ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಟೋ ಚಾಲಕನೊಬ್ಬನ ದುವರ್ತನೆ ಮಿತಿ ಮೀರಿದೆ. ಮಹಿಳೆಯರ ಮುಂದೆಯೇ ಪ್ಯಾಂಟ್ ಬಿಚ್ತೀನಿ ಎಂದು ಅಸಭ್ಯವಾಗಿ ವರ್ತಿಸಿದ ಪ್ರಕರಣವೊಂದು ಭಾನುವಾರ ಸಂಜೆ 5 ಗಂಟೆಗೆ ಎಂ.ಜಿ ರೋಡ್ ನಲ್ಲಿರುವ ಗರುಡಾ ಮಾಲ್ ಬಳಿ ನಡೆದಿದೆ.
ಗರುಡಾ ಮಾಲ್ ಬಳಿ ಆಟೋ ಚಾಲಕ, ವಿನತಿ ಎಂಬ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಇಬ್ಬರು ಮಹಿಳೆಯರು ಕಾಫಿ ಕುಡಿಯುತ್ತಿದ್ದಾಗ ಚಾಲಕ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಮೊದಲಿಗೆ ಚಾಲಕ ಮಹಿಳೆಯನ್ನು ಗುರಾಯಿಸಿಕೊಂಡು ನಿಂತಿದ್ದ. ಇದರಿಂದ ಸಿಟ್ಟಿಗೆದ್ದ ವಿನತಿ ಆಟೋ ಚಾಲಕನಿಗೆ ಬೈದಿದ್ದಾರೆ.
ಯಾಕೆ ಗುರಾಯಿಸಿಕೊಂಡು ನೋಡುತ್ತಿದ್ದೀರಿ ಕೆಲಸ ಮಾಡಿ ಎಂದು ಮಹಿಳೆ ಆಟೋ ಚಾಲಕನಿಗೆ ಬೈದಿದ್ದಾರೆ. ಆದರೆ ಇದ್ದಕ್ಕೆ ಉತ್ತರಿಸಿದ ಆಟೋ ಚಾಲಕ ನನ್ನಿಷ್ಟ ನಾನು ಗುರಾಯಿಸ್ತೀನಿ ಪ್ಯಾಂಟ್ ನಾದ್ರೂ ಬಿಚ್ತೀನಿ ಎಂದು ಹೇಳಿದ್ದಾನೆ.
ಇದರಿಂದ ಸಿಟ್ಟಿಗೆದ್ದ ಮಹಿಳೆ ವಿಡಿಯೋ ಮಾಡಲು ಮುಂದಾದಾಗ ಆಟೋ ಚಾಲಕ ಅಸಭ್ಯವಾಗಿ ವರ್ತಿಸಿದ್ದಾನೆ. ಸದ್ಯ ಬೆಂಗಳೂರು ಸಿಟಿ ಪೊಲೀಸ್ ಅಫಿಶಿಯಲ್ ಫೇಸ್ಬುಕ್ ಪೇಜ್ ನಲ್ಲಿ ಮಹಿಳೆ ವಿಡಿಯೋ ಟ್ಯಾಗ್ ಮಾಡಿದ್ದಾರೆ. ಬೆಂಗಳೂರು ಪೊಲೀಸರೇ ಬೇಗ ಎಚ್ಚೆತ್ತುಕೊಳ್ಳಿ, ಇದಕ್ಕೆ ಸರಿಯಾದ ಕ್ರಮ ತೆಗೆದುಕೊಳ್ಳಿ ಎಂದು ವಿನತಿ ಮನವಿ ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv