ಬೆಂಗಳೂರು: ಖಾಸಗಿ ಚಾನೆಲ್ ನ `ನಾಗಿಣಿ’ ಧಾರಾವಾಹಿಯ ಪ್ರಮುಖ ಪಾತ್ರಧಾರಿ ನಟ ದೀಕ್ಷಿತ್ ಶೆಟ್ಟಿ ಅವರ ಮೇಲೆ ಗುರುವಾರ ವಿಜಯನಗರದ ಮಾರುತಿ ಮಂದಿರದ ಬಳಿ ತಡರಾತ್ರಿ ಹಲ್ಲೆಗೆ ಯತ್ನ ನಡೆಸಿದ್ದಾರೆ.
ಪಲ್ಸರ್ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಸೆಲ್ಫೀಗಾಗಿ ದಿಕ್ಷೀತ್ ಕಾರನ್ನು ಹಿಂಬಾಲಿಸಿದ್ದಾರೆ. ದೀಕ್ಷಿತ್ ಸೆಲ್ಫೀ ನೀಡಲು ನಿರಾಕರಿಸಿದ್ದಕ್ಕೆ ಕುಡಿದ ಅಮಲಿನಲ್ಲಿ ನಟನನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ.
ಈ ಸಂಬಂಧ ದೀಕ್ಷಿತ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ಜಾಲ ಬೀಸಿದ್ದಾರೆ.
ಇತ್ತೀಚೆಗೆ ದೀಕ್ಷಿತ್ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ವಿನ್ನರ್ ಆಗಿದ್ದರು.
https://youtu.be/MQUuTAhBuHs