ಮಡಿಕೇರಿ: ಆಸ್ತಿ (Property) ವಿಚಾರವಾಗಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದು, ಬಳಿಕ ಯುವಕನ ಮೇಲೆ ಗುಂಡು ಹಾರಿಸಿ ಕೊಲೆ ಯತ್ನಕ್ಕೂ ಮುಂದಾಗಿರುವ ಘಟನೆ ಕೊಡಗು (Kodagu) ಜಿಲ್ಲೆಯ ಮಡಿಕೇರಿ (Madikeri) ತಾಲೂಕಿನ ಬಿಳಿಗೇರಿ ಗ್ರಾಮದಲ್ಲಿ ನಡೆದಿದೆ.
ಕಳೆದ ಎರಡು-ಮೂರು ತಿಂಗಳಿನಿಂದ ಆಸ್ತಿ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿದ್ದು, ನಿನ್ನೆ ಇದು ತಾರಕಕ್ಕೆ ಏರಿ ಯುವಕನ ಮೇಲೆ ಗುಂಡು ಹಾರಿಸಿದ್ದ ಆರೋಪ ಕೇಳಿಬಂದಿದೆ. ಅಲ್ಲದೇ ಗುಂಡು ಹಾರಿಸಿದ ಆರೋಪದಲ್ಲಿ ಮತ್ತೊಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
- Advertisement -
- Advertisement -
ಹೊಡೆದಾಟದಲ್ಲಿ ನಿಶ್ಚಲ್ ಎಂಬ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ನಿಶ್ಚಲ್ ಎಂಬ ವ್ಯಕ್ತಿಯ ಕೈಮುರಿದಿದ್ದು, ತಲೆಗೂ ಗಂಭೀರ ಪೆಟ್ಟುಯಾಗಿದೆ. ಇದಕ್ಕೂ ಮೊದಲು ನಿಶ್ಚಲ್, ತೀರ್ಥ ಎಂಬಾತನ ಮೇಲೆ ಗನ್‌ನಿಂದ ಶೂಟ್ ಮಾಡಿದ ಆರೋಪವು ಕೇಳಿ ಬಂದಿದ್ದು, ಈ ವೇಳೆ ತೀರ್ಥನ ಕೈಗೆ ಸಣ್ಣ ಗಾಯವಾಗಿದೆ. ಆದರೆ ತೀರ್ಥ ಚಲಾಯಿಸುತ್ತಿದ್ದ ಜೀಪಿಗೆ ಗುಂಡೇಟು ಬಿದ್ದಿದೆ. ಜೀಪಿನ ಸೀಟನ್ನು ಸೀಳಿದೆ. ಆದರೆ ತೀಥ ಗುಂಡೇಟಿನಿಂದ ತಪ್ಪಿಸಿಕೊಂಡಿದ್ದಾರೆ.
- Advertisement -
ಘಟನೆಯೇನು?: ಬಿಳಿಗೇರಿ ಗ್ರಾಮದಲ್ಲಿ ಇರುವ ಸುಮಾರು 7 ಎಕರೆ ಕಾಫಿ ತೋಟವನ್ನು ನಿಶ್ಚಲ್ ಇತ್ತೀಚಿಗೆ ಖರೀದಿ ಮಾಡಿದ್ದ. ಆದರೆ ಈ ಕಾಫಿ ತೋಟವನ್ನು ಕಳೆದ 30 ವರ್ಷಗಳಿಂದ ತೀರ್ಥ ಅವರ ತಂದೆ ನೋಡಿಕೊಳ್ಳುತ್ತಿದ್ದರು. ಅಲ್ಲದೇ ತೋಟದ ಜಾಗಕ್ಕೆ ದಾಖಲೆಗಳನ್ನು ಮಾಡಲು ಮುಂದಾಗಿದ್ದರು. ಆದರೆ ತೋಟವನ್ನು ಬೇರೆ ಅವರ ಕೈಯಿಂದ ನಿಶ್ಚಲ್ ಖರೀದಿ ಮಾಡಿರುವುದರಿಂದ ಈ ಪ್ರಕರಣ ಕಳೆದ 6 ತಿಂಗಳ ಹಿಂದೆಯೇ ಕೋರ್ಟ್ ಮೆಟ್ಟಿಲು ಏರಿತ್ತು. ಆದರೆ ತೀರ್ಥ ಕಾಫಿ ತೋಟವನ್ನು ಬೇರೆ ಅವರಿಗೆ ಕಾಫಿಗೆ ಲೀಜ್ ನೀಡಿದ್ದರು. ಇದನ್ನು ಪ್ರಶ್ನಿಸಲು ನಿಶ್ಚಲ್ ಸ್ಥಳಕ್ಕೆ ಹೋಗಿರುವಾಗ 2 ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದು ಗುಂಡು ಹೊಡೆಯುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ. ಇದನ್ನೂ ಓದಿ: ದಲಿತರ ನೀರಿನ ತೊಟ್ಟಿಗೆ ಮಲ ಸುರಿದು ವಿಕೃತಿ – ಹಲವರು ಅಸ್ವಸ್ಥ
- Advertisement -
ಘಟನಾ ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಭೇಟಿ ಪರಿಶೀಲನೆ ನಡೆಸಿದರು. ಸದ್ಯ ಇಬ್ಬರು ಯುವಕರಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಇದನ್ನೂ ಓದಿ: ಗ್ಯಾಂಬಿಯಾ ಬಳಿಕ ಈಗ ಉಜ್ಬೇಕಿಸ್ತಾನದಿಂದ ಆರೋಪ – 18 ಮಕ್ಕಳ ಸಾವಿಗೆ ಭಾರತದ ಸಿರಪ್ ಕಾರಣ