ಕ್ಯಾನ್‍ಬೆರಾ: ಆಸ್ಟ್ರೇಲಿಯಾದ ಚುನಾವಣೆ ಹಲವಾರು ಕಾರಣಗಳಿಂದಾಗಿ ಸಾಕಷ್ಟು ಮಾಧ್ಯಮಗಳ ಗಮನವನ್ನು ಸೆಳೆಯುತ್ತಿದೆ. ಅದರಲ್ಲಿಯೂ ಅಂಡರ್‌ವೇರ್‌ನಲ್ಲಿ ಬಂದು ಮತ ಚಲಾಯಿಸಿದ್ರೆ, ಒಳ ಉಡುಪು ಫ್ರೀ ಎಂಬ ವಿಲಕ್ಷಣ ಸುದ್ದಿ ಕೇಳಿ ಎಲ್ಲರು ಆಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಸಾಧ್ಯನಾ ಎಂದು ಪ್ರಶ್ನೆ ಕೇಳುತ್ತಿದ್ರೆ, ಹೌದು. ಇದು ನಿಜವಾಗಿ ಆಸ್ಟ್ರೇಲಿಯಾದ ಚುನಾವಣೆಯಲ್ಲಿ ನಡೆದಿದೆ.
ಆಸ್ಟ್ರೇಲಿಯಾದ ಸಾರ್ವತ್ರಿಕ ಚುನಾವಣೆಗಳು ಇದೇ 21ರಂದು ಮುಗಿದಿದೆ. ಲಿಬರಲ್ ಪಕ್ಷವನ್ನು ಸೋಲಿಸಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಿದೆ. ಪ್ರಧಾನಿಯಾಗಿದ್ದ ಸ್ಕಾಟ್ ಮಾರಿಸನ್ ಜಾಗದಲ್ಲಿ ಕಾರ್ಮಿಕ ನಾಯಕ ಆಂಥೋನಿ ಅಲ್ಬನೀಸ್ ಪ್ರಧಾನಿಯಾಗುತ್ತಿದ್ದಾರೆ. ಆದರೆ ಈ ಚುನಾವಣೆಯ ಮತದಾನವು ಭಿನ್ನ ಮತ್ತು ವಿಚಿತ್ರವಾಗಿ ನಡೆಯಿತು. ಇದನ್ನೂ ಓದಿ: ಸಿದ್ದರಾಮಯ್ಯರ ಮುಖ ಮಾತ್ರ ರಾಮನದ್ದು, ಬುದ್ಧಿ ರಾವಣನದು: ಕಟೀಲ್
Advertisement
View this post on Instagram
Advertisement
ಇನ್‍ಸ್ಟಾಗ್ರಾಮ್‍ನಲ್ಲಿ ಬಝೀಸ್ಮಗ್ಲರ್ ಎಂಬ ಅಂಡರ್‌ವೇರ್ ಕಂಪನಿ, ಚುನಾವಣೆ ಬಿಸಿಯು ಬರುತ್ತಿದೆ. ನೀವು ಯಾರಿಗೆ ಮತ ಹಾಕುತ್ತೀರಾ ಎಂಬುದಕ್ಕೆ ನಮಗೆ ಅಭ್ಯಂತರವಿಲ್ಲ. ಆದರೆ ನೀವು ಪ್ಯಾಂಟ್ ಇಲ್ಲದೆ ಮತದಾನ ಮಾಡುವ ನಿಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಬೇಕೆಂದು ನಾವು ಬಯಸುತ್ತೇವೆ. ಒಂದು ವೇಳೆ ನೀವು ಈ ರೀತಿ ಮಾಡಿ ಫೋಟೋ ಶೇರ್ ಮಾಡಿಕೊಂಡರೆ ಅವರಿಗೆ ಒಳ ಉಡುಪನ್ನು ಉಚಿತವಾಗಿ ಕೊಡುತ್ತೇವೆ ಎಂದು ಪೋಸ್ಟ್ ಮಾಡಲಾಗಿತ್ತು.
Advertisement
View this post on Instagram
Advertisement
ಈ ಸವಾಲನ್ನು ಸ್ವೀಕರಿಸಿದ ಹಲವು ಜನರು ಅಂಡರ್‌ವೇರ್ ಮತ್ತು ಸ್ವೀಮ್‍ವೇರ್‌ನಲ್ಲಿ ಬಂದು ಮತ ಚಲಾಯಿಸಿದರು. ಈ ಫೋಟೋ ಶೇರ್ ಮಾಡಿದ ಮತದಾರರು, ಬಝೀಸ್ಮಗ್ಲರ್‌ನಲ್ಲಿ ಇದು ದುಬಾರಿ ಚುನಾವಣಾ ದಿನವಾಗಿರುತ್ತದೆ. ಎಲ್ಲರಿಗೂ ಫ್ರೀಯಾಗಿ ಒಳ ಉಡುಪುಕೊಂಡಲು ಸಿದ್ಧರಾಗಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕಾಲೇಜ್ ಕ್ಯಾಂಪಸ್‍ನಲ್ಲಿ ನಮಾಜ್ ಮಾಡಿದ ಶಿಕ್ಷಕ- ಕ್ರಮಕ್ಕೆ ಯುವ ಬಿಜೆಪಿ ಆಗ್ರಹ
ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಮತದಾರರು ತಮ್ಮ ಫೋಟೋವನ್ನು #SmugglersDecide ಎಂಬ ಹ್ಯಾಶ್‍ಟ್ಯಾಗ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋ ಶೇರ್ ಮಾಡಿದ ತಕ್ಷಣ ಬಝೀಸ್ಮಗ್ಲರ್ ಕಂಪನಿಯು ಅವರಿಗೆ ಉಚಿತವಾಗಿ ಅಂಡರ್‌ವೇರ್ ಕಳಿಸಿದೆ. ಅಲ್ಲದೇ ಈ ಬ್ರ್ಯಾಂಡ್ ಅಂಡರ್‌ವೇರ್ ಆಸ್ಟ್ರೇಲಿಯಾದಲ್ಲಿ ದುಬಾರಿ ಬೆಲೆಯನ್ನು ಹೊಂದಿದೆ.