LatestLeading NewsMain PostNational

ಓವೈಸಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ

ಗಾಂಧೀನಗರ: ಗುಜರಾತ್ (Gujarat) ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿನಲ್ಲಿ ಎಐಎಂಐಎಂ ಮುಖ್ಯಸ್ಥ (AIMIM chief) ಅಸಾದುದ್ದೀನ್ ಓವೈಸಿ(Asaduddin Owaisi) ಅವರು ಪ್ರಯಾಣಿಸುತ್ತಿದ್ದ ಕಲ್ಲು ತೂರಾಟ ನಡೆಸಲಾಗಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಎಐಎಂಐಎಂ ವಕ್ತಾರ ವಾರಿಸ್ ಪಠಾಣ್ (Waris Pathan) ಟ್ವೀಟ್ ಮಾಡಿದ್ದು, ರೈಲಿನ ಕಂಪಾರ್ಟ್‍ಮೆಂಟ್‍ನ ಕಿಟಿಕಿಯ ಗಾಜು ಒಡೆದು ಹೋಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಓವೈಸಿ ಪ್ರಯಾಣಿಸುತ್ತಿದ್ದ ಕಂಪಾರ್ಟ್‍ಮೆಂಟ್ ಮೇಲೆ ಅಪರಿಚಿತ ವ್ಯಕ್ತಿ ಕಲ್ಲು ತೂರಾಟ ನಡೆಸಿದ್ದಾನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಎಣ್ಣೆ ಏಟಲ್ಲಿ ಯುವತಿಯರ ಗುದ್ದಾಟ – ಜುಟ್ಟು ಹಿಡಿದು ಒಬ್ಬಳ ಮೇಲೆ ಎರಗಿದ ನಾಲ್ವರು

ಅಸಾದುದ್ದೀನ್ ಓವೈಸಿ, ಪಕ್ಷದ ಗುಜರಾತ್ ರಾಜ್ಯಾಧ್ಯಕ್ಷ ಸಬೀರ್ ಕಬ್ಲಿವಾಲಾ ಮತ್ತು ಪಕ್ಷದ ಇತರ ನಾಯಕರು ಅಹಮದಾಬಾದ್‍ನಿಂದ ಸೂರತ್‍ಗೆ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ನಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದೆ. ಸೂರತ್ ತಲುಪಲು ಸುಮಾರು 25 ಕಿಮೀ ದೂರದಲ್ಲಿದ್ದಾಗ ಘಟನೆ ಸಂಭವಿಸಿದೆ ಎಂದಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯನ್ನ ಮದ್ವೆಯಾಗಲು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಶಿಕ್ಷಕಿ

ಈ ಹಿಂದೆಯೂ ಚುನಾವಣಾ ಪ್ರಚಾರದ ವೇಳೆ ಓವೈಸಿ ಮೇಲೆ ಹಲ್ಲೆ ನಡೆದಿತ್ತು. ಫೆಬ್ರವರಿ 3 ರಂದು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಿಂದ ದೆಹಲಿಗೆ ಹಿಂದಿರುಗುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಬುಲೆಟ್ ಶಾಟ್‍ಗಳನ್ನು ಹಾರಿಸಿದ್ದರು. ಘಟನೆ ನಡೆದಾಗ ಓವೈಸಿ ಅವರ ಕಾರು ರಾಷ್ಟ್ರೀಯ ಹೆದ್ದಾರಿ 24ರ ಹಾಪುರ್-ಗಾಜಿಯಾಬಾದ್ ಮಾರ್ಗದ ಛಿಜರ್ಸಿ ಟೋಲ್ ಪ್ಲಾಜಾ ಬಳಿ ಇತ್ತು.

Live Tv

Leave a Reply

Your email address will not be published. Required fields are marked *

Back to top button