ಧಾರವಾಡ: ಸಚಿವ ಸಿ.ಸಿ. ಪಾಟೀಲ್ ಗುತ್ತಿಗೆದಾರರ ಸಂಘವನ್ನು ಒಡೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಕಿಡಿಕಾರಿದ್ದಾರೆ.
Advertisement
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರೋ ನಮ್ಮ ಸಂಘಟನೆ ಬಿಟ್ಟು ಹೋಗಿ ತಮ್ಮ ಸ್ವಂತಕ್ಕೊಸ್ಕರ ಸಂಘಟನೆ ಮಾಡಿದ್ದಾರೆ. ಅಂಥವರನ್ನು ಕರೆದು ಸಿ.ಸಿ. ಪಾಟೀಲ್ ಮಾತನಾಡಿದ್ದಾರೆ. ಸಚಿವರಿದ್ದವರು ಇಷ್ಟು ಕೆಳಗೆ ಇಳಿಯಬಾರದು. ಅವರು ಒಳ್ಳೆಯ ಮಂತ್ರಿ, ನಾವು ಕೂಡಾ ಅವರನ್ನು ಭೇಟಿ ಮಾಡಿದ್ದು, ಚೆನ್ನಾಗಿ ಮಾತನಾಡಿದ್ದಾರೆ. ಆದರೆ ಕೆಲ ಸುಳ್ಳು ಸಹ ಹೇಳಿದ್ದಾರೆ. ನಾವು ಸಂಘದಲ್ಲಿ ಇದ್ದು ಪತ್ರ ಬರೆಯುತ್ತೆವೆ. ಆದರೆ ಸಚಿವರು ಈ ರೀತಿ ನಮ್ಮನ್ನು ಪ್ರತ್ಯೇಕ ಮಾಡಬೇಡಿ ಎಂದು ಸಿಡಿದರು. ಇದನ್ನೂ ಓದಿ: ಸುವರ್ಣಸೌಧಕ್ಕೆ ಮಾಧ್ಯಮಗಳ ನಿರ್ಬಂಧ ಸಂವಿಧಾನದ ಒಂದು ಕಾಲು ಮುರಿಯುವ ಪ್ರಯತ್ನದಂತೆ: ಎಚ್‍ಡಿಕೆ
Advertisement
Advertisement
ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ನಾವು ಯಾವ ಪಕ್ಷಕ್ಕೆ ಸೇರಿಲ್ಲ. ನಮ್ಮದು ಒಂದೇ ಕುಟುಂಬ. ಆದರೆ ನಮ್ಮ ಸಂಘಟನೆ ಒಡೆಯಲು ಸಚಿವ ಸಿ ಸಿ ಪಾಟೀಲ್ ಪ್ರಯತ್ನ ಮಾಡುತಿದ್ದಾರೆ. ಅವರು ಉತ್ತರ ಕರ್ನಾಟಕ ಅಸೋಸಿಯೇಷನ್ ಕರೆದು ಮಾತಾಡಿದ್ದು ನಾಚಿಕೆಗೇಡಿತನ. ಒಬ್ಬ ಸಚಿವ ಆದವರು ಸಂಘಟನೆ ಒಡೆಯುವ ಕೆಲಸ ಮಾಡಬಾರದು. ನಾವು ಅಖಂಡ ಕರ್ನಾಟಕಕ್ಕೆ ಸೇರಿದವರು, ಇದನ್ನು ಯಾಕೆ ಹಾಳು ಮಾಡುತ್ತಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಧಾನಸಭೆ ಕಲಾಪ – ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ‘ಕೈ’ ಪ್ಲಾನ್
Advertisement
ತಮಿಳುನಾಡು, ಕೇರಳ ಹಾಗೂ ಗುಜರಾತ್‍ನಲ್ಲಿ ಪ್ಯಾಕೇಜ್ ಸಿಸ್ಟಂ ಇಲ್ಲ. ಆದರೆ ನಮ್ಮ ಸರ್ಕಾರದಲ್ಲಿ ಮಾತ್ರ ಇದೆ. ಬೊಮ್ಮಾಯಿ ಸಿಎಂ ಆದ ತಕ್ಷಣವೇ ಪತ್ರ ಬರೆದಿದ್ದೇವೆ. ಆದರೆ ಭೇಟಿಗೆ ಅವಕಾಶ ನೀಡಿಲ್ಲ ಎಂದು ಕಿಡಿಕಾರಿದರು.
40% ಕಮಿಷನ್ ಸರ್ಕಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, 2019ರವರೆಗೆ ಶೇ.19ರಷ್ಟು ಕಮಿಷನ್ ಇತ್ತು. ಇತ್ತೀಚೆಗೆ ಅದು ಶೇ.40% ಕಮಿಷನ್ ಗೆ ಏರಿಕೆಯಾಗಿದೆ. ಆಗಿನ ಸಿಎಂ, ಬಿಎಸ್‍ವೈಗೆ ಮನವಿ ಮಾಡಿದ್ದಕ್ಕೆ ಪ್ರತಿಕ್ರಿಯೆ ಬರಲಿಲ್ಲ. ಪ್ರಧಾನಿಗೆ ಕೂಡ ಪತ್ರ ಬರೆದಿದ್ದೇವು. ಆದರೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ರಾಜ್ಯಪಾಲರಿಗೂ ಸಹ ಬರೆದಿದ್ದೇವೆ. ಪ್ರಧಾನಿ ಹಿಂದಿನ ಸರ್ಕಾರಕ್ಕೆ 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಹೇಳುತ್ತಿದ್ದರು. ನಾವು ಈ ಸರ್ಕಾರ 40% ಕಮಿಷನ್ ಎಂದು ಹೇಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ನಮ್ಮ ಬಳಿ ಇದಕ್ಕೆ ದಾಖಲೆಗಳಿವೆ. ನಾವು ಧ್ವನಿ ಎತ್ತದ ಬಳಿಕ ತನಿಖೆ ಎಂದರು. ಆದರೆ 50 ಕೋಟಿ ರೂ. ಮೇಲಿನ ಟೆಂಡರ್ ಮಾತ್ರ ತನಿಖೆ ನಡೆಸಿದ್ದಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ತನಿಖೆ ಮಾಡುತ್ತಿದ್ದಾರೆ. ಅವರು ನಮಗೆ ಯಾವ ರೀತಿ ನ್ಯಾಯ ಕೊಡುತ್ತಾರೆ? ಅವರು ಒಳ್ಳೆ ಅಧಿಕಾರಿ. ಆದರೆ ಅವರ ಪ್ರತಿನಿಧಿಸುವ ಇಲಾಖೆಯ ಸಹ ಸರ್ಕಾರದ ಒಂದು ಭಾಗವಾಗಿದ್ದು, ನಾವು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆಗೆ ಆಗ್ರಹಿಸುತ್ತೇವೆ ಎಂದರು.