ಉಡುಪಿ: ಇಬ್ಬರು ಬುರ್ಖಾಧಾರಿ ಮಹಿಳೆಯರು ಮಗುವನ್ನು ಅಪಹರಿಸಲು ಯತ್ನಿಸಿರುವುದು ಉಡುಪಿಯ (Udupi) ಕಾಪು (Kapu) ತಾಲೂಕಿನ ಬೆಳಪು ಗ್ರಾಮದಲ್ಲಿ ನಡೆದಿದೆ. ಈ ವೇಳೆ, ತಡೆಯಲು ಬಂದ ಮಗುವಿನ ತಾಯಿಗೆ ಬುರ್ಖಾಧಾರಿ ಮಹಿಳೆಯರು ಚಾಕು ಇರಿದಿದ್ದಾರೆ.
ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಕಾಲೋನಿಯ ಮೊಹಮ್ಮದ್ ಅಲಿ ಮನೆಗೆ ಇಬ್ಬರು ಬುರ್ಖಾಧಾರಿಗಳು ಬಂದು, ಶೌಚಾಲಯ ಬಳಸುತ್ತೇವೆ ಎಂದು ಮನೆಗೆ ಪ್ರವೇಶಿಸಿದ್ದರು. ಈ ವೇಳೆ ಓರ್ವ ಬುರ್ಖಾಧಾರಿ ಮಹಿಳೆ ತೊಟ್ಟಿಲಿನಲ್ಲಿ ಮಲಗಿದ್ದ ಮಗುವನ್ನ ಎತ್ತಿಕೊಂಡು ಓಡಿ ಹೋಗಲು ಯತ್ನಿಸಿದ್ದಾಳೆ. ಇದನ್ನೂ ಓದಿ: Kolar | ವಿದ್ಯುತ್ ತಂತಿ ಸ್ಪರ್ಶಿಸಿ ಸಾರಿಗೆ ನೌಕರ ಸಾವು
ತಕ್ಷಣ ಮಹಿಳೆಯನ್ನು ಮಗುವಿನ ತಾಯಿ ತಾಬರಿಸ್ ತಡೆದಿದ್ದಾರೆ. ಈ ವೇಳೆ ಮಗುವನ್ನು ಬಿಟ್ಟು, ತಾಬರಿಸ್‍ಗೆ ಮಹಿಳೆಯರು ಚಾಕು ಇರಿದು ಪರಾರಿಯಾಗಿದ್ದಾರೆ.
ಶಿರ್ವ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಹಿಳೆಯರು ಧರಿಸಿದ್ದ ಬುರ್ಖಾ ಬೆಳಪು ರೈಲ್ವೇ ಹಳಿಯ ಮೇಲೆ ಪತ್ತೆಯಾಗಿದೆ. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ಹಗ್ ಮಾಡ್ತೀನಿ – ಪೋಸ್ಟ್ ಹಾಕಿ ಪೊಲೀಸರ ಅತಿಥಿಯಾದ ಯುವಕ