ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್’ ಕನ್ನಡ ಆರನೇ ಆವೃತ್ತಿಯ ಆರಂಭಕ್ಕೆ ದಿನಾಂಕ ನಿಗದಿಯಾಗಿದ್ದು, ಇದೇ ತಿಂಗಳು 21ಕ್ಕೆ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಆದರೆ ರಿಯಾಲಿಟಿ ಶೋ ಆರಂಭಕ್ಕೂ ಮುನ್ನಾ ಪ್ರೇಕ್ಷಕರು ಬಿಗ್‍ಬಾಸ್ ಗೆ ಬೇಡಿಕೆಯಿಟ್ಟಿದ್ದಾರೆ.
ಖಾಸಗಿ ವಾಹಿಯೂ ಇತ್ತೀಚೆಗೆ ಬಿಗ್‍ಬಾಸ್ ನ ಪ್ರೋಮೋ ಒಂದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದೆ. ಈ ಪ್ರೋಮೋದಲ್ಲಿ ನಟ ಸುದೀಪ್ ಮಾತನಾಡಿದ್ದು, ಈ ಪ್ರೋಮೋ ನೋಡಿ ಪ್ರೇಕ್ಷಕರು ಕಮೆಂಟ್ ಗಳ ಮೂಲಕ ತಮ್ಮ ಅನಿಸಿಕೆ ಮತ್ತು ಬೇಡಿಕೆಗಳನ್ನು ತಿಳಿಸಿದ್ದಾರೆ.
ಬಿಗ್‍ಬಾಸ್ ಶೋ ನಲ್ಲಿ ಮೊದಲ ಆವೃತ್ತಿಯಿಂದಲೂ ಐಟಿ ಉದ್ಯೋಗಿಗಳು ಸ್ಪರ್ಧಿಗಳಾಗಿ ಕಾಣಿಸಿಕೊಂಡಿಲ್ಲ. ಆದ್ದರಿಂದ ಈ ಬಾರಿಯಾದರೂ ಐಟಿ ಉದ್ಯೋಗಿಗೆ ಅವಕಾಶ ಕೊಡಿ ಎಂದು ಬಿಗ್‍ಬಾಸ್ ಬಳಿ ಟೆಕ್ಕಿಗಳು ಮನವಿ ಮಾಡಿಕೊಂಡಿದ್ದಾರೆ. ಅದರಲ್ಲೂ ಕನ್ನಡಿಗರಿಗೆ ಅವಕಾಶ ಕೊಡಿ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಾಡಿನ ಮೂಲಕ ಗುರುತಿಸಿಕೊಂಡಿರುವ ತುಳಸಿ ಪ್ರಸಾದ್ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ದಯವಿಟ್ಟು ತುಳಸಿ ಪ್ರಸಾದ್ ಆಯ್ಕೆ ಮಾಡಬೇಡಿ. ಒಂದು ವೇಳೆ ಆಯ್ಕೆ ಮಾಡಿದರೆ `ಬಿಗ್‍ಬಾಸ್ ಬ್ಯಾನ್’ ಎಂದು ಒಂದು ಆಂದೋಲನ ಶುರುವಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಲವರು ಬಿಗ್ ಬಾಸ್ ಮನೆಯಲ್ಲಿ ಒಂದಲ್ಲ ಒಂದು ಲವ್ ಸ್ಟೋರಿ ಆಗುತ್ತಿದೆ. ಈ ಬಾರಿ ನಮಗೆ ಫೇಕ್ ಲವ್ ಸ್ಟೋರಿ ಬೇಡ. ಅದನ್ನು ನೋಡಲು ನಮಗೆ ಇಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಈ ಸಲದ ಕನ್ನಡ ಬಿಗ್ ಬಾಸ್ ಮನೆಗೆ ಜನಸಾಮಾನ್ಯರ ಸಂಖ್ಯೆ ಎಷ್ಟು? ಸೆಲೆಬ್ರಿಟಿಗಳ ಸಂಖ್ಯೆ ಎಷ್ಟು? ಅದರಲ್ಲಿ ಹೆಣ್ಣು ಮಕ್ಕಳು ಎಷ್ಟು? ಗಂಡು ಮಕ್ಕಳು ಎಷ್ಟು? ಎಂದು ಪ್ರಶ್ನೆ ಕೇಳಿದ್ದಾರೆ.
ತುಂಬಾ ಜನರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಲು ಇಷ್ಟಪಟ್ಟಿದ್ದು, ನಮ್ಮನ್ನು ಆಯ್ಕೆ ಮಾಡಿ ಬಿಗ್‍ಬಾಸ್ ಎಂದು ಕೇಳಿಕೊಂಡಿದ್ದಾರೆ. ಆಯ್ಕೆಯಾಗದಿರುವವರು ಅವರ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಎಂಬ ಶೀರ್ಷಿಕೆಯನ್ನು ಕನ್ನಡದಲ್ಲಿ ಬಳಸಿದ್ದಕ್ಕೆ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. ತುಂಬಾ ಜನರು ಸುದೀಪ್ ಅವರ ಅಭಿನಯವನ್ನು ಮೆಚ್ಚಿಕೊಂಡು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನಾವು ಬಿಗ್‍ಬಾಸ್ ಶೋಗೆ ಕಾತುರದಿಂದ ಕಾಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv