ಬಳ್ಳಾರಿ: ಐವರು ಖದೀಮರು ಬೀಗ ಮುರಿದು ಬೇಕರಿ ಅಂಗಡಿಯ ಕಳ್ಳತನಕ್ಕೆ ಯತ್ನಿಸಿದ ಘಟನೆ ಬಳ್ಳಾರಿ (Ballari) ಜಿಲ್ಲೆ ಸಿರುಗುಪ್ಪ ತಾಲೂಕಿನ ಬಗ್ಗೂರು ಕ್ರಾಸ್ ಬಳಿ ನಡೆದಿದೆ.
ಬೊಲೆರೊ ಕ್ಯಾಂಪರ್‌ನಲ್ಲಿ (Bolero Camper) ಬಂದಿದ್ದ ಐವರು ಕಳ್ಳರು, ಕಬ್ಬಿಣದ ರಾಡ್‌ಗಳಿಂದ ಸಿಸಿ ಕ್ಯಾಮೆರಾ (CC Camera) ಧ್ವಂಸ ಮಾಡಿ ಬೇಕರಿಯ ಬೀಗ ಒಡೆದಿದ್ದಾರೆ.
ಬೀಗ ಒಡೆಯುವ ಶಬ್ದಕ್ಕೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಬೇಕರಿ ಮಾಲೀಕನಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬೇಕರಿ ಮಾಲೀಕ ಮಲ್ಲನಗೌಡ ತನ್ನ ಮೊಬೈಲಿನಲ್ಲಿ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಹಾಕಿದ್ದಕ್ಕೆ ಹಲ್ಲೆ ಆರೋಪ – ಆರೋಪಿಗಳು ಎಸ್ಕೇಪ್
ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸಿಸಿ ಕ್ಯಾಮೆರಾ ಒಡೆಯುವ ಮತ್ತು ಶಟರ್ ಬೀಗ ಮುರಿಯುವುದನ್ನು ಗಮನಿಸಿ ಕೂಡಲೇ ಮಲ್ಲನಗೌಡ ಬೈಕ್ ತೆಗೆದುಕೊಂಡು ಬೇಕರಿ ಬಳಿ ಬಂದಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬದ ದಿನವೇ ದುರಂತ – ನದಿಗೆ ಈಜಲು ಹೋಗಿದ್ದ 3 ಬಾಲಕರು ನೀರುಪಾಲು
ಈ ಸಂದರ್ಭದಲ್ಲಿ ಇಬ್ಬರು ಕಳ್ಳರು ಮಲ್ಲನಗೌಡನಿಗೆ ಚಾಕು ತೋರಿಸಿ, ಬೈಕ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಮೂವರು ಬೊಲೆರೊ ವಾಹನದಲ್ಲಿ ಪರಾರಿಯಾಗಿದ್ದಾರೆ. ಮಾಲೀಕ ಮಲ್ಲನಗೌಡ ಸಿರುಗುಪ್ಪ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಂಧ್ರ ಮೂಲದ ಕಳ್ಳರೇ ಈ ಕೃತ್ಯ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.