ಬೆಂಗಳೂರು: ಜುಲೈ 27ಕ್ಕೆ ಕರೆ ನೀಡಿದ್ದ ಖಾಸಗಿ ಸಾರಿಗೆ ಒಕ್ಕೂಟಗಳ (Private Transport Union) ಬಂದ್ ಮುಂದೂಡಿಕೆಯಾಗಿದೆ.
ಇದೇ ತಿಂಗಳ 27ಕ್ಕೆ ಎಲ್ಲಾ ಖಾಸಗಿ ಸಾರಿಗೆಗಳನ್ನು ಬಂದ್ ಮಾಡಲು ಒಕ್ಕೂಟ ಎಚ್ಚರಿಕೆ ನೀಡಿದ್ದ ಹಿನ್ನೆಲೆ ಸೋಮವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಮ್ಯಾರಥಾನ್ ಮೀಟಿಂಗ್ ಮಾಡಿ ಬಂದ್ ಕೈ ಬಿಡಲು ಮನವಿ ಮಾಡಿದ್ದರು. ಆದರೆ ಬಂದ್ ಕೈ ಬಿಡದೇ ಮುಂದೂಡಿಕೆಗೆ ಒಕ್ಕೂಟ ಒಪ್ಪಿದೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವಷ್ಟು ಶಕ್ತಿ ಯಾರಿಗೂ ಇಲ್ಲ: ಕೊತ್ತೂರು ಮಂಜುನಾಥ್
Advertisement
Advertisement
ಜುಲೈ 27ರಂದು ಸರ್ಕಾರದ ವಿರುದ್ಧ ಮುಷ್ಕರಕ್ಕೆ (Strike) ಮುಂದಾಗಿದ್ದ ಆಟೋ, ಟ್ಯಾಕ್ಸಿ, ಕ್ಯಾಬ್ ಹಾಗೂ ಖಾಸಗಿ ಬಸ್ ಮಾಲೀಕರು ಬಂದ್ ನಿರ್ಧಾರ ವಾಪಸ್ ಪಡೆದಿದ್ದಾರೆ. ಇಂದು ಬೆಂಗಳೂರಿನ (Bengaluru) ಶಾಂತಿ ನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಖಾಸಗಿ ಸಾರಿಗೆ ಸಂಘಟನೆಗಳ ಜೊತೆ ಸಭೆ ನಡೆಸಿದರು. ಸುಮಾರು 34 ಸಂಘಟನೆಗಳ ಸದಸ್ಯರ ಸಮಸ್ಯೆಯನ್ನು ಆಲಿಸಿದರು. ಶಕ್ತಿ ಯೋಜನೆ ನಷ್ಟ ಪರಿಹಾರ ಸೇರಿ ಒಟ್ಟು 30 ಬೇಡಿಕೆಯನ್ನು ಖಾಸಗಿ ಸಾರಿಗೆಗಳ ಒಕ್ಕೂಟ ಸರ್ಕಾರದ ಮುಂದಿಟ್ಟಿದ್ದರು. ಇದನ್ನೂ ಓದಿ: ವೇಲು ನಾಯ್ಕರ್ ಡಿಕೆಶಿ ಬಗ್ಗೆಯೂ ಹೇಳಿದ್ದ – ಹನಿಟ್ರ್ಯಾಪ್ ಆರೋಪಕ್ಕೆ ಮುನಿರತ್ನ ತಿರುಗೇಟು
Advertisement
ಈ ಪೈಕಿ ಶಕ್ತಿ ಯೋಜನೆಯಿಂದಾಗುವ (Shakti Scheme) ನಷ್ಟ ಹಾಗೂ ವಾಹನ ನೋಂದಣಿ ದರ ಪರಿಷ್ಕರಣೆ ಹೊರತು ಪಡಿಸಿ ಉಳಿದ 28 ಬೇಡಿಕೆ ಶೀಘ್ರದಲ್ಲಿ ಈಡೇರಿಸುವ ಬಗ್ಗೆ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು. ಉಳಿದಂತೆ ಶಕ್ತಿ ಯೋಜನೆ ನಷ್ಟ ಪರಿಹಾರದ ಬಗ್ಗೆ ಸಿಎಂ ಜೊತೆ ಚರ್ಚಿಸುವುದಾಗಿ ಸಂಘಟನೆಗಳಿಗೆ ತಿಳಿಸಿದರು. ಸಚಿವರ ಭರವಸೆ ಹಿನ್ನೆಲೆ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಮುಷ್ಕರದ ನಿರ್ಧಾರ ವಾಪಸ್ ಪಡೆದಿದ್ದಾರೆ. ಇದನ್ನೂ ಓದಿ: ಸಾಂವಿಧಾನಿಕ ಜವಾಬ್ದಾರಿ, ಹೊಣೆಗಾರಿಕೆಯಿಂದ ಮೋದಿ ಸರ್ಕಾರ ಓಡಿ ಹೋಗುವಂತಿಲ್ಲ: ಖರ್ಗೆ ಟೀಕೆ
Advertisement
34 ಸಂಘಟನೆಗಳ ಸಮಸ್ಯೆ ಆಲಿಸಿದ ಸಚಿವರು ಆಟೋ ಸಂಘಟನೆ, ಕಾರು-ಟ್ಯಾಕ್ಸಿ ಒಕ್ಕೂಟ, ಹಾಗೆಯೇ ಖಾಸಗಿ ಬಸ್ ಮಾಲೀಕರ ಸಂಘದ ಜೊತೆ ಪ್ರತ್ಯೇಕವಾಗಿ ಸಭೆ ಮಾಡುವುದಾಗಿ ತಿಳಿಸಿದರು. ಜುಲೈ 31ರಂದು ಪ್ರತ್ಯೇಕವಾಗಿ ವಿವಿಧ ಒಕ್ಕೂಟದ ಪಧಾಧಿಕಾರಿಗಳ ಜೊತೆ ಮಿಟಿಂಗ್ ಮಾಡಿ ಸಮಸ್ಯೆ ಪರಿಹಾರದ ಬಗ್ಗೆ ಅವರು ಚರ್ಚಿಸಲಿದ್ದಾರೆ. ಇದನ್ನೂ ಓದಿ: ಉಚಿತವಾಗಿ ಕೊತ್ತಂಬರಿ ಸೊಪ್ಪು ವಿತರಿಸಿದ ಸಿದ್ದರಾಮಯ್ಯ ಅಭಿಮಾನಿ
ಸಚಿವರು ಕೊಟ್ಟ ಮಾತಿನಂತೆ ಮುಷ್ಕರ ಹಿಂಪಡೆದಿರುವ ಸಂಘಟನೆಗಳು ಆಗಸ್ಟ್ 10ರವರೆಗೆ ಡೆಡ್ ಲೈನ್ ನೀಡಿದ್ದಾರೆ. ಮಾತು ತಪ್ಪಿದರೆ ರಾಜ್ಯಾದ್ಯಂತ ಹೋರಾಟ ಮಾಡುವ ಎಚ್ಚರಿಕೆಯನ್ನು ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ನೀಡಿದೆ. ಇದನ್ನೂ ಓದಿ: ಜುಲೈ 27ರಂದು ಬಂದ್ ಆಗುತ್ತಾ ಬೆಂಗಳೂರು?
Web Stories