ಕೋಲಾರ: ಜಿಲ್ಲೆಯಲ್ಲಿ ಅರಣ್ಯ ಇಲಾಖೆ (Forest Department) ಗೋಡೌನ್ (Godown) ಬೀಗ ಒಡೆದು ಕಳ್ಳತನಕ್ಕೆ (Theft) ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೋಲಾರ (Kolar) ಜಿಲ್ಲೆ ಮುಳಬಾಗಿಲು (Mulabagilu) ತಾಲೂಕು ಕುಮದೇನಹಳ್ಳಿ ಗ್ರಾಮದ ಬಳಿ ಇರುವ ಅರಣ್ಯ ಇಲಾಖೆ ಗೋಡೌನ್ ಬೀಗ ಒಡೆದು ಅದರಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನ ದೋಚಲು ಯತ್ನಿಸಿದ ಹಿನ್ನೆಲೆ, ಆಂದ್ರದ ಮದನಪಲ್ಲಿಯ ಪವನ್ ಹಾಗೂ ಕುರುಡುಮಲೆ ಗೇಟ್‌ನ ಚೇತನ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದಿನ ಆರ್‌ಎಫ್‌ಓ ಜ್ಯೋತಿ ಅವರ ಹೆಸರು ಹೇಳಿಕೊಂಡು ಬಂದು ಬೀಗ ಒಡೆಯಲು ಯತ್ನಿಸಿದ ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಅದಾನಿ ಗ್ರೂಪ್, ಇಸ್ಕಾನ್ ಸಹಯೋಗದಿಂದ ಮಹಾಪ್ರಸಾದ ಸೇವೆ
Advertisement
Advertisement
ಇನ್ನೂ ಅರಣ್ಯ ಇಲಾಖೆಯಿಂದ ವಶಪಡಿಸಿಕೊಂಡಿರುವ ಶ್ರೀಗಂಧ, ರಕ್ತ ಚಂದನ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಸಂಗ್ರಹಿಸಿರುವ ಗೋಡೌನ್ ಇದಾಗಿದ್ದು, ಸ್ಥಳಕ್ಕೆ ಮುಳಬಾಗಿಲು ಆರ್‌ಎಫ್‌ಓ ಶಾಲಿನಿ ಭೇಟಿ ನೀಡಿದ್ದಾರೆ. ಸದ್ಯ ಆರೋಪಿಗಳನ್ನು ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಡಾ. ಶಿವಕುಮಾರ್ ಮಹಾಶಿವಯೋಗಿಗಳ ಜೀವನ ಪಯಣ, ಸೇವೆ ಪ್ರತಿಯೊಬ್ಬರಿಗೂ ಸ್ಫೂರ್ತಿ: ಗೆಹ್ಲೋಟ್
Advertisement