ.