ಸಿಡ್ನಿ: ಆಸ್ಟ್ರೇಲಿಯಾ ತಂಡದ ಖ್ಯಾತ ಕ್ರಿಕೆಟ್ ಆಟಗಾರರ ಜೇಮ್ಸ್ ಫಾಲ್ಕ್‌ನರ್ ತಾನೊಬ್ಬ ಸಲಿಂಗಕಾಮಿಯೆಂದು ಆರ್ಥೈಸುವಂತಹ ಟ್ವೀಟ್ ಮಾಡಿ ಮುಜುಗರಕ್ಕೆ ಒಳಗಾಗಿದ್ದು, ಬಳಿಕ ಇದೀಗ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಆಸೀಸ್ ತಂಡದ ಪ್ರಮುಖ ವೇಗದ ಬೌಲರ್ ಆಗಿರುವ ಜೇಮ್ಸ್ ಫಾಲ್ಕ್‌ನರ್, ಸೋಮವಾರ ತಮ್ಮ 29ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ತಾಯಿ ಹಾಗೂ ಗೆಳೆಯನೊಂದಿಗೆ ಊಟ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ನನ್ನ ಬಾಯ್ ಫ್ರೆಂಡ್, ತಾಯಿಯೊಂದಿಗೆ ಹುಟ್ಟುಹಬ್ಬದ ಡಿನ್ನರ್ ಎಂದು ಫೋಟೋದ ಕೆಳಗೆ ಬರೆದುಕೊಂಡಿದ್ದರು.
Advertisement
https://www.instagram.com/p/Bw1epixh7hN/?utm_source=ig_embed
Advertisement
ಜೇಮ್ಸ್ ಫಾಲ್ಕ್‌ನರ್ ಪೋಸ್ಟ್ ಗೆ ಹಲವು ಕ್ರಿಕೆಟ್ ಆಟಗಾರರರು ಸೇರಿದಂತೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿ, ನೀವು ಸಲಿಂಗಕಾಮಿ ಎಂದು ಧೈರ್ಯವಾಗಿ ಹೇಳಿಕೊಂಡ ನಿಮ್ಮ ನಡೆಗೆ, ನಮ್ಮ ಬೆಂಬಲವಿದೆ ಎಂದು ಪ್ರತಿಕ್ರಿಯೆ ನೀಡಿದ್ದರು. ಆದರೆ ಅಭಿಮಾನಿಗಳ ಈ ಪ್ರತಿಕ್ರಿಯೆಗೆ ಶಾಕ್ ಆದ ಜೇಮ್ಸ್ ಫಾಲ್ಕ್‌ನರ್ ಮತ್ತೊಂದು ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
Advertisement
ನನ್ನ ಈ ಮೊದಲಿನ ಪೋಸ್ಟ್ ಬಗ್ಗೆ ತಪ್ಪು ತಿಳಿದುಕೊಳ್ಳಲಾಗಿದೆ. ನಾನು ಸಲಿಂಗಕಾಮಿ ಅಲ್ಲ. ಆದರೆ ಅಂತಹವರ ಬಗ್ಗೆ ನೀವು ನೀಡಿದ ಬೆಂಬಲ ನೋಡಿ ಹೆಮ್ಮೆ ಅನಿಸುತ್ತಿದೆ. ಪ್ರೀತಿ ಅಂದರೆ ಪ್ರೀತಿ ಅಷ್ಟೇ. ಅಂದಹಾಗೆ ಆತ ನನ್ನ ಗೆಳೆಯ ಮಾತ್ರ. ತುಂಬಾ ಸಮಯದ ಬಳಿಕ ಮನೆಯಲ್ಲಿ ಆತನೊಂದಿಗೆ ಭೇಟಿ ಮಾಡಿದ್ದ ಕಾರಣ ಪೋಸ್ಟ್ ಮಾಡಿದ್ದೆ ಎಂದು ತಿಳಿಸಿದ್ದಾರೆ.
Advertisement
https://www.instagram.com/p/Bw2-aefB63J/?utm_source=ig_embed
ಇತ್ತೀಚೆಗೆ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಸಲಿಂಗ ವಿವಾಹವಾಗುವ ಮೂಲಕ ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಜೇಮ್ಸ್ ಫಾಲ್ಕ್‌ನರ್ ಅವರ ಪೋಸ್ಟ್ ಅಭಿಮಾನಿಗಳಲ್ಲಿ ಗೊಂದಲವನ್ನು ಮೂಡಿಸಿತ್ತು. ಈ ಹಿಂದೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಸ್ಟಿವನ್ ಡೇವಿಸ್ ತಾವು ಸಲಿಂಗಕಾಮಿ ಎಂಬುದನ್ನು ಬಹಿರಂಗ ಪಡಿಸಿದ್ದರು.
Birthday dinner with the boyfriend @robjubb and my mother roslyn_carol_faulkner ❤️❤️❤️ #togetherfor5years https://t.co/n9hJYTepX0
— James Faulkner (@JamesFaulkner44) April 29, 2019