ಆಸ್ಟ್ರೇಲಿಯಾದ ಲೆಜೆಂಡರಿ ವಿಕೆಟ್ ಕೀಪರ್ ರಾಡ್ ಮಾರ್ಷ್ ವಿಧಿವಶ

Public TV
2 Min Read
rod marsh

ಕ್ಯಾನ್‍ಬೆರಾ: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಹಾಗೂ ಲೆಜೆಂಡರಿ ವಿಕೆಟ್ ಕೀಪರ್ ಆದಂತಹ ರಾಡ್ ಮಾರ್ಷ್ (74) ಪರಿಹಾರ ನಿಧಿ ಸಂಗ್ರಹಿಸುತ್ತಿರುವ ವೇಳೆ ಹೃದಯಾಘಾತವಾಗಿದ್ದು, ಅಡಿಲೇಡ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.

1970 ರಿಂದ 1984 ರವರೆಗೆ ಆಸ್ಟ್ರೇಲಿಯಾ ಪರ 96 ಟೆಸ್ಟ್ ಪಂದ್ಯಗಳನ್ನು ಆಡಿದ ಮಾರ್ಷ್ ಅವರು, ಅಡಿಲೇಡ್ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಸ್ಪೋರ್ಟ್ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್ ಶುಕ್ರವಾರ ದೃಢಪಡಿಸಿದೆ. ಇದನ್ನೂ ಓದಿ:  ಪಾಕ್ ಕ್ರಿಕೆಟ್ ಲೀಗ್‍ಗಿಂತ ಐಪಿಎಲ್ ದುಬಾರಿ – ಪ್ರಶಸ್ತಿ ಮೊತ್ತದಲ್ಲಿ ಭಾರಿ ವ್ಯತ್ಯಾಸ

ಆಸ್ಟ್ರೇಲಿಯಾದ ಮಾಜಿ ಬೌಲರ್ ಡೇನಿಸ್ ಲಿಲ್ಲೀ ಬೌಲಿಂಗ್‍ನಲ್ಲಿ 95 ರನ್‍ಗಳನ್ನು ಒಳಗೊಂಡಂತೆ ತಮ್ಮ ವಿಕೆಟ್ ಕೀಪರ್ ಶೈಲಿಯಿಂದ 355 ಟೆಸ್ಟ್ ಕ್ಯಾಚ್‍ಗಳನ್ನು ಹಿಡಿದ ದಾಖಲೆಯನ್ನು ಮಾರ್ಷ್ ಹೊಂದಿದ್ದರು. ಅವರು 1984 ರ ಫೆಬ್ರವರಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತರಾಗುವ ಮೊದಲು ತಂಡಕ್ಕಾಗಿ 92 ಏಕದಿನ ಪಂದ್ಯಗಳನ್ನು ಆಡಿದ್ದರು.

ಎಡಗೈ ಬ್ಯಾಟಮ್ಯಾನ್ ಆಗಿರುವ ಅವರು ಟೆಸ್ಟ್ ಕ್ರಿಕೆಟ್‍ನಲ್ಲಿ ಶತಕ ಗಳಿಸಿದ ಮೊದಲ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಆಗಿದ್ದರು. ನಂತರ ಅವರು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‍ನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗಳನ್ನು ಮುನ್ನಡೆಸಿದ್ದರು. ದುಬೈನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‍ನ ವಿಶ್ವ ಕೋಚಿಂಗ್ ಅಕಾಡೆಮಿಯ ಉದ್ಘಾಟನಾ ಮುಖ್ಯಸ್ಥರಾಗಿದ್ದರು.

ಈ ಕುರಿತು ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್‍ರವರು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದು, ರಾಡ್ ಮಾರ್ಷ್ ನಿಧನರಾದ ಸುದ್ದಿ ಕೇಳಿ ಬೇಸರವಾಯಿತು. ಅವರು ನಮ್ಮ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ದಂತಕಥೆಯಾಗಿದ್ದರು. ಅವರು ಅನೇಕ ಜನರಿಗೆ ಸ್ಫೂರ್ತಿಯಾಗಿದ್ದರು. ರಾಡ್ ಕ್ರಿಕೆಟ್ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದರು. ವಿಶೇಷವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರಿಗೆ ತುಂಬಾ ಕೊಡುಗೆ ನೀಡಿದ್ದಾರೆ. ರಾಡ್ ಅವರ ಅಗಲಿಕ್ಕೆಯ ದುಖಃವನ್ನು ಭರಿಸುವ ಶಕ್ತಿಯನ್ನು ಆ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.

2014 ರಲ್ಲಿ, ಅವರು ಆಸ್ಟ್ರೇಲಿಯಾದ ಆಯ್ಕೆಗಾರರ ಅಧ್ಯಕ್ಷರಾಗಿ ನೇಮಕಗೊಂಡು, ಎರಡು ವರ್ಷಗಳ ಕಾಲ ಸ್ಥಾನವನ್ನು ಹೊಂದಿದ್ದರು. ನಂತರ ಅವರನ್ನು 1985 ರಲ್ಲಿ ಸ್ಪೋರ್ಟ್ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್‍ಗೆ ಸೇರಿಸಲಾಯಿತು. ಇದನ್ನೂ ಓದಿ: ಐಪಿಎಲ್ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡ ಶ್ರೀಶಾಂತ್ – ಮೂಲಬೆಲೆ ಎಷ್ಟು ಗೊತ್ತಾ?

ಹಾಲ್ ಆಫ್ ಫೇಮ್‍ನ ಅಧ್ಯಕ್ಷ ಜಾನ್ ಬಟ್ರಾರ್ಂಡ್ ಅವರು ಮಾರ್ಷ್ ಅವರ ಬಗ್ಗೆ ಮಾತನಾಡಿ, ಮಾರ್ಷ್ ಯುದ್ಧತಂತ್ರದವರಾಗಿದ್ದರು, ಭಯವಿಲ್ಲದೆ ಮಾತನಾಡುತ್ತಿದ್ದರು. ಎಷ್ಟೋ ಯುವ ಕ್ರಿಕೆಟಿಗರ ಪ್ರತಿಭೆಯನ್ನು ಗುರುತಿಸಿದ್ದಾರೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *