– ಇಬ್ಬರು ನೌಕಾ ನೆಲೆಯ ಸಿಬ್ಬಂದಿಗೆ ಕರೆ
ಕಾರವಾರ: ಪಹಲ್ಗಾಮ್ ದಾಳಿಯ (Pahalgam Terrorist Attack) ಬಳಿಕ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಪಾಕಿಸ್ತಾನವನ್ನು ತತ್ತರಿಸುವಂತೆ ಮಾಡಿದೆ. ಆದರೀಗ ಕುತಂತ್ರಿ ಪಾಕಿಸ್ತಾನ ತನ್ನ ಬೇಹುಗಾರಿಕಾ ಏಜಂಟರನ್ನು ಬಳಸಿ ಕಾರವಾರದ ಕದಂಬ ನೌಕಾನೆಲೆಯ (Kadamba Naval Base) ಯುದ್ಧ ನೌಕೆಗಳು ಹಾಗೂ ವಿಶಾಖಪಟ್ಟಣಂ ನಲ್ಲಿರುವ ನೌಕೆಗಳ ಮಾಹಿತಿ ಪಡೆಯಲು ಯತ್ನಿಸಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಭಾರತೀಯ ನೌಕಾದಳದ ಅಧಿಕಾರಿಗಳ ಹೆಸರು ಬಳಸಿ ಕರೆ ಮಾಡುವ ಮೂಲಕ ಐಎನ್‌ಎಸ್ ವಿಕ್ರಾಂತ್ (INS Vikrant) ಹಾಗೂ ಇತರ ಯುದ್ಧನೌಕೆಯ ಮಾಹಿತಿ ಪಡೆಯಲು ಯತ್ನ ನಡೆಸುತ್ತಿರುವುದು ಉನ್ನತ ಮೂಲಗಳಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಯುರೋಪಿಯನ್ ದೇಶಗಳಿಂದ ಪಾಕ್‌ಗೆ ಶಾಕ್ – ಪಾಕಿಸ್ತಾನ ವಾಯು ಪ್ರದೇಶದಲ್ಲಿ ವಿಮಾನ ಹಾರಾಟಕ್ಕೆ ಹಿಂದೇಟು
ಕಾರವಾರ (Karwar) ಹಾಗೂ ವಿಶಾಖಪಟ್ಟಣಂ ನಲ್ಲಿ ಕೆಲಸ ಮಾಡುವ ಇಬ್ಬರು ನೌಕಾದಳದ ಸಿಬ್ಬಂದಿಗೆ ಪಾಕಿಸ್ತಾನದ ಏಜೆಂಟರು (Pakistan Agent) ಕರೆ ಮಾಡಿ ತಾವು ನೌಕಾದಳದ ಅಧಿಕಾರಿಗಳು ಎಂದು ಹೇಳಿ ಐಎನ್‌ಎಸ್ ವಿಕ್ರಾಂತ್, ಐಎನ್‌ಎಸ್ ವಿಕ್ರಮಾದಿತ್ಯ, ಐಎನ್‌ಎಸ್ ಸುಭದ್ರ ಮುಂತಾದವುಗಳ ಮಾಹಿತಿ ಪಡೆಯಲು ಯತ್ನಿಸಿದ್ದಾರೆ. ಈ ಬಗ್ಗೆ ನೌಕಾದಳದ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅರ್ಜೆಂಟೀನಾದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ
ಇನ್ನೂ ಕೆಲ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಲು ಸಹ ಪ್ರಯತ್ನ ಪಟ್ಟಿರುವುದು ಬೆಳಕಿಗೆ ಬಂದಿದೆ. ಎಚ್ಚೆತ್ತ ಅಧಿಕಾರಿಗಳು ನೌಕಾದಳದ ಯಾವ ಮಾಹಿತಿಯನ್ನೂ ನೀಡದಂತೆ ಸಂಬಂಧಪಟ್ಟ ನೌಕಾ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಈ ಬಗ್ಗೆ ಕಾರವಾರದ ನೌಕಾದಳದ ಅಧಿಕಾರಿಗಳ ಗ್ರೂಪ್‌ನಲ್ಲಿ ಸಂದೇಶ ಹಾಕಿದ್ದು ಎಚ್ಚರಿಕೆಯಿಂದ ಇರಲು ತಿಳಿಸಲಾಗಿದೆ.
2024ರ ಆಗಸ್ಟ್‌ನಲ್ಲಿ ಹಣಕ್ಕಾಗಿ ಕದಂಬ ನೌಕಾನೆಲೆಯ ಹಾಗೂ ವಿಕ್ರಮಾಧಿತ್ಯ ನೌಕೆಯ ಮಾಹಿತಿ ಹಾಗೂ ಫೋಟೋ ಹಂಚಿಕೊಂಡಿದ್ದ ಕಾರವಾರ ತಾಲೂಕಿನ ತೋಡೂರು ಗ್ರಾಮದ ಸುನೀಲ್ ನಾಯ್ಕ್, ಮುದ್ಗಾ ಗ್ರಾಮದ ವೇತನ್ ರಂಡೇಲ್ ಮತ್ತು ಹಳವಳ್ಳಿ ಗ್ರಾಮದ ಅಕ್ಷಯ್ ರವಿ ನಾಯ್ಕ್ ಎಂಬ ಮೂರು ಜನರನ್ನು ಎನ್‌ಐಎ ಬಂಧಿಸಿತ್ತು. ಇದನ್ನೂ ಓದಿ: ವಿದೇಶಿ ಕಂಪನಿಗಳಿಂದಲೂ ಶಾಕ್ – ಭಾರತಕ್ಕೆ ಬಿಸಿ ಮುಟ್ಟಿಸಲು ಹೋಗಿ ಕೈ ಸುಟ್ಟುಕೊಂಡ ಪಾಕ್!
ಈ ಘಟನೆ ನಂತರ ಕದಂಬ ನೌಕಾನೆಲೆಯ ವ್ಯಾಪ್ತಿಯೊಳಗೆ ಮೊಬೈಲ್ ನನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ.