CricketLatestLeading NewsMain PostSports

ಅಂಪೈರ್ ಎಡವಟ್ಟು – ಡ್ರೆಸ್ಸಿಂಗ್ ರೂಮ್‍ನಲ್ಲಿ ರೊಚ್ಚಿಗೆದ್ದ ಮ್ಯಾಥ್ಯೂ ವೇಡ್

ಮುಂಬೈ: ಆರ್‌ಸಿಬಿ ಮತ್ತು ಗುಜರಾತ್ ನಡುವಿನ ಪಂದ್ಯದಲ್ಲಿ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿನ ಮೂಲಕ ಔಟ್ ಆದ ಗುಜರಾತ್ ತಂಡದ ಆಟಗಾರ ಮ್ಯಾಥ್ಯೂ ವೇಡ್ ಡ್ರೆಸ್ಸಿಂಗ್ ರೂಮ್‍ನಲ್ಲಿ ರಂಪಾಟ ಮಾಡಿದ್ದಾರೆ.

ವೇಡ್ 16 ರನ್ ಗಳಿಸಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು ಈ ವೇಳೆ ದಾಳಿಗಿಳಿದ ಮ್ಯಾಕ್ಸ್‌ವೆಲ್, ವೇಡ್‍ರನ್ನು ಎಲ್‍ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಅಂಪೈರ್ ಕೂಡ ಔಟ್ ಎಂದು ತೀರ್ಪು ನೀಡಿದರು. ಈ ವೇಳೆ ವೇಡ್ ಮೂರನೇ ಅಂಪೈರ್‌ಗೆ ಮನವಿ ಸಲ್ಲಿಸಿದರು. ಆದರೆ ಮೂರನೇ ಅಂಪೈರ್ ಬ್ಯಾಟ್‍ಗೆ ಎಡ್ಜ್ ಆಗಿಲ್ಲ ಔಟ್ ಎಂದು ತೀರ್ಪು ನೀಡಿದರು. ಇದನ್ನೂ ಓದಿ: ಐಪಿಎಲ್ ಫೈನಲ್ ಪಂದ್ಯದ ಟೈಮಿಂಗ್ ಚೇಂಜ್ – ರಾತ್ರಿ 7:30ರ ಬದಲು 8 ಗಂಟೆಗೆ ಆರಂಭ

ಇತ್ತ ಬ್ಯಾಟ್‍ಗೆ ಬಡಿದು ಹೋಗಿರುವುದು ಅಲ್ಟ್ರಾಎಡ್ಜ್‌ನಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಜೊತೆಗೆ ವೇಡ್‍ಗೆ ಕೂಡ ಬ್ಯಾಟ್‍ಗೆ ಬಾಲ್ ಎಡ್ಜ್ ಆಗಿರುವ ಬಗ್ಗೆ ಸ್ಪಷ್ಟವಾಗಿ ತಿಳಿದಿತ್ತು. ಆದರೆ ಅಂಪೈರ್ ಮಾತ್ರ ಔಟ್ ತೀರ್ಪು ನೀಡಿದ ಕಾರಣ ಕೋಪದಿಂದಲೇ ಪೆವಿಲಿಯನ್‍ಗೆ ಹೆಜ್ಜೆ ಹಾಕಿದ ವೇಡ್, ಡ್ರೆಸ್ಸಿಂಗ್ ರೂಮ್‍ನಲ್ಲಿ ಹೆಲ್ಮೆಟ್ ಬಿಸಾಕಿ, ಬ್ಯಾಟ್‍ನ್ನು ನೆಲಕ್ಕೆ ಬಡಿದು ರಂಪಾಟ ಮಾಡಿದರು. ಇದನ್ನೂ ಓದಿ: ವಿರೋಚಿತ ಸೋಲು – ಕಣ್ಣೀರಿಟ್ಟ ರಿಂಕು ಸಿಂಗ್

ಇದೀಗ ವೇಡ್ ರಂಪಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆರ್‌ಸಿಬಿ ಮತ್ತು ಗುಜರಾತ್ ನಡುವಿನ ಪಂದ್ಯ ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯವಾದರೆ, ಗುಜರಾತ್‍ಗೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯವಾಗಿದೆ.

Leave a Reply

Your email address will not be published.

Back to top button