ಹಾಸನ: ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಎಂದು ಆರೋಪಿಸಿ ಚೆಸ್ಕಾಂ ನೌಕರರ ಮೇಲೆ ಯುವಕರು ಹಲ್ಲೆ ನಡೆಸಿರುವ ಘಟನೆ ಹೊಳೆನರಸೀಪುರದ (Holenarasipura) ಕಡವಿನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪ್ರದೀಪ್ ಹಾಗೂ ಕೃಷ್ಣಮೂರ್ತಿ ಹಲ್ಲೆಗೊಳಗಾದ ಚೆಸ್ಕಾಂ ಸಿಬ್ಬಂದಿ. ಶುಕ್ರವಾರ ಸಂಜೆ ಇಬ್ಬರೂ ನೌಕರರು ಕಡವಿನಹೊಸಹಳ್ಳಿ ಗ್ರಾಮಕ್ಕೆ ವಿದ್ಯುತ್ ಲೈನ್ ದುರಸ್ತಿಗೆ ಬಂದು ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಯುವಕರು ಸರಿಯಾಗಿ ಕರೆಂಟ್ ಕೊಡುತ್ತಿಲ್ಲ ಎಂದು ಲೈನ್‍ಮೆನ್‍ಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಗಳ ತೆಗೆದಿದ್ದಾರೆ. ಬಳಿಕ ಇದು ವಿಕೋಪಕ್ಕೆ ತಿರುಗಿದ್ದು, ದೊಣ್ಣೆಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆ ನಡೆಸಿದ ಯುವಕರನ್ನು ಗ್ರಾಮದ ಪುನೀತ್ ಹಾಗೂ ರಾಕೇಶ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಎರಡು ಬೈಕ್‌ಗಳ ನಡುವೆ ಭೀಕರ ಅಪಘಾತ – ಬ್ಯಾಂಕ್ ಉದ್ಯೋಗಿ ಸಾವು
- Advertisement
ಗಾಯಾಳು ಲೈನ್‍ಮೆನ್‍ಗಳನ್ನು ಹೊಳೆನರಸೀಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂಬಂಧ ಸ್ಥಳಕ್ಕೆ ನಗರ ಠಾಣೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಸೋಲಿನ ಬಳಿಕ ದಳಪತಿಗೆ ಶಾಕ್ – ಪುಟ್ಟರಾಜುಗೆ ‘ಕೈ’ ನಾಯಕರಿಂದ ಗಾಳ
- Advertisement
Web Stories