ವಾಷಿಂಗ್ಟನ್: ಅಮೆರಿಕದ (America) ಹೌಸ್ ಆಫ್ ಸ್ಪೀಕರ್ ನ್ಯಾನ್ಸಿ ಪೆಲೋಸಿ (Nancy Pelosi) ಅವರ ಪತಿ (Husband) ಮೇಲೆ ಇತ್ತೀಚೆಗೆ ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದ. ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಪೆಲೋಸಿ, ಇಂತಹ ಆಘಾತಕಾರಿ ಬೆಳವಣಿಗೆ ತನ್ನ ರಾಜಕೀಯ ನಿರ್ಧಾರಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿಕೆ ನೀಡಿದ್ದಾರೆ.
ತನ್ನ ಗಟ್ಟಿ ನಿರ್ಧಾರಗಳಿಗೆ ಹೆಸರುವಾಸಿಯಾಗಿರುವ ಪೆಲೋಸಿ ಇತ್ತೀಚೆಗೆ ತಮ್ಮ ಪತಿಯ ಮೇಲೆ ನಡೆದಿರುವ ಹಲ್ಲೆಯ ಬಳಿಕ ಆಘಾತಕ್ಕೊಳಗಾಗಿದ್ದಾರೆ ಎನ್ನಲಾಗುತ್ತಿದ್ದು, ರಾಜಕೀಯ ಕ್ಷೇತ್ರದಲ್ಲೂ ಹಿಂದೆ ಸರಿಯುವ ಬಗ್ಗೆ ಚರ್ಚೆಯಾಗುತ್ತಿದೆ.
Advertisement
Advertisement
ತನ್ನ ಪತಿಯ ಮೇಲೆ ದಾಳಿ ನಡೆದ ಬಳಿಕ ಮೊದಲ ಬಾರಿ ಮಾತನಾಡಿರುವ ಪೆಲೋಸಿ, ಕೆಲ ದಿನಗಳ ಹಿಂದೆ ನನ್ನ ಪತಿಯ ಮೇಲೆ ನಡೆದಿರುವ ಹಲ್ಲೆ ಮುಂದೆ ನನ್ನ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತವೆ. ನನ್ನ ಪತಿಯ ಮೇಲೆ ನಡೆದಿರುವ ಹಲ್ಲೆಯಿಂದ ದುಃಖಿತಳಾಗಿದ್ದೇನೆ, ದೇಶದ ಬಗ್ಗೆಯೂ ನನಗೆ ದುಃಖವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ತಿಂಗಳಿಗೆ 655 ರೂ. ಪಾವತಿಸಿ ಟ್ವಿಟ್ಟರ್ ಬ್ಲೂಟಿಕ್ ಪಡೆದ ಭಾರತದ ಮೊದಲ ಮಹಿಳೆ
Advertisement
Advertisement
ಅಮೆರಿಕದ ಚುನಾವಣೆ ವಿಚಾರವಾಗಿ ಮಾತನಾಡಿದ ಪೆಲೋಸಿ, ಜನರು ಮತ ಚಲಾಯಿಸಬೇಕೆಂದು ನಾನು ಬಯಸುತ್ತೇನೆ. ಚುನಾವಣೆಯಲ್ಲಿ ಯಾವ ರೀತಿಯ ಫಲಿತಾಂಶ ಬಂದರೂ ನಾನು ಅದನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಓವೈಸಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ