ಬೆಂಗಳೂರು: ಹುಬ್ಬಳ್ಳಿ ಸಮಾವೇಶದ ವೇಳೆ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಇಂದು ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಯಲಿದ್ದು, ಸ್ಪೀಕರ್ ರಮೇಶ್ ಕುಮಾರ್ ಅವರ ಮುಂದಿನ ನಡೆಯ ಬಗ್ಗೆ ಭಾರೀ ಕುತೂಹಲ ಮೂಡಿದೆ.
ಆಡಿಯೋದಲ್ಲಿ ಮಾತನಾಡಿದ್ದು ತಾನೇ ಎಂದು ಒಪ್ಪಿದ ಬಿಎಸ್‍ವೈ ಹೇಳಿದ್ದು ಹೀಗಾಗಿ ಬಿಎಸ್‍ವೈ ವಿರುದ್ಧ ದೋಸ್ತಿಗಳು ಎಸಿಬಿಗೆ ದೂರು ಕೊಡ್ತಾರಾ ಅಥವಾ ಬಿಎಸ್‍ವೈ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್‍ಗೆ ಸೂಚಿಸ್ತಾರಾ, ಸ್ಪೀಕರ್ ರಮೇಶ್ ಕುಮಾರ್ ಅವರು ಪ್ರಕರಣದ ತನಿಖೆಗೆ ಆದೇಶಿಸುತ್ತಾರಾ ಎಂಬುದು ಸದ್ಯದ ಕುತೂಹಲವಾಗಿದೆ. ಯಾಕಂದ್ರೆ ಆಡಿಯೋ ವಿಚಾರ ಕುರಿತಂತೆ ಭಾನುವಾರ ಸ್ಪೀಕರ್ ಅವರು ನ್ಯಾಯಸಮ್ಮತ ನಿರ್ಣಯ ಕೈಗೊಳ್ಳೋದಾಗಿ ತಿಳಿಸಿದ್ದರು. ಹೀಗಾಗಿ ಸ್ಪೀಕರ್ ನಿರ್ಧಾರದತ್ತ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.
ಹಾಗಾದ್ರೆ ದೋಸ್ತಿಗಳು ಏನ್ ಮಾಡ್ಬೋದು..?:
ವಿಧಾನಸಭೆಯಲ್ಲಿಂದು ದೋಸ್ತಿ ಸರ್ಕಾರ ಆಪರೇಷನ್ ಕಮಲ ಆಡಿಯೋ ಪ್ರಕರಣದ ಬಗ್ಗೆ ಗದ್ದಲ ಮಾಡಬಹುದು. ರಮೇಶ್ ಕುಮಾರ್ ಪ್ರಸ್ತಾಪಿಸಿದಾಗ ತನಿಖೆಯ ಆದೇಶ ಸ್ಪೀಕರ್ ವಿವೇಚನೆಗೆ ಬಿಡುವುದು. ಸ್ಪೀಕರ್ ಪ್ರಕರಣವನ್ನು ಎಸಿಬಿ ಸೇರಿದಂತೆ ಸೂಕ್ತ ಸಂಸ್ಥೆಗಳ ತನಿಖೆಗೆ ಒಪ್ಪಿಸಬಹುದು. ಹಕ್ಕು ಬಾದ್ಯತಾ ಸಮಿತಿ ಅಥವಾ ತನಿಖೆಗೆ ಸದನ ಸಮಿತಿ ರಚಿಸುವ ಅವಕಾಶವಿದೆ. ಒಂದು ವೇಳೆ ಸ್ಪೀಕರ್ ತನಿಖೆಗೆ ವಹಿಸದಿದ್ದರೆ ಸರ್ಕಾರವೇ ತನಿಖೆಗೆ ಸೂಚಿಸುವುದು. ಎಸಿಬಿ ತನಿಖೆಗೆ ಆದೇಶ ಮಾಡುವ ಮೂಲಕ ಬಿಎಸ್‍ವೈರನ್ನ ಇಕ್ಕಟ್ಟಿಗೆ ಸಿಲುಕಿಸೋದು. ಆಪರೇಷನ್ ಕಮಲದ ಆಡಿಯೋವನ್ನು ಎಫ್‍ಎಸ್‍ಎಲ್ ತನಿಖೆಗೆ ಒಪ್ಪಿಸುವುದು. ಬಿಜೆಪಿ ವಿಡಿಯೋ ಬಿಡುಗಡೆ ಮಾಡಿದ್ರೆ ಆಡಳಿತ ಪಕ್ಷವೂ ಕೂಡ ಗದ್ದಲಕ್ಕೆ ಇಳಿಯುವುದು.
ಆಡಿಯೋ ವರ್ಸಸ್ ವಿಡಿಯೋ ಸಮರ:
ಸದನದಲ್ಲಿಂದು ಬಿಎಸ್‍ವೈ ಆಡಿಯೋ ವರ್ಸಸ್ ಸಿಎಂ ವಿಡಿಯೋ ಸಮರ ನಡೆಯುತ್ತದೆ. ಆಪರೇಷನ್ ಕಮಲದ ಆಡಿಯೋಗೆ ವಿರುದ್ಧವಾಗಿ ಬಿಜೆಪಿ ವಿಡಿಯೋ ರಿಲೀಸ್ ಮಾಡಲಿದೆ. ಸಿಎಂ ಎಚ್‍ಡಿಕೆ ವಿಜುಗೌಡ ಬಳಿಕ 25 ಕೋಟಿ ಕೇಳಿದ ವಿಡಿಯೋ ಬಿಡುಗಡೆಯಾಗಲಿದೆ. ಈ ಮೂಲಕ ಸದನದಲ್ಲಿ ವಿಡಿಯೋ ಹಾಜರುಪಡಿಸಿ ಬಿಜೆಪಿ ತನಿಖೆಗೆ ಒತ್ತಾಯಿಸುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ವಿಧಾನಸಭೆ ಇಂದು ಆಡಿಯೋ, ವಿಡಿಯೋ ಫೈಟ್‍ಗೆ ಸಾಕ್ಷಿಯಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv