ಸಿಡ್ನಿ: ಆಸ್ಟ್ರೇಲಿಯಾ (Australia) ಮತ್ತು ಇಂಗ್ಲೆಂಡ್ (England) ನಡುವಿನ ಮೊದಲ ಟಿ20 ಪಂದ್ಯ ಬಹಳ ರೋಚಕತೆಯಿಂದ ಕೂಡಿತ್ತು. ಈ ನಡುವೆ ಆಸ್ಟ್ರೇಲಿಯಾ ಬ್ಯಾಟ್ಸ್‌ಮ್ಯಾನ್ ಮ್ಯಾಥ್ಯೂ ವೇಡ್ (Matthew Wade) ನೀಡಿದ ಕ್ಯಾಚ್ ಹಿಡಿಯಲು ಬಂದ ಮಾರ್ಕ್‍ವುಡ್‍ರನ್ನು (Mark Wood) ತಳ್ಳಿದ ಪ್ರಸಂಗವೊಂದು ವಿವಾದಕ್ಕೆ ಕಾರಣವಾಗಿದೆ.
Advertisement
ಹೈಸ್ಕೋರಿಂಗ್ ಮ್ಯಾಚ್‍ನಲ್ಲಿ ಎರಡು ತಂಡಗಳ ಮಧ್ಯೆ ಜಿದ್ದಾಜಿದ್ದಿನ ಕಾದಾಟ ನಡೆಯುತ್ತಿತ್ತು. ಇಂಗ್ಲೆಂಡ್ ನೀಡಿದ 209 ರನ್‍ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟುತ್ತಿದ್ದ ಆಸ್ಟ್ರೇಲಿಯಾಗೆ ಕೊನೆಯ 22 ಎಸೆತಗಳಲ್ಲಿ 39 ರನ್ ಬೇಕಾಗಿತ್ತು. ವೇಡ್ ಮತ್ತು ಡೇವಿಡ್ ವಾರ್ನರ್ ಬ್ಯಾಟಿಂಗ್ ಮಾಡುತ್ತಿದ್ದರು. 17ನೇ ಓವರ್ ಎಸೆದ ಮಾರ್ಕ್‍ವುಡ್ ಎಸೆತವೊಂದರಲ್ಲಿ ಮ್ಯಾಥ್ಯೂ ವೇಡ್ ಕ್ಯಾಚ್ ನೀಡಿದರು. ಇದು ಸುಲಭದ ಕ್ಯಾಚ್ ಕೂಡ ಆಗಿತ್ತು. ಬೌಲಿಂಗ್ ಮಾಡಿದ ಮಾರ್ಕ್‍ವುಡ್ ಸ್ವತಃ ಕ್ಯಾಚ್ ಹಿಡಿಯಲು ಮುಂದಾಗಿದ್ದರು. ಇನ್ನೇನು ಬಾಲ್ ಕೈ ಸೇರಬೇಕೆಂದಿದ್ದಾಗ ವೇಡ್ ಕೈಗಳಿಂದ ಮಾರ್ಕ್‍ವುಡ್‍ರನ್ನು ತಡೆದರು. ಇದರಿಂದ ಮಾರ್ಕ್‍ವುಡ್ ಕ್ಯಾಚ್ ಕೈಚೆಲ್ಲಿದರು. ಜೊತೆಗೆ ಫೀಲ್ಡಿಂಗ್‍ಗೆ ಅಡ್ಡಿ ಕುರಿತಾಗಿ ಅಸಮಾಧಾನ ಹೊರ ಹಾಕಿದರು. ಇದನ್ನೂ ಓದಿ: ಧೋನಿ ಇದ್ದಾಗ ಭಾರತಕ್ಕೆ ಪಾಕಿಸ್ತಾನ ಲೆಕ್ಕಕ್ಕಿರಲಿಲ್ಲ – ಅಫ್ರಿದಿ
Advertisement
https://twitter.com/waqasaAhmad8/status/1579075639482920961
Advertisement
ಒಂದು ವೇಳೆ ಇಂಗ್ಲೆಂಡ್ ತಂಡ ಮನವಿ ಸಲ್ಲಿಸುತ್ತಿದ್ದರೆ ಔಟ್ (Out) ಎಂಬ ತೀರ್ಪು ಬರುವ ಸಾಧ್ಯತೆ ಕೂಡ ಇತ್ತು. ಯಾಕೆಂದರೆ ವೇಡ್ ಸ್ಪಷ್ಟವಾಗಿ ಮಾರ್ಕ್‍ವುಡ್‍ರನ್ನು ತಳ್ಳಿದ್ದು ತಿಳಿಯುತ್ತಿದೆ. ಇದೀಗ ಈ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ವೇಡ್ ನಡೆಗೆ ವಿರೋಧ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಅಂಪೈರ್ ಎಡವಟ್ಟು – ಡ್ರೆಸ್ಸಿಂಗ್ ರೂಮ್‍ನಲ್ಲಿ ರೊಚ್ಚಿಗೆದ್ದ ಮ್ಯಾಥ್ಯೂ ವೇಡ್
Advertisement
ಪಂದ್ಯದಲ್ಲಿ ಕ್ಯಾಚ್ ಕೈಚೆಲ್ಲಿದ ಪರಿಣಾಮ ಬಚಾವ್ ಆಗಿದ್ದ ವೇಡ್ ಆಸ್ಟ್ರೇಲಿಯಾವನ್ನು ಗೆಲ್ಲಿಸಲು ಕೊನೆಯ ಓವರ್ ವರೆಗೂ ಹೋರಾಡಿದರು. ಆದರೆ 19.3 ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಕೊನೆಗೆ ಕ್ಯಾಚ್ ನೀಡಿ ಔಟ್ ಆದರು. ಅಂತಿಮವಾಗಿ ಆಸ್ಟ್ರೇಲಿಯಾ ಸೋಲು ಕಾಣುವಂತಾಯಿತು. ಇಂಗ್ಲೆಂಡ್ 8 ರನ್‍ಗಳಿಂದ ಜಯಭೇರಿ ಬಾರಿಸಿತು.