ಹೋಬರ್ಟ್: ಆಸ್ಟ್ರೇಲಿಯಾದ (Australia) ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಅರ್ಧಶತಕ ಸಿಡಿಸುವ ಮೂಲಕ ಟಿ20 (T20) ಕ್ರಿಕೆಟ್‌ನಲ್ಲಿ ವಿಶ್ವದಾಖಲೆ (World Record) ಬರೆದಿದ್ದಾರೆ.
ವಿಂಡೀಸ್ (West Indies) ವಿರುದ್ಧ 22 ಎಸೆತದಲ್ಲಿ 50 ರನ್ ಹೊಡೆಯುವ ಮೂಲಕ 100ನೇ ಅರ್ಧಶತಕ ಸಿಡಿಸಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ 100 ಅರ್ಧಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವಾರ್ನರ್ ಪಾತ್ರರಾದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಪೂಜೆ- ಯೋಗಿ ಆದಿತ್ಯನಾಥ್‌ಗೆ ಟಿಎಂಸಿ ನಾಯಕ ಎಚ್ಚರಿಕೆ
ಎಲ್ಲಾ ಮಾದರಿಯ ಟಿ20 ಕ್ರಿಕೆಟ್‌ನಲ್ಲಿ 367 ಪಂದ್ಯಗಳ 366 ಇನ್ನಿಂಗ್ಸ್‌ನಲ್ಲಿ ಡೇವಿಡ್ ವಾರ್ನರ್ ಈ ಸಾಧನೆ ಮಾಡಿದರು. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಎರಡನೇ ಸ್ಥಾನದಲ್ಲಿದ್ದಾರೆ.
ಕೊಹ್ಲಿ 376 ಪಂದ್ಯಗಳ 359 ಇನ್ನಿಂಗ್ಸ್ ಆಡಿ 91 ಅರ್ಧಶತಕ ಸಿಡಿಸಿದ್ದಾರೆ. ವಿಂಡೀಸ್ ಆಟಗಾರ ಕ್ರಿಸ್ ಗೇಲ್ 463 ಪಂದ್ಯಗಳಿಂದ 88 ಅರ್ಧಶತಕ ಸಿಡಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಲಂಡನ್ ಪ್ಲಾನ್ ವಿಫಲವಾಗಿದೆ- ಫಲಿತಾಂಶ ಘೋಷಣೆಗೂ ಮುನ್ನ ಇಮ್ರಾನ್ ವಿಜಯದ ಭಾಷಣ
11 ರನ್‌ಗಳ ಜಯ:
ಮೊದಲ ಟಿ20 ಪಂದ್ಯಗಳಲ್ಲಿ ವಿಂಡೀಸ್ ವಿರುದ್ಧ 11 ರನ್‌ಗಳ ಜಯವನ್ನು ಆಸ್ಟ್ರೇಲಿಯಾ ಸಾಧಿಸಿದೆ. ಡೇವಿಡ್ ವಾರ್ನರ್ 36 ಎಸೆತ ಎದುರಿಸಿ 70 ರನ್(12 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು. ಟಿಮ್ ಡೇವಿಡ್ 37 ರನ್, ಜೋಶ್ ಇಂಗ್ಲಿಸ್ 39 ರನ್ ಹೊಡೆದರು. ಅಂತಿಮವಾಗಿ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. ಉತ್ತಮ ಹೋರಾಟ ನೀಡಿದ ವಿಂಡೀಸ್ 8 ವಿಕೆಟ್ ನಷ್ಟಕ್ಕೆ 202 ರನ್‌ಗಳಿಸಿತು.