ಸಿಡ್ನಿ: ಭಾರತದ ತಾರಾ ಟೆನಿಸ್ ಜೋಡಿ ಸಾನಿಯಾ ಮಿರ್ಜಾ (Sania Mirza) ಮತ್ತು ರೋಹನ್ ಬೋಪಣ್ಣ (Rohan Bopanna) ಆಸ್ಟ್ರೇಲಿಯಾ ಓಪನ್ 2023 (Australian Open 2023) ಮಿಶ್ರ ಡಬಲ್ಸ್‌ನ ಫೈನಲ್‍ನಲ್ಲಿ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.
Advertisement
ರಾಡ್ ಲೇವರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಬ್ರೆಜಿಲ್‍ನ ಜೋಡಿ ಲೂಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮ್ಯಾಟೋಸ್ ವಿರುದ್ಧ ಸಾನಿಯಾ, ಬೋಪಣ್ಣ ಜೋಡಿ 6-7 (2-6), 2-6 ಅಂತರದಲ್ಲಿ ಸೋತಿತು. ಇದನ್ನೂ ಓದಿ: ರಾಂಚಿ ರ್‍ಯಾಂಬೋ ಜೊತೆ ಪಾಂಡ್ಯ ವಿಂಟೇಜ್ ಬೈಕ್ ರೈಡಿಂಗ್
Advertisement
Advertisement
ಈ ಮೂಲಕ 36ರ ಹರೆಯದ ಟೆನಿಸ್ ಲೆಜೆಂಡ್ ಸಾನಿಯಾ ಮಿರ್ಜಾ ತಮ್ಮ ವೃತ್ತಿಜೀವದ ಕೊನೆಯ ಗ್ರ್ಯಾಂಡ್ ಸ್ಲಾಮ್ (Grand Slam) ಪಂದ್ಯದಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದು ಅಂತ್ಯವಾಡಿದ್ದಾರೆ.
Advertisement
ಈ ಮೊದಲು ಸೆಮಿಫೈನಲ್‍ನಲ್ಲಿ ಸಾನಿಯಾ, ಬೋಪಣ್ಣ ಬ್ರಿಟನ್‍ನ ಆನ್ ಸ್ಕುಪ್‍ಸ್ಕಿ ಮತ್ತು ಅಮೆರಿಕದ ಡಿ ಕರಾವ್‍ಜಿಕ್ ಜೋಡಿಯನ್ನು 7-6, 6-7, 10-6 ಅಂತರದಲ್ಲಿ ಮಣಿಸಿ ಫೈನಲ್‍ಗೆ ಎಂಟ್ರಿಯಾಗಿತ್ತು.
ಇದು ಸಾನಿಯಾ ಅವರ ಕೊನೆಯ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಾಗಿತ್ತು. ಈ ಟೂರ್ನಿ ಆರಂಭಕ್ಕೂ ಮುನ್ನವೇ ಅವರು ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಫೈನಲ್ ಪ್ರವೇಶಿಸಿದ್ದರಿಂದ ಪ್ರಶಸ್ತಿಯೊಂದಿಗೆ ಗ್ರ್ಯಾಂಡ್ ಸ್ಲಾಮ್‍ಗೆ ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದರು. ಆದರೆ ಫೈನಲ್‍ನಲ್ಲಿ ಸೋತು ನಿರಾಸೆ ಅನುಭವಿಸಿದರು. ಇದನ್ನೂ ಓದಿ: 50 ಕೋಟಿ ಮೌಲ್ಯದ ಫ್ಲಾಟ್, 2.17 ಕೋಟಿಯ ಕಾರು, 80 ಲಕ್ಷದ ಬೈಕ್ – ರಾಹುಲ್ ದಂಪತಿಗೆ ದುಬಾರಿ ಉಡುಗೊರೆ
A trailblazer for women in sport ????????????
Thank you, Sania ❤️@MirzaSania • #AusOpen • #AO2023 pic.twitter.com/hVArmoOhmV
— #AusOpen (@AustralianOpen) January 27, 2023
ಈ ಟೂರ್ನಿಯ ಬಳಿಕ ಸಾನಿಯಾ ಮಿರ್ಜಾ ಟೆನಿಸ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫೆಬ್ರವರಿ 19 ರಂದು ಪ್ರಾರಂಭವಾಗುವ WTA 1000 ದುಬೈ ಟೆನಿಸ್ ಚಾಂಪಿಯನ್‍ಶಿಪ್‍ನ ನಂತರ ಅವರು ವೃತ್ತಿ ಬದುಕಿಗೆ ವಿದಾಯ ಹೇಳಲಿದ್ದಾರೆ.
“My professional career started in Melbourne… I couldn’t think of a better arena to finish my [Grand Slam] career at.”
We love you, Sania ❤️@MirzaSania • #AusOpen • #AO2023 pic.twitter.com/E0dNogh1d0
— #AusOpen (@AustralianOpen) January 27, 2023
ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಎರಡನೇ ಬಾರಿಗೆ ಒಟ್ಟಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಎತ್ತಿಹಿಡಿಯುವ ನಿರೀಕ್ಷೆಯಲ್ಲಿದ್ದರು. 6 ವರ್ಷಗಳ ಹಿಂದೆ 2017ರಲ್ಲಿ ಈ ಜೋಡಿ ಚೊಚ್ಚಲ ಬಾರಿಗೆ ಫ್ರೆಂಚ್ ಓಪನ್‍ನ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿತ್ತು. 2009ರಲ್ಲಿ ಮಹೇಶ್ ಭೂಪತಿಯೊಂದಿಗೆ ಸಾನಿಯಾ ಈ ಪ್ರಶಸ್ತಿಯನ್ನು ಜಯಿಸಿದ್ದರು. ಈವರೆಗೆ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನದಲ್ಲಿ 6 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2009ರಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಆಸ್ಟ್ರೇಲಿಯಾ ಓಪನ್, 2012ರಲ್ಲಿ ಫ್ರೆಂಚ್ ಓಪನ್, 2014ರಲ್ಲಿ ಯುಎಸ್ ಓಪನ್ ಹಾಗೂ ಮಹಿಳೆಯರ ಡಬಲ್ಸ್, 2015ರಲ್ಲಿ ವಿಂಬಲ್ಡನ್ ಮತ್ತು ಯುಎಸ್ ಓಪನ್, 2016ರಲ್ಲಿ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k