ಇಂದೋರ್: ಆಸ್ಟ್ರೇಲಿಯಾ ಆಟಗಾರ ಟ್ರಾವಿಸ್ ಹೆಡ್ (Travis Head) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ (Australia), ಟೀಂ ಇಂಡಿಯಾ (Team India) ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 4 ಪಂದ್ಯಗಳ ಬಾರ್ಡರ್ ಗಾವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಮೊದಲ ಜಯ ಸಾಧಿಸಿದೆ.
Advertisement
2ನೇ ದಿನದಾಟದ ಅಂತ್ಯಕ್ಕೆ 60.3 ಓವರ್‌ಗಳಲ್ಲಿ 163 ರನ್‌ಗಳಿಸಿದ್ದ ಭಾರತ 2ನೇ ಇನ್ನಿಂಗ್ಸ್‌ನಲ್ಲೂ ಒಂದೇ ದಿನಕ್ಕೆ ಸರ್ವಪತನ ಕಂಡಿತ್ತು. ಈ ಮೂಲಕ ಹೆಚ್ಚುವರಿ 75 ರನ್ ಗಳಿಸಿ ಆಸ್ಟ್ರೇಲಿಯಾಗೆ ಕೇವಲ 76 ರನ್‌ಗಳ ಗುರಿ ನೀಡಿತ್ತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 18.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 78 ರನ್ ಗಳಿಸುವ ಮೂಲಕ ಸುಲಭ ಜಯ ಸಾಧಿಸಿತು. ಇದನ್ನೂ ಓದಿ: ಎರಡನೇ ದಿನ 16 ವಿಕೆಟ್ ಪತನ – ಆಸೀಸ್ ಗೆಲುವಿಗೆ ಬೇಕು 76 ರನ್
Advertisement
Advertisement
ಆರಂಭಿಕರಾದ ಉಸ್ಮಾನ್ ಖವಾಜ ಆರಂಭದಲ್ಲಿ ಅಶ್ವಿನ್ ಸ್ಪಿನ್ ದಾಳಿಗೆ ತುತ್ತಾದರು. ಮತ್ತೊಬ್ಬ ಆರಂಭಿಕನಾಗಿದ್ದ ಟ್ರಾವಿಸ್ ಹೆಡ್ ಏಕದಿನ ಶೈಲಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆದರು. 53 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ನೊಂದಿಗೆ 49 ರನ್ ಚಚ್ಚಿದರು. ಇದರೊಂದಿಗೆ ಸಾಥ್ ನೀಡಿದ ಮಾರ್ನಸ್ ಲಾಬುಶೇನ್ 58 ಎಸೆತಗಳಲ್ಲಿ 28 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಆಸ್ಟ್ರೇಲಿಯಾ 18.5 ಓವರ್‌ಗಳಲ್ಲಿ 78 ರನ್‌ಗಳಿಸಿ ಜಯ ಸಾಧಿಸಿತು.
Advertisement
ಟೀಂ ಇಂಡಿಯಾ ಪರ ಅಶ್ವಿನ್ (Ravichandran Ashwin) 1 ವಿಕೆಟ್ ಪಡೆದರು. ಇದನ್ನೂ ಓದಿ: ಮೊದಲ ದಿನವೇ 14 ವಿಕೆಟ್ ಪತನ – ಪಿಚ್ ವಿರುದ್ಧ ಭಾರೀ ಟೀಕೆ
ಮೂರೇ ದಿನಕ್ಕೆ 31 ವಿಕೆಟ್ ಪತನ: ಇಂದೋರ್ ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಎರಡೂ ತಂಡಗಳಿಂದ ಮೂರೇ ದಿನಗಳಲ್ಲಿ 31 ವಿಕೆಟ್ ಪತನಗೊಂಡಿತು. ಮೊದಲ ದಿನ 14 ವಿಕೆಟ್, 2ನೇ ದಿನ 16 ವಿಕೆಟ್ ಹಾಗೂ 3ನೇ ದಿನ 1 ವಿಕೆಟ್ ಪತನಗೊಂಡಿತು.
ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದ್ದ ಭಾರತ ಸರಣಿ ಗೆಲ್ಲುವ ತವಕದಲ್ಲಿತ್ತು. ಭಾರತದ ಸರಣಿ ಗೆಲುವಿನ ಕನಸಿಗೆ ಕಾಂಗರೂ ಪಡೆ ತಣ್ಣೀರು ಎರಚಿದೆ. ಇದರಿಂದ ಮಾರ್ಚ್ 9 ರಿಂದ 13ರ ವರೆಗೆ ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯ ನಿರ್ಣಾಯಕವಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್ 109/10
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 197/10
ಭಾರತ ಎರಡನೇ ಇನ್ನಿಂಗ್ಸ್ 163/10
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ 78/1