ಜೆರುಸಲೇಮ್: ಆಸ್ಟ್ರೇಲಿಯಾದ ಪ್ರಜೆಗೆ 8,000 ವರ್ಷಗಳ ವರೆಗಿನ ಪ್ರಯಾಣದ ಹಕ್ಕನ್ನು ಇಸ್ರೇಲ್ ನ್ಯಾಯಾಲಯ ಕಸಿದುಕೊಂಡಿದೆ. ಇಸ್ರೇಲ್‍ನಲ್ಲಿ ವಾಸಿಸುತ್ತಿದ್ದ ಆಸ್ಟ್ರೇಲಿಯಾದ ಪ್ರಜೆ ನೋಮ್ ಹಪ್ಪರ್ಟ್(44)ಗೆ ಬರೋಬ್ಬರಿ 8,000 ವರ್ಷಗಳ ವರೆಗೆ ಇಸ್ರೇಲ್ ತೊರೆಯುವಂತಿಲ್ಲ ಎಂಬ ಷರತ್ತು ವಿಧಿಸಿದೆ. ಕಾರಣ ಕೇಳಿದರೆ ನೀವೂ ದಂಗಾಗುತ್ತೀರಿ.
ಹಪ್ಪರ್ಟ್‍ನ ಮಾಜಿ ಪತ್ನಿ ಮಕ್ಕಳನ್ನು ಸಾಕಲು ಮಾಜಿ ಪತಿಯಿಂದ ಹಣವನ್ನು ಕೇಳಲು ಕೌಟುಂಬಿಕ ನ್ಯಾಯಾಲಯಕ್ಕೆ ತೆರಳಿದ್ದಾರೆ. ಆಗ 1.8 ಮಿಲಿಯನ್ ಪೌಂಡ್(ಸುಮಾರು 18 ಕೋಟಿ ರೂ.) ಹಣವನ್ನು ನೀಡುವಂತೆ ಕೋರ್ಟ್ ವ್ಯಕ್ತಿಗೆ ಆದೇಶಿಸಿತ್ತು. ಈ ಮೊತ್ತವನ್ನು ಆತ ಭರಿಸದೇ ಹೋದಲ್ಲಿ ಬರೋಬ್ಬರಿ 8,000 ವರ್ಷಗಳ ವರೆಗೆ ಆತ ದೇಶ ತೊರೆಯದಂತಹ ಕಟ್ಟುಪಾಡು ವಿಧಿಸಿದೆ.
ಆಸ್ಟ್ರೇಲಿಯಾ ಮೂಲದ ನೋಮ್ ಹಪ್ಪರ್ಟ್ 2012 ರಿಂದ ಇಸ್ರೇಲ್‍ನಲ್ಲಿ ವಾಸಿಸುತ್ತಿದ್ದು, ಆತನ ಮಾಜಿ ಪತ್ನಿ ಇಸ್ರೇಲ್‍ನ ಪ್ರಜೆಯಾಗಿದ್ದಾರೆ. ಹಪ್ಪಟ್ 8 ವರ್ಷಗಳಿಂದ ಇಸ್ರೇಲ್‍ನಲ್ಲಿ ಬಂಧಿಯಾಗಿದ್ದು, ತನ್ನ ಮಕ್ಕಳ ಬೆಂಬಲ ಹಣವನ್ನು ಸಂಪೂರ್ಣವಾಗಿ ಭರಿಸದೇ ಮರಳದಂತಹ ಸ್ಥಿತಿಗೆ ಬಂದಿದ್ದಾನೆ. ಇದನ್ನೂ ಓದಿ: ಹೊಸೂರು ರೋಡ್ ಮರ್ಡರ್‌ಗೆ ಟ್ವಿಸ್ಟ್ – 3 ಮದ್ವೆಯಾಗಿದ್ದ ಅರ್ಚನಾ ಆಸ್ತಿ ಮೇಲೆ ಕಣ್ಣು
ಹಪ್ಪರ್ಟ್ ತನ್ನ ಇಬ್ಬರು ಮಕ್ಕಳಿಗೆ 18 ವರ್ಷ ತುಂಬುವವರೆಗೆ ತಿಂಗಳಿಗೆ 1,200 ಪೌಂಡ್(1.2ಲಕ್ಷ ರೂ.) ನೀಡಬೆಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಹಪ್ಪರ್ಟ್ ಇಲ್ಲಿಯವರೆಗೆ ನೀಡಿರುವ ಪಾವತಿಯ ದಾಖಲೆ ಹಾಗೂ ಸಂಪೂರ್ಣ ಮೊತ್ತವನ್ನು ಒಮ್ಮೆಲೆ ಭರಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಅಸಲಿಗೆ ಈ ನೀತಿ ಚಾಲ್ತಿಯಲ್ಲಿರುವುದು ಆನ್‍ಲೈನ್ ವ್ಯವಸ್ಥೆಯಲ್ಲಿ ನೀಡಿರುವ ಗರಿಷ್ಠ ದಿನಾಂಕದಿಂದಾಗಿ. ಈ ನೀತಿಗೆ ಕೊನೆಯ ದಿನಾಂಕವನ್ನು ಆನ್‍ಲೈನ್‍ನಲ್ಲಿ 9999ರ ಡಿಸೆಂಬರ್ 31ಕ್ಕೆ ಕೊನೆಯದಾಗಿಸಿದೆ. ಹೀಗಾಗಿ ಹಪ್ಪರ್ಟ್ ತನ್ನ ತವರಿಗೆ ತೆರಳಲು ಅಥವಾ ಇಸ್ರೇಲ್ ಅನ್ನು ತೊರೆಯಲು 8,000 ವರ್ಷ ಕಾಯಬೇಕಾಗಿದೆ. ಇದನ್ನೂ ಓದಿ: ಅಡಿಕೆ ಕದ್ದು ಸಿಕ್ಕಿಬಿದ್ದ ನಿವೃತ್ತ ASI