ಬೆಂಗಳೂರು: ಮದುವೆಯಾಗಲು (Marriage) ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳು ಯುವಕನ ಮೇಲೆ ಬಿಸಿನೀರು (Hot Water) ಎರಚಿದ ಘಟನೆ ಬೆಂಗಳೂರಿನ (Bengaluru) ಚಾಮರಾಜಪೇಟೆಯಲ್ಲಿ (Chamarajpet) ನಡೆದಿದೆ.
ಕಲಬುರಗಿ (Kalaburagi) ಮೂಲದ ಭೀಮಾಶಂಕರ ಆರ್ಯ ಗಾಯಗೊಂಡ ಯುವಕ. ಜ್ಯೋತಿ ದೊಡ್ಡಮನಿ ಎಂಬ ಮಹಿಳೆ ಈ ಕೃತ್ಯ ಎಸಗಿದ್ದು, ಭೀಮಾಶಂಕರ ಮತ್ತು ಜ್ಯೋತಿ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಜ್ಯೋತಿಗೆ ಎರಡು ವರ್ಷದ ಹಿಂದೆ ಬೇರೊಬ್ಬನೊಂದಿಗೆ ಮದುವೆಯಾಗಿದ್ದು (Marriage), ಈ ವಿಷಯವನ್ನು ಭೀಮಾಶಂಕರನಿಂದ ಮುಚ್ಚಿಟ್ಟಿದ್ದಳು. ಇದನ್ನೂ ಓದಿ: ಬಾಡಿಗೆ ಹಣದ ಆಸೆಗೆ ಚಿಕ್ಕಪ್ಪನ ಮಗನನ್ನೇ ಕೊಂದ
ಆದರೆ ಈ ವಿಚಾರ ತಿಳಿದ ಭೀಮಾಶಂಕರ ಜ್ಯೋತಿಯಿಂದ ದೂರವಾಗಿದ್ದ. ಇದೇ ಕಾರಣಕ್ಕೆ ಮೇ 25ರಂದು ರಾತ್ರಿ ಜ್ಯೋತಿ ಮಾತನಾಡುವ ನೆಪದಲ್ಲಿ ಆತನನ್ನು ಕರೆಸಿಕೊಂಡು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಆಗ ಭೀಮಾಶಂಕರ ಮದುವೆಗೆ ಒಪ್ಪದಿದ್ದಾಗ, ಕಾದಿದ್ದ ಬಿಸಿನೀರನ್ನು ಆತನ ಮುಖದ ಮೇಲೆ ಎರಚಿ ಬಿಯರ್ ಬಾಟ್ಲಿಯಿಂದ ಹಲ್ಲೆ (Attack) ಮಾಡಿದ್ದಾಳೆ. ಇದನ್ನೂ ಓದಿ: ಕಾರು, ಲಾರಿ ಮುಖಾಮುಖಿ ಡಿಕ್ಕಿ – ಕಾಂಗ್ರೆಸ್ ಮುಖಂಡ ಸ್ಥಳದಲ್ಲೇ ಸಾವು
ಘಟನೆಯಿಂದ ಗಂಭೀರ ಗಾಯಗೊಂಡ ಭೀಮಾಶಂಕರ ವಿಕ್ಟೋರಿಯಾ (Victoria) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಖಾಸಗಿ ಬಸ್, ಇನ್ನೋವಾ ಭೀಕರ ಅಪಘಾತ- 10 ಮಂದಿ ದುರ್ಮರಣ