ಬೆಂಗಳೂರು: ಆಡಿಯೋ ಸ್ಫೋಟದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಭಾರೀ ಮುಜುಗರ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಯಡಿಯೂರಪ್ಪ ಅವರಿಗೆ ಮತ್ತೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ದೋಸ್ತಿಗಳ ಕಿತ್ತಾಟ ಎಲ್ಲೆಡೆ ಕಂಡುಬರ್ತಿದೆ. ಜಗಜ್ಜಾಹೀರಾಗಿದೆ. ಇದನ್ನು ಎನ್‍ಕ್ಯಾಶ್ ಮಾಡ್ಕೊಳ್ಳೋದು ಬಿಟ್ಟು ನೀವು ಮಾಡ್ತಿರೋದೇನು..? ನೀವು ಬಿರುಕು ದೊಡ್ಡದು ಮಾಡೋದು ಬಿಟ್ಟು ತೇಪೆ ಹಚ್ತಿದ್ದೀರಿ. ಏಯ್ ಕ್ಯಾ ಹೈ ಆಡಿಯೋ ಗದ್ದಲ. ಹುಷಾರಾಗಿ ಮಾಡ್ಬೇಕು ತಾನೆ. ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮುಜುಗರ ತರ್ತಾ ಇದ್ದೀರಿ. ಇದು ಸರೀನಾ ಎಂದು ಬಿಜೆಪಿ ಹೈಕಮಾಂಡ್ ಬಿಎಸ್‍ವೈ ಗೆ ಕ್ಲಾಸ್ ತೆಗೆದುಕೊಂಡಿದೆ.
Advertisement
Advertisement
ಬರೀ ಇದ್ರಲ್ಲೇ ಮುಳುಗಿದ್ರೆ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಯಾವಾಗ ಮಾಡೋದು. ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸೀಟು ಗೆಲ್ತೀರಾ ಎಂದು ಪ್ರಶ್ನಸಿದಿ ಅವರು ಈ ಬೆಳವಣಿಗೆಗಳಿಂದ ಪಕ್ಷಕ್ಕೆ ಹಿನ್ನಡೆ ಆಗುತ್ತದೆ. ಡ್ಯಾಮೇಜ್ ಕಂಟ್ರೋಲ್‍ಗೆ ಹಾಸನ ಗದ್ದಲ ಪ್ರಕರಣವನ್ನು ಹೈಪ್ ಮಾಡಿ. ಈ ಕೂಡಲೇ ಎಲ್ಲೆಡೆ ಪ್ರೊಟೆಸ್ಟ್ ಮಾಡಿ. ಸರ್ಕಾರದ ವಿರುದ್ಧ ಮುಗಿಬೀಳುವಂತೆ ಗರಂ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹುಡುಗಾಟಿಕೆ ಆಡ್ಬಿಟ್ರಿ ನೀವು- ಬಿಎಸ್‍ವೈ ಆಡಿಯೋಗೆ ಹೈಕಮಾಂಡ್ ಕೆಂಡಾಮಂಡಲ
Advertisement
ಇತ್ತ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಇಂದು ಮಧ್ಯಾಹ್ನ ರಾಜ್ಯಕ್ಕೆ ಆಗಮಿಸಲಿದ್ದು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಶಾಗೆ ಬಿಎಸ್‍ವೈ ಅವರು ವಿವರಣೆ ಕೊಡಬೇಕಿದ್ದರು. ಆದ್ರೆ ರಾಜ್ಯಕ್ಕೆ ಬಂದ್ರೂ ಅವರನ್ನು ಭೇಟಿ ಮಾಡದಿರಲು ಬಿಎಸ್‍ವೈ ಪ್ಲಾನ್ ಮಾಡಿದ್ದಾರೆ. ಅಧಿವೇಶನದ ನೆಪ ಒಡ್ಡಿ ಅಮಿತ್ ಶಾರಿಂದ ದೂರ ಉಳಿಯಲು ಬಿಎಸ್‍ವೈ ಯತ್ನಿಸಿದ್ದು, ಅಧಿವೇಶನ ಇದೆ. ಸಾಧ್ಯವಾದ್ರೆ ಮಾತ್ರ ಬರ್ತೀನಿ, ಇಲ್ಲದಿದ್ದರೆ ಆಗಲ್ಲ ಎಂದಿದ್ದಾರೆ. ಈ ಮೂಲಕ ಅಮಿತ್ ಶಾ ಭೇಟಿ ಕಷ್ಟ ಎಂಬ ಸಂದೇಶವನ್ನು ಬಿಎಸ್‍ವೈ ರವಾನಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv