ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ವೈದ್ಯಕೀಯ ಸಿಬ್ಬಂದಿಗೆ ಬೆಂಬಲ ನೀಡಲು ತಮ್ಮ ತಲೆಯನ್ನು ತಾವೇ ಬೋಳಿಸಿಕೊಂಡಿದ್ದಾರೆ. ಜೊತೆಗೆ ನಿಮ್ಮ ತಲೆಯನ್ನು ಬೋಳಿಸಿಕೊಳ್ಳುತ್ತೀರಾ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಸ್ಟೀವ್ ಸ್ಮಿತ್ ಅವರಿಗೆ ಸವಾಲು ಹಾಕಿದ್ದಾರೆ.
ಕೊರೊನಾ ಸೋಂಕಿತರ ಪ್ರಾಣ ಉಳಿಸಲು ಶ್ರಮಿಸುತ್ತಿರುವ ವೈದ್ಯರು, ದಾದಿಯರು ಮತ್ತು ಇತರಿಗೆ ಧನ್ಯವಾದ ತಿಳಿಸಲು ವಾರ್ನರ್ ತಲೆ ಬೋಳಿಸಿಕೊಂಡಿದ್ದಾರೆ. ವಾರ್ನರ್ ತಾವು ತಲೆ ಬೋಳಿಸಿಕೊಂಡ ವಿಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ಫೋಟೋ ಒಂದನ್ನು ಪೋಸ್ಟ್ ಮಾಡಿ, ನೀವು ಕೂಡ ತಲೆ ಬೋಳಿಸಿಕೊಂಡು ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೀರಾ ಎಂದು ಸ್ಟೀವ್ ಸ್ಮಿತ್, ಪ್ಯಾಟ್ ಕಮ್ಮಿನ್ಸ್, ಜೋ ಬನ್ರ್ಸ್, ಆಡಮ್ ಜಂಪಾ, ಮಾರ್ಕಸ್ ಸ್ಟೊಯಿನಿಸ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ತಮ್ಮ ತಂಡದ ಆಟಗಾರರಿಗೆ ಸವಾಲು ಹಾಕಿದ್ದಾರೆ.
https://www.instagram.com/p/B-YVHGwJIqU/?utm_source=ig_embed
ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮನೆಯಲ್ಲಿರುವ ಕೊಹ್ಲಿ ಈ ಸವಾಲನ್ನು ಸ್ವೀಕರಿಸುತ್ತಾರಾ? ಮತ್ತು ತಮ್ಮ ತಲೆಯನ್ನು ಬೋಳಿಸಿಕೊಳ್ಳುತ್ತಾರಾ ಮುಂದೆ ತಿಳಿಯಲಿದೆ.
ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ಪತ್ನಿ ಅನುಷ್ಕಾ ಶರ್ಮಾ ಅವರಿಂದ ಹೇರ್ ಕಟಿಂಗ್ ಮಾಡಿಸಿಕೊಂಡಿದ್ದರು. ಈ ವಿಡಿಯೋವನ್ನು ಅನುಷ್ಕಾ ಶರ್ಮಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಡೇವಿಡ್ ವಾರ್ನರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಉತ್ತಮ ಫಾರ್ಮ್ ನಲ್ಲಿದ್ದಾರೆ. ಜೊತೆಗೆ ಉತ್ತಮ ಸ್ನೇಹಿತರು ಕೂಡ ಹೌದು. ಹೀಗಾಗಿ ವಾರ್ನರ್ ನೀಡಿದ ಸವಾಲನ್ನು ವಿರಾಟ್ ಸ್ವೀಕರಿಸುತ್ತಾರಾ ಎನ್ನುವುದೇ ಕುತೂಹಲ ಮೂಡಿಸಿದೆ.
These are testing times and we need to wake up to the seriousness of this situation. Please let us all follow what's been told to us and stand united please. It's a plea to everyone ???????????? pic.twitter.com/75dDlzT6tX
— Virat Kohli (@imVkohli) March 25, 2020
ಕೊರೊನಾ ವಿರುದ್ಧದ ಹೋರಾಟಕ್ಕೆ ವಿರಾಟ್ ಕೊಹ್ಲಿ, ಅನುಷ್ಕಾ ದಂಪತಿ ದೇಣಿಗೆ ನೀಡಿದ್ದಾರೆ. ಈ ಕುರಿತು ಇಬ್ಬರೂ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ವಿರಾಟ್ ಹಾಗೂ ನಾನು ಪಿಎಂ-ಕೇರ್ಸ್ ಫಂಡ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನ ಸಹಾಯ ಮಾಡಿದ್ದೇವೆ. ಹಲವು ಜನರು ಬಳಲುತ್ತಿರುವುದನ್ನು ನೋಡಿ ಹೃದಯ ಬಡಿತವೇ ನಿಂತಂತಾಗುತ್ತಿದೆ. ಹೀಗಾಗಿ ನಮ್ಮ ಈ ಕೊಡುಗೆ ಪರಿಹಾರ ಕೆಲಸಕ್ಕೆ ನೆರವಾಗಲಿದೆ ಎಂದು ನಾವು ಭಾವಿಸಿದ್ದೇವೆ. ನಮ್ಮ ಪ್ರೀತಿಯ ಜನರ ನೋವು ನಿವಾರಿಸಲು ಸಹಾಯವಾಗಲಿದೆ ಎಂದು ಬರೆದುಕೊಂಡಿದ್ದರು. ಆದರೆ ಎಷ್ಟು ಹಣ ನೀಡಿದ್ದಾರೆ ಎಂದು ತಿಳಿಸಿಲ್ಲ.