ಮೈಸೂರು: ಮಾವನೇ ಸೊಸೆ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ ಘಟನೆ ಹುಣಸೂರಿನ ಗೋಕುಲ ರಸ್ತೆ ಎನ್.ಎಸ್ ಕ್ವಾಟ್ರರ್ಸ್ನಲ್ಲಿ ನಡೆದಿದೆ. ಎರಡು ಬಾರಿ ಅತ್ಯಾಚಾರಕ್ಕೆ ಯತ್ನಿಸಿದ ಮಾವ ಹಾಗೂ ಅದನ್ನು ತಡೆಯಲು ಪ್ರಯತ್ನಿಸದ ಪತಿಯ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ.
ಹುಣಸೂರಿನ ಕಟ್ ನೋಟ್ವ್ಯಾಪಾರಿ ಇಕ್ಬಾಲ್ ಅಹ್ಮದ್, ತಾಲೂಕಿನ ಟ್ಯಾಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ರಾಸಾಯನ ಶಾಸ್ತ್ರ ಅತಿಥಿ ಉಪನ್ಯಾಸಕ ಹಾಗೂ ಜಮಾತೆ ಇಸ್ಲಾಂ ಹಿಂದ್ ಸಂಘಟನೆಯ ಸಕ್ರಿಯ ಸದಸ್ಯನಾಗಿರುವ ರಶೀದ್ ಅಹ್ಮದ್ ಸೇರಿದಂತೆ 8 ಮಂದಿಯ ವಿರುದ್ಧ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾಳೆ.
Advertisement
Advertisement
ಒಂದು ವರ್ಷದ ಹಿಂದೆ ಪಿರಿಯಾಪಟ್ಟಣ ತಾಲೂಕಿನ ಚಿಕ್ಕ ನೇರಳೆ ಗ್ರಾಮದ ಯುವತಿಯ ಜೊತೆಗೆ ರಶೀದ್ ಅಹ್ಮದ್ ಮದುವೆಯಾಗಿತ್ತು. ಮದುವೆಯ 6 ತಿಂಗಳ ಬಳಿಕ ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡಲಾಗುತ್ತಿದೆ ಮತ್ತು ಅತ್ಯಚಾರಕ್ಕೆ ಪ್ರಯತ್ನ ನಡೆಸಲಾಗಿದ್ದು, ಸಹಕರಿಸದ ಹಿನ್ನೆಲೆ ದೈಹಿಕ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಮುಖಂಡರು ಮನೆಯಲ್ಲಿ ಡ್ರಾಫ್ಟ್ ರೆಡಿ ಮಾಡಿ, ಮೋದಿಗೆ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ: ರೇಣುಕಾಚಾರ್ಯ
Advertisement
ಮಾವ ಇಕ್ಬಾಲ್ ಅಹ್ಮದ್ 2 ಬಾರಿ ಅತ್ಯಾಚಾರಕ್ಕೆ ಪ್ರಯತ್ನಪಟ್ಟಿದ್ದಾನೆ. ಇದಕ್ಕೆ ಅತ್ತೆ ಪರ್ವಿನ್ ತಾಜ್, ನಾದಿನಿ ರಜಿಯಾ ಮತ್ತೊಬ್ಬ ನಾದಿನಿ ಹಸೀನಾ ಆಕೆಯ ಗಂಡ ಕುಶಾಲನಗರ ದನಿನಾ ಪೇಟೆ ಮುಸ್ಲಿಂ ಜಮಾತ್ ಮಸೀದಿ ಸೆಕ್ರೆಟರಿ ಇರ್ಫಾನ್, ಗಂಡನ ಅಣ್ಣಾ ಮೆಕ್ಯಾನಿಕ್ ಮುಕ್ತರ್, ವಾರಗಿತ್ತಿ ಹೂರ್ ಬಾನು ಕುಮ್ಮಕ್ಕು ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
Advertisement
ಮನೆಯವರ ಕುಮ್ಮಕ್ಕುನಿಂದ ಮಾವ ಇಕ್ಬಾಲ್ ಅಹ್ಮದ್ ಪದೇ ಪದೇ ಅತ್ಯಚಾರಕ್ಕೆ ಪ್ರಯತ್ನಿಸಿದ್ದಾನೆ. ಇದನ್ನು ಪತಿ ರಶೀದ್ ಅಹ್ಮದ್ ಮುಂದೆ ಹೇಳಿಕೊಂಡರು ಸ್ಪಂದಿಸಿಲ್ಲ. ಪತಿ ಮನೆಯವರ ನೀಚ ವರ್ತನೆ ಕಂಡು ಸಂತ್ರಸ್ತ ಮಹಿಳೆ ತವರು ಮನೆಗೆ ವಿಷಯ ತಿಳಿಸಿದ್ದಾಳೆ. ಇದಾದ ಬಳಿಕ ಟ್ಯಾಲೆಂಟ್ ಸಂಸ್ಥೆ ಮಾಲೀಕರಳ್ಳಿ ಒಬ್ಬರಾದ ನವೀನ್ ರೈ ನೇತೃತ್ವದಲ್ಲಿ ನ್ಯಾಯ ಪಂಚಾಯಿತಿ ಮಾಡಲಾಗಿತ್ತು. ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸುವ ಯೋಚನೆ ಮಾಡಿದರೆ ಬಡವರ ಹಸಿವಿನ ಬೆಂಕಿಯಲ್ಲಿ ಬೆಂದು ಹೋಗುತ್ತೀರಿ: ಸಿದ್ದು ಕಿಡಿ
ಇದಕ್ಕೂ ಯಾವುದೇ ಕಿಮ್ಮತ್ತು ಕೊಡದೇ ಮತ್ತೊಮ್ಮೆ ಅತ್ಯಾಚಾರಕ್ಕೆ ಪ್ರಚೊದನೆ ನೀಡುವ ವರ್ತನೆ ಕುಟುಂಬಸ್ಥರು ನೀಡಿದ್ದಾರೆ. ಹಲ್ಲೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ಸದ್ಯ ಹುಣಸೂರು ಪಟ್ಟಣ ಠಾಣೆಯಲ್ಲಿ 498ಂ, 354, 504, 506, 323, 149 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ಪ್ರಭಾವ ಬಳಸಿ ಇಡೀ ಕುಟುಂಬ ತಲೆಮರೆಸಿಕೊಂಡಿದ್ದು, ಹುರ್ ಬಾನು ಪ್ರಕರಣ ದಾಖಲಾಗುವ ಮುನ್ಸೂಚನೆ ಅರಿತು ದುಬೈಗೆ ಪರಾರಿಯಾಗಿದ್ದಾಳೆ. ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.