ಇಂದೋರ್: 2ನೇ ದಿನದಾಟದಲ್ಲಿ ನಥನ್ ಲಿಯಾನ್ (Nathan Lyon) ಸ್ಪಿನ್ ಬೌಲಿಂಗ್ ದಾಳಿಗೆ ಪಲ್ಟಿ ಹೊಡೆದ ಭಾರತ (Team India) 163 ರನ್‌ಗಳಿಗೆ ಸರ್ವಪತನ ಕಂಡಿದ್ದು ಆಸ್ಟ್ರೇಲಿಯಾಗೆ (Australia) 76 ರನ್ ಗುರಿಯನ್ನು ನೀಡಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗಾವಾಸ್ಕಾರ್ ಟ್ರೋಫಿ 3ನೇ ಪಂದ್ಯದಲ್ಲಿ 2ನೇ ದಿನ 16 ವಿಕೆಟ್ ಪತನಗೊಂಡಿದೆ. ಎರಡು ದಿನದಲ್ಲಿ 30 ವಿಕೆಟ್ ಉರುಳಿದೆ. ಇದನ್ನೂ ಓದಿ: ಮೊದಲ ದಿನವೇ 14 ವಿಕೆಟ್ ಪತನ – ಪಿಚ್ ವಿರುದ್ಧ ಭಾರೀ ಟೀಕೆ
Advertisement
Advertisement
ಮೊದಲ ದಿನದ ಅಂತ್ಯಕ್ಕೆ 54 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡ 2ನೇ ದಿನದಲ್ಲಿ ಕೇವಲ ಹೆಚ್ಚುವರಿ 41 ರನ್‌ಗಳಿಸಲಷ್ಟೇ ಸಾಧ್ಯವಾಯಿತು. ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಕೊನೆಯ 11 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು. ಪರಿಣಾಮ 197 ರನ್‌ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಭಾರತದ ಪರ ವಿಶೇಷ ಸಾಧನೆಗೈದ ಜಡೇಜಾ
Advertisement
Advertisement
ನಂತರ ತನ್ನ ಸರದಿ ಆರಂಭಿಸಿದ ರೋಹಿತ್ ಪಡೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭಿಕರಾದ ರೋಹಿತ್ ಶರ್ಮಾ (Rohit Sharma), ಶುಭಮನ್ ಗಿಲ್ ಜೋಡಿ ಉತ್ತಮ ಶುಭಾರಂಭ ನೀಡುವಲ್ಲಿ ವಿಫಲವಾಯಿತು. ರೋಹಿತ್ 12 ರನ್‌ಗಳಿಸಿದ್ರೆ, ಗಿಲ್ 5 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ರು. ಈ ವೇಳೆ ತಂಡಕ್ಕೆ ನೆರವಾದ ಚೇತೇಶ್ವರ್ ಪೂಜಾರ 142 ಎಸೆತಗಳಲ್ಲಿ 59 ರನ್ ಬಾರಿಸಿ ಭಾರತ 150 ರನ್‌ಗಳ ಗಡಿ ದಾಟಲು ನೆರವಾದರು. ಶ್ರೇಯಸ್ ಅಯ್ಯರ್ 26 ರನ್ ಗಳಿಸಿದರು. ನಂತರ ಭಾರತ ಒಂದೊಂದೆ ವಿಕೆಟ್‌ಗಳನ್ನು ಕಳೆದುಕೊಂಡಿತು. ಎರಡೂ ದಿನಗಳಲ್ಲೂ ಅಕ್ಷರ್ ಪಟೇಲ್ ಕ್ರಮವಾಗಿ 12, 15 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ 2ನೇ ದಿನದ ಅಂತ್ಯಕ್ಕೆ 60.3 ಓವರ್‌ಗಳಲ್ಲಿ 163 ರನ್‌ಗಳಿಗೆ ಭಾರತ ಸರ್ವಪತನ ಕಂಡಿತು.
ಟೀಂ ಇಂಡಿಯಾ ಪರ ಆರ್.ಅಶ್ವಿನ್ (Ravichandran Ashwin) 3 ವಿಕೆಟ್ ಪಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 689 ವಿಕೆಟ್ ಪಡೆಯುವ ಮೂಲಕ 687 ವಿಕೆಟ್ ಪಡೆದ ಟೀಂ ಇಂಡಿಯಾ ಲೆಜೆಂಡರಿ ಕಪಿಲ್ ದೇವ್ ಅವರ ದಾಖಲೆ ಮುರಿದರು. ರವೀಂದ್ರ ಜಡೇಜಾ (Ravindra Jadeja) 4 ವಿಕೆಟ್ ಪಡೆದರೆ, ಉಮೇಶ್ ಯಾದವ್ ಮೂರು ವಿಕೆಟ್ ಕಬಳಿಸಿದರು.
ಮೂರನೇ ಟೆಸ್ಟ್ ಪಂದ್ಯದಲ್ಲೂ ಮಿಂಚಿದ ಆಸ್ಟ್ರೇಲಿಯಾ ಕ್ರಿಕೆಟಿಗ ನಥನ್ ಲಿಯಾನ್ ಸ್ಪಿನ್ ದಾಳಿಯ ಮೂಲಕ ಟೀಂ ಇಂಡಿಯಾ ಬ್ಯಾಟರ್‌ಗಳನ್ನ ಪೆವಿಲಿಯನ್‌ಗಟ್ಟುವಲ್ಲಿ ಯಶಸ್ವಿಯಾದರು. 23.1 ಓವರ್‌ಗಳಲ್ಲಿ 64 ರನ್ ನೀಡಿ, ಶುಭಮನ್ ಗಿಲ್, ರೋಹಿತ್, ಜಜೇಡಾ, ಭರತ್, ಅಶ್ವಿನ್, ಪೂಜಾರ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ವಿಕೆಟ್ ಉರುಳಿಸುವ ಮೂಲಕ ಟೀಂ ಇಂಡಿಯಾವನ್ನು 163 ರನ್‌ಗಳಿಗೆ ಕಟ್ಟಿಹಾಕಿದರು. ಮ್ಯಾಥಿವ್ ಕುಹ್ನೆಮನ್, ಮಿಚೆಲ್ ಸ್ಟಾರ್ಕ್ ತಲಾ ಒಂದೊಂದು ವಿಕೆಟ್ ಪಡೆದರು.