ಬೀದರ್: ತಹಶೀಲ್ದಾರ್‌ಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್‍ಪಿ ಮುಖಂಡ ಸೇರಿ ಐವರು ಆರೋಪಿಗಳನ್ನು ಹುಮ್ನಾಬಾದ್ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮನವಿ ಸ್ವೀಕಾರ ವಿಚಾರದಲ್ಲಿ ತಹಶೀಲ್ದಾರ್ ಪ್ರದೀಪ್ ಕುಮಾರ್ ಹಿರೇಮಠ ಮೇಲೆ ಹಲ್ಲೆ ನಡೆದಿತ್ತು. ಈ ಸಂಬಂಧ ಇದೀಗ ಬಿಎಸ್‍ಪಿ ಮುಖಂಡ ಅಂಕುಶ್ ಗೋಖಲೆ, ಜಮೀಲ್ ಖಾನ್, ರಾಜಕುಮಾರ್ ಶಿಂಧೆ, ದೇವಿಂದ್ರ, ಗೌತಮ್ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ. ಇದನ್ನೂ ಓದಿ: ತಹಶೀಲ್ದಾರ್‌ಗೆ ಕಾಲಿಂದ ಒದ್ದು ಹಲ್ಲೆ- ಬಿಎಸ್‍ಪಿ ಮುಖಂಡನ ವಿರುದ್ಧ FIR ದಾಖಲು
ಮನವಿ ಸ್ವೀಕಾರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರದೀಪ್ ಕುಮಾರ್ ಹಿರೇಮಠಗೆ ಹಲ್ಲೆ ನಡೆಸಿ, ಕಚೇರಿಯ ಚೇರ್‌ಗಳನ್ನು ಧ್ವಂಸ ಮಾಡಿ ತಹಶೀಲ್ದಾರ್‌ಗೆ ಅವಾಚ್ಯ ಶಬ್ದಗಳಿಂದ ನಿಂಧನೆ ಮಾಡಿದ ಘಟನೆ ನಿನ್ನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ನಡೆದಿತ್ತು. ಹಲ್ಲೆಯಾಗುತ್ತಿದ್ದಂತೆ ಪ್ರದೀಪ್ ಕುಮಾರ್ ಹಿರೇಮಠ, ಹುಮ್ನಾಬಾದ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಪ್ರತಿ ದೂರಾಗಿ ಬಿಎಸ್‍ಪಿ ಮುಖಂಡರು ಕೂಡಾ ತಹಶೀಲ್ದಾರ್ ಮೇಲೆ ಜಾತಿ ನಿಂದನೆ ಕೇಸ್ ದಾಖಲಿಸಿದ್ದರು. ಇದನ್ನೂ ಓದಿ: EXCLUSIVE: ಪೊಲೀಸರ ಮುಂದೆ ಡಾ. ಸೌಂದರ್ಯ ಪತಿ ಡಾ. ನೀರಜ್ ಹೇಳಿದ್ದೇನು..?