ಬೆಂಗಳೂರು: ಕೆಲ ದಿನ ಸಂಚಲನ ಸೃಷ್ಟಿಸಿ ಸೈಲೆಂಟ್ ಆಗಿದ್ದ ಪಿಎಸ್‍ಐ ನೇಮಕಾತಿ ಹಗರಣ(Karnataka PSI Scam) ಮತ್ತೆ ಸದ್ದು ಮಾಡಿದೆ. ಪಿಎಸ್‍ಐ ಗೋಲ್ಮಾಲ್ ಆಗಿದೆ ಅಂತ ಹೇಳಿದ್ದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಅವರೇ ಈ ಬಾರಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮೇಲೆ ಬಾಂಬ್ ಸಿಡಿಸಿದ್ದಾರೆ.
ಕಳೆದ ಬಾರಿ ಪಿಎಸ್‍ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿ ಮತ್ತು ಗೃಹ ಸಚಿವರ ಮಧ್ಯೆ ನಡೆದಿರುವ ಸಂಭಾಷಣೆಯ ಆಡಿಯೋವನ್ನು ಪ್ರಿಯಾಂಕ್ ರಿಲೀಸ್ ಮಾಡಿದ್ದಾರೆ. ಆಡಿಯೋದಲ್ಲಿ ಅಭ್ಯರ್ಥಿಯೊಬ್ಬ, ಸರ್ 545 ಹುದ್ದೆಗಳದ್ದು ಕ್ಲಿಯರ್ ಆಗಲಿ. ನಂತರ 402 ಹುದ್ದೆ ನೇಮಕ ಮಾಡಿ. ಇಲ್ಲವಾದಲ್ಲಿ 545 ಅಭ್ಯರ್ಥಿಗಳಿಗೆ ಅನ್ಯಾಯ ಆಗಲ್ವೇ ಅಂತ ಮನವಿ ಮಾಡಿದ್ದಾರೆ.
Advertisement
Advertisement
ಇದಕ್ಕೆ ಉತ್ತರಿಸಿರುವ ಗೃಹ ಸಚಿವರು, ಸರ್ಕಾರ ನಿಮ್ಮನ್ನ ಕೇಳಿ ಮಾಡಬೇಕೇ? ಈಗಾಗಲೇ 15 ಜನರಿಗೆ ಜಾಮೀನು ಸಿಕ್ಕಿದೆ. ಯಾರದ್ದೋ ಖುಷಿಗೆ ಸರ್ಕಾರ ಕೆಲಸ ಮಾಡಲ್ಲ. ಕಾನೂನು ಪ್ರಕಾರವೇ ಸರ್ಕಾರ ಹೋಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ಅಭ್ಯರ್ಥಿ ಮಾತು ಮುಂದುವರಿಸಿ, ಅದು ಹೇಗೆ ಜಾಮೀನು ಸಿಗುತ್ತೆ? ಡಿಜಿ, ಐಜಿಪಿ, ಕಲಬುರಗಿ ಆಯುಕ್ತರಿಗೆ ಸಾಕ್ಷ್ಯ ಕೊಟ್ಟಿದ್ದೇವೆ. ನೀವೇಕೆ ತನಿಖೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನೇಕಾರರಿಗೆ 2 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ – ಸಿಎಂ ಘೋಷಣೆ
Advertisement
ಇದಕ್ಕೆ ಉತ್ತರಿಸಿರುವ ಗೃಹ ಸಚಿವರು ಟೆಕ್ನಿಕಲ್ ಪ್ರಾಬ್ಲಂ ಇರಬಹುದು ಅಂದಿದ್ದಾರೆ. ಆಡಿಯೋ ರಿಲೀಸ್ ಬಳಿಕ ಸರ್ಕಾರದ ವಿರುದ್ಧ ಕಿಡಿಕಾರಿರುವ ಪ್ರಿಯಾಂಕ್, ಮೂವರು ಸಚಿವರ ಮೇಲೆ ದೂರಿದೆ. ಆ ಮೂವರು ಎಂಎಲ್‍ಎಗಳು ಯಾರು? ಶಾಸಕರ ಭವನದಲ್ಲೇ ಡೀಲ್ ಆಗಿದೆ. ಯಾಕೆ ಆ ಶಾಸಕರ ಮೇಲೆ ಕ್ರಮ ತೆಗೆದುಕೊಳ್ಳಲಿಲ್ಲ ಅಂತ ಪ್ರಶ್ನೆ ಹಾಕಿದ್ದಾರೆ.
Advertisement
ಇದಕ್ಕೆ ಸಿಎಂ ತಿರುಗೇಟು ಕೊಟ್ಟಿದ್ದು, ಹಳೇ ಆಡಿಯೋ-ಈಗ ಹೊಸ ಆಡಿಯೋ ಎರಡರ ಬಗ್ಗೆಯೂ ಪ್ರಿಯಾಂಕ್‍ಗೆ ಸ್ಪಷ್ಟತೆಯೇ ಇಲ್ಲ ಅಂದಿದ್ದಾರೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – ಭಾರತಕ್ಕೆ ಅಂಧರ ವಿಶ್ವಕಪ್
ಈ ಮಧ್ಯೆ ಪಿಎಸ್‍ಐ ಅಕ್ರಮ ಆರೋಪಿ, ಜಾಮೀನಿನ ಮೇಲೆ ಹೊರ ಬಂದಿರುವ ಮಹಾಂತೇಶ್ ಪಾಟೀಲ್‍ಗೆ ಕಾಂಗ್ರೆಸ್‍ನ ಮುಖಂಡ ಅಲ್ಲಮಪ್ರಭು ಪಾಟೀಲ್ ಸನ್ಮಾನ ಮಾಡಿದ್ದಾರೆ.