ತುಮಕೂರು: ಸಣ್ಣ ನೀರಾವರಿ ಇಲಾಖೆಯ (Minor Irrigation Department) ಅಧಿಕಾರಿಗಳು ಮತ್ತು ನೌಕರರ ಮಧ್ಯದ ಜಗಳ ಬೀದಿಗೆ ಬಂದಿದ್ದು, ಅಧಿಕಾರಿಗಳು ಕಚೇರಿ ಒಳಗಡೆ ಇರುವಾಗಲೇ ಅಟೆಂಡರ್ (Attendent) ಕಚೇರಿಗೆ ಬೀಗ ಹಾಕಿ ಪರಾರಿಯಾದ ಪ್ರಸಂಗ ತುಮಕೂರಿನಲ್ಲಿ (Tumakuru) ನಡೆದಿದೆ.
ತುಮಕೂರು ನಗರದ ವಿದ್ಯಾನಗರದಲ್ಲಿರುವ ಇಲಾಖೆಯ ಕಚೇರಿಗೆ ಮಂಗಳವಾರ ಸಂಜೆ 4:50ರ ವೇಳೆಗೆ ಅಟೆಂಡರ್ ಕೆ.ಎಂ.ಅಜಾಜ್ ಪಾಷ ಬೀಗ ಹಾಕಿದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಪ್ಪೇಸ್ವಾಮಿ, ಇಬ್ಬರು ಎಂಜಿನಿಯರ್ ಸೇರಿ 7 ಜನ ಸಿಬ್ಬಂದಿ ಕಚೇರಿ ಒಳಗೆ ಇದ್ದರು. ಇದನ್ನೂ ಓದಿ: 7 ವಾರಗಳ ಬಳಿಕ ಸರ್ಜರಿ ಮಾಡಿಸದೇ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್
Advertisement
Advertisement
ಎಂಜಿನಿಯರ್ ತಿಪ್ಪೇಸ್ವಾಮಿ 112ಕ್ಕೆ ಕರೆ ಮಾಡಿದ ತಕ್ಷಣ ಪೊಲೀಸರು ಕಚೇರಿ ಬಳಿಗೆ ಬಂದರು. ಅಜಾಜ್ ಪಾಷಗೆ ಪೊಲೀಸರು ಕರೆ ಮಾಡಿ ಕಚೇರಿಗೆ ಕರೆಸಿಕೊಂಡು, 5:30ಕ್ಕೆ ಬೀಗ ತೆಗೆಸಿದ್ದಾರೆ. ಅಧಿಕಾರಿಗಳು ಸುಖಾಸುಮ್ಮನೆ ಕಿರುಕುಳ ನೀಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಗೌರವಯುತವಾಗಿ ನಡೆದುಕೊಳ್ಳುತ್ತಿಲ್ಲ. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಬದಲಾವಣೆಯಾಗಿಲ್ಲ. ಪದೇ ಪದೇ ಅವಮಾನ ಮಾಡುತ್ತಾರೆ’ ಎಂದು ಬೇಸತ್ತು ಹೀಗೆ ಮಾಡಿದ್ದೇನೆ ಎಂದು ಪಾಷಾ ದೂರಿದ್ದಾರೆ. ಇದನ್ನೂ ಓದಿ: ಅವರು ತೆರಿಗೆ ವಿಧಿಸಿದ್ರೆ ನಾವು ಅವರ ಮೇಲೆ ಅಷ್ಟೇ ತೆರಿಗೆ ಹಾಕ್ತೀವಿ: ಭಾರತಕ್ಕೆ ಟ್ರಂಪ್ ಸಂದೇಶ
Advertisement