ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವ ಸಾಮಥ್ರ್ಯ ಹೊಂದಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಬ್ರೆಟ್ ಲೀ, ”ಲಿಟಲ್ ಮಾಸ್ಟರ್ ಸಚಿನ್ ಅವರ ದಾಖಲೆಯನ್ನು ಮುರಿಯುವುದು ಸುಲಭದ ವಿಷಯವಲ್ಲ. ಸಚಿನ್ ಕ್ರಿಕೆಟ್ ದೇವರು. ಹೀಗಾಗಿ ದೇವರಿಗಿಂತ ಯಾರಾದರೂ ಉತ್ತಮವಾಗಬಹುದೇ? ಇದಕ್ಕಾಗಿ ನಾವು ಕಾಯುತ್ತಿದ್ದೇವೆ ಮತ್ತು ನೋಡುತ್ತಿದ್ದೇವೆ. ಎಲ್ಲವನ್ನೂ ಕಾದು ನೋಡೋಣ” ಎಂದು ಹೇಳಿದ್ದಾರೆ.
Advertisement
Advertisement
ಅಂಕಿಅಂಶಗಳನ್ನ ಗಮನಿಸಿದರೆ ವಿರಾಟ್ ಕೊಹ್ಲಿ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಏಳರಿಂದ ಎಂಟು ವರ್ಷಗಳ ಕ್ರಿಕೆಟ್‍ನಲ್ಲಿ ಅವರು ಗಳಿಸಿದ ರನ್ ಖಂಡಿತವಾಗಿಯೂ ಸಚಿನ್ ಅವರ ದಾಖಲೆಯನ್ನು ಮುರಿಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
ವಿರಾಟ್ ಕೊಹ್ಲಿ ಅವರನ್ನ ಸಚಿನ್‍ಗೆ ಹೋಲಿಕೆಯಾಗಬಹುದೆಂದು ನಾನು ಭಾವಿಸಲು ಮೂರು ಕಾರಣಗಳಿವೆ ಎಂದು ಬ್ರೆಟ್ ಲೀ ಹೇಳಿದರು. ಮೊದಲ ಮತ್ತು ಪ್ರಮುಖ ಕಾರಣವೆಂದರೆ ವಿರಾಟ್ ಖಂಡಿತವಾಗಿಯೂ ಪ್ರತಿಭಾವಂತ ಬ್ಯಾಟ್ಸ್‍ಮನ್. ಎರಡನೆಯ ಕಾರಣ ಅವರ ಫಿಟ್‍ನೆಸ್. ಕೊಹ್ಲಿ 30ನೇ ವಯಸ್ಸಿನಲ್ಲಿಯೂ ಸಾಕಷ್ಟು ಫಿಟ್ ಆಗಿದ್ದಾರೆ. ಮೂರನೆಯ ಕಾರಣವೆಂದರೆ ದೊಡ್ಡ ಗುರಿಗಳನ್ನು ಸಾಧಿಸಲು ಅವರಿಗೆ ಮಾನಸಿಕ ಶಕ್ತಿ ಇದೆ. ಅವರು ತಮ್ಮ ಪ್ರತಿಭೆಯಿಂದ ಸುಲಭವಾಗಿ ಸಾಧನೆ ಮಾಡುತ್ತಾರೆ. ವಿರಾಟ್ ಸದೃಢರಾಗಿದ್ದರೆ ಇದು ಅವರ ಮಾನಸಿಕ ಶಕ್ತಿ ಎಂದು ಹೇಳಬಹುದು ಎಂದು ಬ್ರೆಟ್ ಲೀ ತಿಳಿಸಿದ್ದಾರೆ.
Advertisement
ಸಚಿನ್ ತೆಂಡೂಲ್ಕರ್ ಅವರ 47ನೇ ಹುಟ್ಟುಹಬ್ಬಕ್ಕೆ ಬ್ರೆಟ್ ಲೀ ಶುಭಕೋರಿದ್ದರು. ”ಜನ್ಮದಿನದ ಶುಭಾಶಯಗಳು ಲೆಜೆಂಡ್. ಈಗ ಮೈದಾನದಲ್ಲಿ ಯುದ್ಧಗಳು ಮುಗಿದಿವೆ. ನಮ್ಮ ಸ್ನೇಹ ಯಾವಾಗಲೂ ಉಳಿಯುತ್ತದೆ. ಸುರಕ್ಷಿತವಾಗಿರಿ ಮತ್ತು ಜನ್ಮದಿನವನ್ನು ಉತ್ತಮವಾಗಿ ಆಚರಿಸಿ” ಎಂದು ಶುಕ್ರವಾರ ಟ್ವೀಟ್ ಮಾಡಿದ್ದರು.
ಮಾಸ್ಟರ್ ಬ್ಲಾಸ್ಟರ್ ಸಚಿನ್ 49 ಏಕದಿನ ಮತ್ತು 51 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ 100 ಶತಕಗಳನ್ನು ಗಳಿಸಿದ ಏಕೈಕ ಆಟಗಾರ ಸಚಿನ್ ಆಗಿದ್ದಾರೆ. ತೆಂಡೂಲ್ಕರ್ ಅವರು 463 ಏಕದಿನ ಇನ್ನಿಂಗ್ಸ್ ಗಳಲ್ಲಿ 18,426 ರನ್ ಗಳಿಸಿ ಏಕದಿನ ಕ್ರಿಕೆಟ್‍ನಲ್ಲಿ ಅತ್ಯಧಿಕ ರನ್‍ಗಳಿಸಿದ ವಿಶ್ವದ ಸರ್ವಶ್ರೇಷ್ಠ ಆಟಗಾರ ಎನಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 44 ಏಕದಿನ ಮತ್ತು 27 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಸಚಿನ್ ಅವರನ್ನು ಹಿಂದಿಕ್ಕಲು ವಿರಾಟ್‍ಗೆ ಇನ್ನೂ 29 ಶತಕಗಳ ಅಗತ್ಯವಿದೆ.